Karnataka Times
Trending Stories, Viral News, Gossips & Everything in Kannada

Atal Pension Yojana: ಈ ಯೋಜನೆಯಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗಲಿದೆ 5 ಸಾವಿರ ರೂ ಹಣ

advertisement

ಇಂದು ಹಣ ತುಂಬಾ ಪ್ರಾಮುಖ್ಯ ಸ್ಥಾನ ಪಡೆದಿದೆ. ಹಾಗಾಗಿ ಚೆನ್ನಾಗಿ ಕೆಲಸ ಮಾಡುತ್ತಿರುವಾಗಲೇ ಸಾಕಷ್ಟು ಹಣ ಸಂಗ್ರಹ ಮಾಡಿ ನಿವೃತ್ತಿ ಅವಧಿಯಲ್ಲಿ ಆ ಹಣ ನಮ್ಮ ಉಪಯೋಗಕ್ಕೆ ಬರುವಂತೆ ನೋಡಿಕೊಳ್ಳುವುದು ಬುದ್ಧಿವಂತಿಕೆ ಎನ್ನಬಹುದು. ಪ್ರತಿಯೊಂದು ಅಗತ್ಯಕ್ಕೂ ನಮ್ಮ ಅವಶ್ಯಕತೆಗೆ ಬಹಳ ಉಪಯುಕ್ತ ಆಗುವ ಯೋಜನೆಗಳು ಕೇಂದ್ರ ಸರಕಾರದಿಂದ ಚಿರಪರಿಚಿತವಾಗಿದ್ದು ಅನೇಕರಿಗೆ ಕೆಲವೊಂದು ಯೋಜನೆ ಬಗ್ಗೆ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಹೇಳಬಹುದು.

ಆರ್ಥಿಕ ಸ್ವಾತಂತ್ರ್ಯ:

ಕೇಂದ್ರ (Centre) ಮತ್ತು ರಾಜ್ಯ (State) ಸರಕಾರದಲ್ಲಿ ಅನೇಕವಿಧವಾದ ಪಿಂಚಣಿ ಯೋಜನೆ (Atal Pension Scheme) ಗಳಿದ್ದು ಇತ್ತೀಚೆಗೆ ಜನರಿಗೆ ಈ ಕುರಿತು ಮನದಟ್ಟು ಮಾಡುವ ಪ್ರಯತ್ನಮಾಡಲಾಗುತ್ತಿದೆ. ನೀವು ದುಡಿಯುವಾಗ ಆರ್ಥಿಕ ಸದೃಢತೆ ಇರುವುದು ಆದರೆ ಬಳಿಕ ಕೂಡ ನಿಮಗೆ ಇದೆ ಆರ್ಥಿಕ ಸ್ವಾತಂತ್ರ್ಯ ಬೇಕೆಂದರೆ ಅದಕ್ಕಾಗಿ ನೀವು ಕೆಲ ಯೋಜನೆಯಲ್ಲಿ ಇಂದಿನಿಂದಲೇ ತೊಡಗಿಕೊಳ್ಳುವುದು ಅವಶ್ಯಕವಾಗಿದೆ. ಇಂತಹದ್ದೇ ಒಂದು ಉಪಯುಕ್ತ ಆಗುವ ಯೋಜನೆಯೂ ದಂಪತಿಗೆ ತಿಂಗಳಿಗೆ ಮಾಸಿಕ ಐದು ಸಾವಿರ ರೂಪಾಯಿ ಪಿಂಚಣಿ (Pension) ನೀಡಲಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧಿಕ ಲಾಭ ಇರುವ ಯೋಜನೆ:

advertisement

ಈ ಯೋಜನೆ ಹೆಸರು ಅಟಲ್ ಪಿಂಚಣಿ (Atal Pension Yojana) ಎಂದು. ಇದು ಬಹಳ ಹಿಂದಿನಿಂದಲೂ ಕೂಡ ಪ್ರಾಮುಖ್ಯತೆ ಪಡೆಯುತ್ತಿದೆ. ಕೇಂದ್ರದಿಂದ ಪರಿಚಿತವಾದ ಈ ಯೋಜನೆಗೆ ನೀವು ಹೂಡಿಕೆ ಮಾಡಿದರೆ ಉತ್ತಮ ಲಾಭ ಸಹಿತ ನಿಮಗೆ ಸಿಗಲಿದೆ. ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಲು 18 ವರ್ಷದ ಮೇಲೆ ಹಾಗೂ 40 ವರ್ಷದ ಒಳಗಿನವರು ಅರ್ಹರಾಗಿರುತ್ತಾರೆ. ಇಲ್ಲಿ ಹೂಡಿಕೆ ಮೊತ್ತ ಎನ್ನುವುದು ವಿಭಿನ್ನವಾಗಿ ಇರಲಿದೆ. 18 ವರ್ಷಕ್ಕೆ ಹೂಡಿಕೆ ಮಾಡಿದರೆ ಹೂಡಿಕೆ ಮೊತ್ತ ಕಡಿಮೆ ಆಗಲಿದೆ. ತಿಂಗಳಿಗೆ ಈ ಮೊತ್ತ ಖಡಿತವಾಗಲಿದೆ.

ಮಾಸಿಕ 5 ಸಾವಿರ ರೂಪಾಯಿ:

18 ವರ್ಷಕ್ಕೆ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ತಿಂಗಳಿಗೆ 210 ರೂಪಾಯಿನಂತೆ ಹೂಡಿಕೆಯಾಗಲಿದೆ. ಅದೇ ರೀತಿ ದಂಪತಿಗಳು ಈ ಯೋಜನೆಗೆ ಒಂದೇ ಅವಧಿಗೆ ಹೂಡಿಕೆ ಮಾಡಿದರೆ ಅರವತ್ತು ವರ್ಷದ ಬಳಿಕ ಇಬ್ಬರೂ ಈ ಯೋಜನೆಗೆ ಅರ್ಹ ಸ್ಥಾನ ಪಡೆದಿರುತ್ತಾರೆ. ಈ ಮೂಲಕ ನಿವೃತ್ತಿಯ ಅವಧಿಯಲ್ಲಿ ತಿಂಗಳಿಗೆ 5 ಸಾವಿರ ರೂಪಾಯಿ ವರೆಗೆ ನಿಮಗೆ ಪಿಂಚಣಿ ಸಿಗಲಿದೆ.

ಉಪಯೋಗ ಏನು?

  • ಇದೊಂದು ಸ್ವ ನಿರ್ಧಾರದ ಪಿಂಚಣಿ ಆಗುವ ಕಾರಣ ನೀವು ಕೆಲಸದಲ್ಲಿ ಪಿಂಚಣಿ ಯೋಜನೆಗೆ ಅವಕಾಶ ಪಡೆಯದಿದ್ದರೂ ನಿವೃತ್ತಿ ಬಳಿಕ ಈ ಯೋಜನೆ (Atal Pension Yojana) ಮೂಲಕ ಮಾಸಿಕ 5 ಸಾವಿರ ಪಿಂಚಣಿ ಪಡೆಯಬಹುದು.
  • ನೀವು ಯಾವುದೇ ರೀತಿ ಹಣ ಕಟ್ಟುವ ಕ್ಯೂ ನಿಲ್ಲುವ ಅಗತ್ಯವಿಲ್ಲ ಪ್ರತೀ ತಿಂಗಳು ಪಿಂಚಣಿ ಹಣ ಖಡಿತವಾಗಿರುವ ಕಾರಣ ಸುಲಭ ವಿಧಾನವಾಗಿದೆ.
  • ನಿಮ್ಮ ನಿವೃತ್ತಿ ಬದುಕಿಗೂ ಆರ್ಥಿಕ ಸ್ವಾತಂತ್ರ್ಯ ಪಡೆಯಲು ಈ ಯೋಜನೆ ನಿಮಗೆ ಬಹಳ ಸಹಕಾರಿ ಆಗಲಿದೆ.

advertisement

Leave A Reply

Your email address will not be published.