Karnataka Times
Trending Stories, Viral News, Gossips & Everything in Kannada

Tecno Spark Go: ಸ್ಟೈಲಿಶ್‌ ಲುಕ್‌ ಹಾಗೂ ಜಬರ್ದಸ್ತ್‌ ಫೀಚರ್ಸ್‌ನಿಂದ ಸದ್ದು ಮಾಡುತ್ತಿದೆ ಟೆಕ್ನೋ ಕಂಪನಿಯ ಈ ಫೋನ್.

Tecno Spark Go 2024 Smartphone Features

advertisement

ಸ್ಮಾರ್ಟ್​​ಫೋನ್​ ಖರೀದಿಸ್ಬೇಕಾದ್ರೆ ಹೆಚ್ಚಿನ ಜನರು ಬೆಲೆ ನೋಡುವ ಮೊದಲು ಅದರ ಫೀಚರ್ಸ್​ಗಳನ್ನು ನೋಡಿಕೊಳ್ತಾರೆ. ಅದೇ ರೀತಿ ಕೆಲವರು ಮೊಬೈಲ್​ಗಳ ಡಿಸೈನ್​ಗೆ ಆಕರ್ಷಿತರಾದ್ರೆ ಇನ್ನೂ ಕೆಲವರು ಸ್ಮಾರ್ಟ್​​ಫೋನ್​ಗಳ ಕ್ಯಾಮೆರಾವನ್ನೇ ನೋಡಿ ಖರೀದಿ ಮಾಡ್ತಾರೆ. ಕೆಲವರು ಪ್ರೊಸೆಸರ್ ನೋಡಿ ಮಾರು ಹೋಗ್ತಾರೆ. ಈಗಾಗಲೇ ಬಜೆಟ್ ಸ್ನೇಹಿ ಸ್ಮಾರ್ಟ್​​ಫೋನ್ ಗೆ ಅಂತಲೇ ಟೆಕ್ನೋ ಕಂಪೆನಿ ಹೆಸರುವಾಸಿಯಾಗಿದೆ.

ಸ್ಟೈಲಿಶ್ ಲುಕ್ ಹಾಗೂ ಜಬರ್ದಸ್ತ್ ಫೀಚರ್ಸ್ಗಳಿಂದ ಟೆಕ್ನೋ ಫೋನ್ ಗಳು ಸದ್ದು ಮಾಡುತ್ತಿವೆ. ಈಗಾಗಲೇ ಹಲವು ಆಯ್ಕೆಯ ಫೋನ್ ಗಳಿಂದ ಟ್ರೆಂಡ್ ಸೆಟ್ ಮಾಡಿರುವ ಟೆಕ್ನೋ ಇದೀಗ ಹೊಸ ಟೆಕ್ನೋ ಸ್ಪಾರ್ಕ್ ಗೋ 2024 ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್​​ಫೋನ್ ಯುನಿಸೋಕ್ T606 (Unisoc T606) ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಡ್ಯುಯಲ್-ರಿಯರ್ (Dual Rear) ಕ್ಯಾಮೆರಾ ಸೆಟ್ಅಪ್ ಹೊಂದಿದೆ. ಜೊತೆಗೆ ಸ್ಮಾರ್ಟ್​​ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು, USB ಟೈಪ್-C ಚಾರ್ಜಿಂಗ್ ಪೋರ್ಟ್ ಒಳಗೊಂಡಿದೆ.

ಟೆಕ್ನೋ ಸ್ಪಾರ್ಕ್ ಗೋ 2024 ಡಿಸ್ಪ್ಲೇ ಹೇಗಿದೆ ಗೊತ್ತಾ?

ಮಾರ್ಕೆಟ್ ಅಲ್ಲಿ ಹೊಸ ಟ್ರೆಂಡ್ ಸೆಟ್ಟರ್ ಆಗಿರುವ ಟೆಕ್ನೋ ಸ್ಪಾರ್ಕ್ ಗೋ 2024 (Tecno Spark Go 2024) ಸ್ಮಾರ್ಟ್​​ಫೋನ್ 6.6 ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದ್ದು ಈ ಡಿಸ್ಪ್ಲೇ 720 × 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ (Screen Resolution) ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್ಪ್ಲೇ 90Hz ರಿಫ್ರೆಶ್ ರೇಟ್ (Refresh Rate) ಬೆಂಬಲಿಸಲಿದ್ದು, ಸೆಂಟರ್ಡ್ ಪಂಚ್ ಹೋಲ್ ನಾಚ್ (Center Punch Hole Notch) ವಿನ್ಯಾಸದೊಂದಿಗೆ ಸ್ಟೈಲಿಶ್ ಲುಕ್ ಒಳಗೊಂಡಿದೆ.

ಟೆಕ್ನೋ ಸ್ಪಾರ್ಕ್ ಗೋ 2024ರಲ್ಲಿರುವ ಪ್ರೊಸೆಸರ್ ಯಾವುದು?

advertisement

ಈಗಿನ 5G ಯುಗದಲ್ಲಿ ಎಲ್ಲವೂ ಅಪ್ಡೇಟ್ ಆಗಿರಬೇಕು. ಹೌದು ಅದಕ್ಕೆ ತಕ್ಕಂತೆ ಬಿಡುಗಡೆ ಆಗಿರುವ ಟೆಕ್ನೋ ಸ್ಪಾರ್ಕ್ ಗೋ 2024 ಸ್ಮಾರ್ಟ್​​ಫೋನ್ Mali G57 GPU ಸಪೊರ್ಟ್ ಕೂಡ ಹೊಂದಿವೆ. ಇದು ಆಂಡ್ರಾಯ್ಡ್ 13 ಗೋ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಕೂಡ ಹೊಂದಿದ್ದು ಬೇಕಾದಷ್ಟು ಫೋಟೋ ವೀಡಿಯೊಗಳನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಬಹುದಾಗಿದೆ. ಇದಲ್ಲದೆ 4GB ವಿಸ್ತೃತ RAM ಅನ್ನು ಸಹ ಇದು ಹೊಂದಿದ್ದು, 1TB ಮೆಮೊರಿ ಕಾರ್ಡ್ ಮೂಲಕ ಸ್ಟೋರೇಜ್ ಹೆಚ್ಚಿಸಿಕೊಳ್ಳಬಹುದು.

ಟೆಕ್ನೋ ಸ್ಪಾರ್ಕ್ ಗೋ 2024 ಕ್ಯಾಮೆರಾ ಸೆಟ್ಅಪ್ ಹೇಗಿದೆ?

ಇನ್ನು ಟೆಕ್ನೋ ಸ್ಪಾರ್ಕ್ ಗೋ 2024 ಸ್ಮಾರ್ಟ್​​ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ನೊಂದಿಗೆ AI ಲೆನ್ಸ್ ಮತ್ತು LED ಫ್ಲ್ಯಾಶ್ ನಿಂದ ಕೂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದ್ದು, ಡ್ಯುಯಲ್-ಟೋನ್ LED ಫ್ಲ್ಯಾಷ್ ಕೂಡ ಇದೆ. ಹಾಗಾಗಿ ಅತ್ಯುತ್ತಮ ಟೆಕ್ನಾಲಜಿ ಹಾಗೂ ಬೆಸ್ಟ್ ಕ್ಯಾಮರಾ ಹೊಂದಿರುವ ಫೋನ್ ಇದಾಗಿದೆ.

ಟೆಕ್ನೋ ಸ್ಪಾರ್ಕ್ ಗೋ 2024 ಸ್ಮಾರ್ಟ್​​ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು ಇದು USB ಟೈಪ್-C ಚಾರ್ಜಿಂಗ್ ಪೋರ್ಟ್ ಅನ್ನು ಕೂಡ ಹೊಂದಿವೆ. ಅದು ಕೂಡ ಅಪ್ಡೇಟೆಡ್ ಚಾರ್ಜಿಂಗ್ ಸಿಸ್ಟಮ್ ಆಗಿದೆ. ಇನ್ನು ಕನೆಕ್ಟಿವಿಟಿ (Connectivity) ಆಯ್ಕೆಗಳಲ್ಲಿ ಹಾಟ್ಸ್ಪಾಟ್ (Hotspot), ಬ್ಲೂಟೂತ್ (Bluetooth), ವೈಫೈ (Wi-Fi), ಯುಎಸ್ಬಿ ಸಿ ಪೋರ್ಟ್ (USB C port) ಅನ್ನು ಒಳಗೊಂಡಿರವ ಬೆಸ್ಟ್ ಫೋನ್ ಇದಾಗಿದೆ.

ಟೆಕ್ನೋ ಸ್ಪಾರ್ಕ್ ಗೋ 2024 ತಗೊಳೋದು ಹೇಗೆ?

ಟೆಕ್ನೋ ಸ್ಪಾರ್ಕ್ ಗೋ 2024 ಸ್ಮಾರ್ಟ್​​ಫೋನ್ ಪ್ರಸ್ತುತ ಮಲೇಷ್ಯಾದಲ್ಲಿ ಮಾತ್ರ ಅನಾವರಣಗೊಂಡಿದೆ. ಆದರೆ ಟೆಕ್ನೋ ಕಂಪೆನಿ ಇನ್ನು ಸಹ ಇದರ ಬೆಲೆ ವಿವರಗಳನ್ನು ಎಲ್ಲೆಡೆ ಪ್ರಕಟಿಸಿಲ್ಲ. ಇದು ಭಾರತದಲ್ಲಿಯು ಕೂಡ ಸದ್ಯದಲ್ಲೇ ಬಿಡುಗಡೆ ಆಗುತ್ತದೆ ಎನ್ನಲಾಗುತ್ತಿದೆ. ಹಾಗಾಗಿ ಇನ್ನು ಕೆಲವು ದಿನಗಳಲ್ಲಿ ನಾವು ನೀವೆಲ್ಲರೂ ಖರೀದಿ ಮಾಡಬಹುದಾಗಿದೆ.

advertisement

Leave A Reply

Your email address will not be published.