World Cup: ಮುಂದಿನ ಕ್ರಿಕೆಟ್ ವಿಶ್ವಕಪ್ ನಡೆಯುವ ಸ್ಥಳ, ದಿನಾಂಕ ಬಹಿರಂಗ

advertisement
ವಿಶ್ವಕಪ್ ಬಹುತೇಕ ರಾಷ್ಟ್ರಗಳ ಹಲವು ವರ್ಷದ ಕನಸ್ಸು ಎನ್ನಬಹುದು. ಈ ಬಾರಿ ಭಾರತ ಅಂತೀಮ ಹಂತದಲ್ಲಿ ಸಹ ಜಯಗಳಿಸಿ ಖಂಡಿತಾ ಕಪ್ ನಮ್ಮದೇ ಅಗಲಿದೆ ಎಂದು ಸಹಸ್ರಾರು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ವಿಚಾರದಲ್ಲಿ ಕಾತುರರಾಗಿದ್ದರು , ಆದರೆ ಆಸ್ಟ್ರೇಲಿಯಾ (Australia) ಭಾರತ (India) ವನ್ನು ಸೋಲಿಸಿ ವಿಶ್ವಕಪ್ (World Cup) ಅನ್ನು ತನ್ನ ತೆಕ್ಕೆಗೆ ಸೇರಿಸಿದೆ. ಈ ಮೂಲಕ ಕಳೆದ 10 ಪಂದ್ಯವನ್ನು ಸತತವಾಗಿ ಗೆದ್ದ ಭಾರತ 11 ಪಂದ್ಯದಲ್ಲಿ ಸೋತು ಶರಣಾಗಿದ್ದು ಮಾತ್ರ ವಿಪರ್ಯಾಸ ಎನ್ನಬಹುದು. ಮುಂದಿನ ವಿಶ್ವಕಪ್ ನಲ್ಲಾದರೂ ಭಾರತ ಗೆಲ್ಲಬೇಕು ಎಂದು ಕಾಯುವ ಜನರು ಅದು ಯಾವಾಗ ಎಂದು ಎದುರು ಯೋಚಿಸುತ್ತಿದ್ದರೆ.
ಕನಸು ಭಗ್ನವಾದ ಕ್ಷಣ:
ಹತ್ತು ಪಂದ್ಯ ಗೆದ್ದು ಒಂದು ಕೊನೆ ಪಂದ್ಯ ಸೋತಿದ್ದು ಅದರಲ್ಲಿಯೂ ತಾಯ್ನಾಡಿನಲ್ಲಿ ಸೋಲು ಅನುಭವಿಸಿದ್ದು ಮಾತ್ರ ಭಾರತೀಯರಿಗೆ ತೀವ್ರ ನೋವು ತಂದ ವಿಚಾರವಾಗಿದೆ. ಫೈನಲ್ ಸಮೀಪ ಬರುತ್ತಲೇ ಈ ಸಲ ಕಪ್ ನಮ್ಮದೇ ಅನ್ನುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ನಿರೀಕ್ಷೆ, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಕನಸ್ಸು, ನಂಬಿಕೆಯೆಲ್ಲ ರವಿವಾರ ರಾತ್ರಿ ಅಹ್ಮದಾಬಾದ್ ಸ್ಟೇಡಿಯಂನಲ್ಲಿ (Ahmedabad Stadium) ಭಗ್ನವಾಗಿ ನುಚ್ಚು ನೂರಾಗಿದೆ.
advertisement
ವಿಶ್ವಕಪ್ ಯಾವಾಗ ಇರಲಿದೆ:
ವಿಶ್ವಕಪ್ ಯಾವಾಗ ಎಂದರೆ ಇನ್ನು ನಾಲ್ಕು ವರ್ಷದ ಬಳಿಕ ಎನ್ನಬಹುದು. ಮುಂದಿನ 14ನೇ ಆವೃತ್ತಿ 2027ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನ ಮುಂದಾಳತ್ವದಲ್ಲಿ ದಕ್ಷಿಣ ಆಫ್ರಿಕಾ (South Africa), ನಮೀಬಿಯಾ (Namibia), ಜಿಬಾಂಬ್ವೆ (Zimbabwe) ಯಲ್ಲಿ 2027ನೇ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಯಲಿದೆ. ICC, ODI ಶ್ರೇಯಾಂಕದ ಮೂಲಕ ಎಂಟು ತಂಡ ನೇರ ಸ್ಥಾನ ಪಡೆಯಲಿದ್ದು ನಮೀಬಿಯಾ ಅರ್ಹತಾ ಮಾರ್ಗ ಅನುಸರಿಸಬೇಕಿದೆ.
Advertisement