Rashmika Mandanna: ಫೋನ್ ನಲ್ಲಿ ವಿಜಯ್ ದೇವರಕೊಂಡ ಅವರು ಹೇಳಿದ ಆ ಒಂದು ಮಾತಿಗೆ ನಾಚಿ ನೀರಾದ ರಶ್ಮಿಕಾ ಮಂದಣ್ಣ
Rashmika Mandanna Blushes While Speaking To Vijay Devarkonda

advertisement
ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈಗ ಬಹುಭಾಷಾ ನಟಿ ಎಂಬ ಪ್ರಖ್ಯಾತಿಯನ್ನು ಪಡೆದಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಎಲ್ಲಿ ಹೋದರು ಏನು ಮಾಡಿದರೂ ಸುದ್ದಿಯಾಗುವುದು ಇತ್ತೀಚಿನ ಬೆಳವಣಿಗೆ ಆಗಿದೆ. ಅದೇ ರೀತಿ ರಶ್ಮಿಕಾ ಮಂದಣ್ಣ ಜೊತೆಗೆ ತಳುಕು ಹಾಕುವ ಇನ್ನೊಂದು ಹೆಸರೆಂದರೆ ಅದು ವಿಜಯ್ ದೇವರಕೊಂಡ. ಇವರಿಬ್ಬರ ಕಾಂಬಿನೇಶನ್ ನಲ್ಲಿ ಮೂಡಿ ಬಂದ ಮೊದಲ ಸಿನೆಮಾ ಎಂದರೆ ಗೀತಾ ಗೋವಿಂದಂ ಸಿನೆಮಾ.
ಡಬಲ್ ಸಿನೆಮಾ ಮೋಡಿ ಮಾಡಿತ್ತು
ಈ ಜೋಡಿ ಮೊದಲ ಸಿನೆಮಾದಲ್ಲಿ ಹಿಟ್ ಪೇರ್ ಆಗಿತ್ತು ಈ ಮೂಲಕ ಇವರು ನಿಜ ಜೀವನದಲ್ಲಿಯೂ ಪ್ರೇಮಿಗಳು ಎಂದೇ ಹೇಳಲಾಗುತ್ತಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಕೆಲವೊಂದು ಊಹೆ ಕೂಡ ಹುಟ್ಟಿಕೊಂಡಿತು. ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಸಂಬಂಧ ಮುರಿದುಕೊಂಡ ಬಳಿಕ ರಶ್ಮಿಕಾ ಅವರು ಸಿನೆಮಾ, ಕೆರಿಯರ್ ಎಂದು ಬ್ಯುಸಿ ಆಗುತ್ತಿದ್ದರು. ಈ ನಡುವೆ ಅಲ್ಲಲ್ಲಿ ವಿಜಯ್ ಜೊತೆ ರಶ್ಮಿಕಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಡಿಯರ್ ಕಾಮ್ರೇಡ್ ಸಿನೆಮಾ ಮಾಡುವ ಮೂಲಕ ಈ ಜೋಡಿ ಪಕ್ಕಾ ಲವರ್ಸ್ ಎಂದು ಈಗಲೂ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ಎರಡು ಸಿನೆಮಾ ಮೂಲಕ ಈ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡಿತ್ತು.
ಹೊಸ ಸಿನೆಮಾ ಪ್ರೋಮೊ
ಇಷ್ಟೆಲ್ಲ ರೂಮರ್ಸ್ ಇದ್ದರೂ ರಶ್ಮಿಕಾ ಅಥವಾ ವಿಜಯ್ ದೇವರಕೊಂಡ (Vijay Devarkonda) ಈ ಬಗ್ಗೆ ಯಾವುದೇ ವಿಧವಾದ ಸ್ಪಷ್ಟನೆ ನೀಡಲಿಲ್ಲ. ಆದರೂ ಸಿನಿ ಜರ್ನಿಯಲ್ಲಿ ಇವರ ಬಗ್ಗೆ ಪಿಸು ನುಡಿಗಳು ಹಾಗೇ ಉಳಿದುಕೊಂಡಿದೆ. ಇತ್ತೀಚೆಗಷ್ಟೇ ಬಾಲಿವುಡ್ ನ ರಣಭೀರ್ ಕಪೂರ್ ಜೊತೆ ರಶ್ಮಿಕಾ ಅವರು ಅನಿಮಲ್ ಸಿನೆಮಾ ಮಾಡಿದ್ದು ಇದು ಇನ್ನಷ್ಟೇ ತೆರೆಕಾಣಬೇಕಿದೆ. ಇದೇ ಡಿಸೆಂಬರ್ 1ರಂದು ರಿಲೀಸ್ ಆಗಲಿರುವ ಈ ಸಿನೆಮಾದ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದ್ದು, ನಂದಮೋರಿ ಬಾಲಕೃಷ್ಣ ಅವರು ರಶ್ಮಿಕಾ ಅವರ ಬಗ್ಗೆ ಒಂದು ಕುತೂಹಲ ಭರಿತ ಮಾಹಿತಿ ಹೊರಹಾಕಿದ್ದಾರೆ.
advertisement
ಯಾವುದು ಈ ಕಾರ್ಯಕ್ರಮ
ಟಾಲಿವುಡ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ(Sandeep Reddy Vanga) ಅವರು ಈ ಅನಿಮಲ್ ಸಿನೆಮಾವನ್ನು ನಿರ್ದೇಶನ ಮಾಡಿದ್ದು ರಶ್ಮಿಕಾ, ರಣಬೀರ್ ಹಾಗೂ ಸಂದೀಪ್ ಮೂವರು ಒಟ್ಟಾಗಿ ಬಾಲಕೃಷ್ಣ ಅವರ ಸಾರಥ್ಯದ ಅನ್ ಸ್ಟಾಪೆಬಲ್ ವಿತ್ ಎನ್ ಬಿಕೆ (Unstoppable With NBK) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ಪ್ರಮೋಶನ್ ಕಾರ್ಯಕ್ರಮದಲ್ಲಿ ರಶ್ಮಿಕಾ ಅವರಿಗೆ ಬಾಲಯ್ಯ ಅವರು ವಿಜಯ್ ಅವರಿಗೆ ಕಾಲ್ ಮಾಡುವಂತೆ ಹೇಳಿದ್ದಾರೆ ಬಳಿಕ ಸ್ಪೀಕರ್ ಇಟ್ಟಾಗ ವಿಜಯ್ ಅವರು ವಾಟ್ಸ್ ಆ್ಯಪ್ ಎಂದಿದ್ದಾರೆ. ಅದನ್ನು ಕೇಳಿ ರಶ್ಮಿಕಾ ಮುಗುಳ್ನಗೆ ಬೀರಿದರೆ ಉಳಿದವರಿಗೆ ಓಹೋ ಏನೊ ಇದೆ ಎಂಬ ಅನುಮಾನ ಶುರು ಆಗಿದೆ.
ಲವ್ ಯೂ ರಶ್ಮಿಕಾ
ಈ ಸನ್ನಿವೇಶದಲ್ಲಿ ಎಲ್ಲರೂ ರಶ್ಮಿಕಾ ಅವರಿಗೆ ಕಾಲು ಎಳೆಯುತ್ತಿದ್ದರೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೇಡ್ ಸಿನೆಮಾದ ಹಾಡು ಬ್ಯಾಗ್ರೌಂಡ್ ನಲ್ಲಿ ಪ್ಲೇ ಆಗಿದೆ. ಅದೇ ಕಾಲ್ ನಲ್ಲಿ ರಶ್ಮಿಕಾ ಅವರು ಇರಬೇಕಾದರೆ ಬಾಲಯ್ಯ ಅವರು ಸಂದೀಪ್ ಬಳಿ ಬಂದು ಜೋರಾಗಿ ಐ ಲವ್ ಯು ರಶ್ಮಿಕಾ ಎಂದಿದ್ದಾರೆ. ಸದ್ಯ ಇದಿಷ್ಟು ಯೂಟ್ಯೂಬ್ ಪ್ರೋಮೊ ತರ ಬಿಟ್ಟಿದ್ದು ಕಾರ್ಯಕ್ರಮದ ಕುತೂಹಲ ಹೆಚ್ಚಾಗುತ್ತಿದೆ. ಈ ಮೂಲಕ ಈ ಜೋಡಿ ನಡುವೆ ಪ್ರೀತಿ ಸಂಬಂಧ ಇದೆ ಎಂಬ ಮಾತಿಗೆ ಪುಷ್ಟಿ ಸಿಕ್ಕಂತೆ ಈ ಕಾರ್ಯಕ್ರಮದ ಪ್ರೋಮೊದಲ್ಲಿ ಕಾಣಬಹುದು.
Advertisement