Karnataka Times
Trending Stories, Viral News, Gossips & Everything in Kannada

Hero Splendor EV: ಭಾರತದಲ್ಲಿ ಸಂಚಲನ ಮೂಡಿಸಲು ಸಿದ್ಧವಾಗಿದೆ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್, ಕಡಿಮೆ ಬೆಲೆ ಹಾಗೂ 250 Km ಮೈಲೇಜ್

Hero Splendor EV Bike Features And Price

advertisement

ಎಲೆಕ್ಟ್ರಿಕ್ ಸ್ಕೂಟರ್ ನಂತೆ ಎಲೆಕ್ಟ್ರಿಕ್ ಬೈಕ್ ಗಳಿಗೆ ಕೂಡ ಈಗ ಭಾರೀ ದೊಡ್ಡ ಮಟ್ಟದ ಬೇಡಿಕೆ ಇದೆ. ಇಂದು ಎಲೆಕ್ಟ್ರಿಕ್ ಬೈಕ್ ಗಳು ಕೂಡ ಅತ್ಯಾಕರ್ಷಕವಾಗಿ ಮೂಡಿ ಬರುತ್ತಿದ್ದು ಇದರ ಉತ್ಪಾದಕ ಕಂಪೆನಿಗಳು ಗ್ರಾಹಕರ ಮನ ಒಲಿಸಲು ಆಗಾಗ ವಿನೂತನ ಮಾದರಿ ಪರಿಚಯಿಸುತ್ತಲೇ ಬಂದಿದೆ. ನಮ್ಮ ದೇಶದಲ್ಲೇ ಅತೀ ದೊಡ್ಡ ಬೈಕ್ ತಯಾರಿಕಾ ಕಂಪೆನಿ ಎಂಬ ಹೆಗ್ಗಳಿಕೆ ಹೊಂದಿರುವ ಹೀರೋ ಮೋಟರ್ಸ್ ಇದೀಗ ಹೀರೋ ಎಲೆಕ್ಟ್ರಿಕ್ ನ ವಿನೂತನ ಮಾದರಿ ಪ್ರದರ್ಶಿಸಲು ಮುಂದಾಗಿದ್ದು ಇದು ಬೈಕ್ ಪ್ರಿಯರ ಮನ ಗೆಲ್ಲಲಿದೆ.

ಒಮ್ಮೆ ಚಾರ್ಜ್ ಮಾಡಿದರೆ 250km ಆರಾಮ ಸಂಚಾರ.

ಎಲೆಕ್ಟ್ರಿಕ್ ಬೈಕ್ ನಲ್ಲಿ ಅನೇಕ ಮಾಡೆಲ್ ಅನ್ನು ಕಾಣಬಹುದಾಗಿದ್ದು, ಇದರ ಹೆಸರು ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ (Hero Splendor EV). ಒಂದು ಪೂರ್ಣ ಚಾರ್ಜ್ ನಲ್ಲಿ 250km ವರೆಗೆ ಸಂಚಾರ ಮಾಡಬಹುದಾಗಿದೆ. 100Kmph ಗರಿಷ್ಠ ವೇಗದಲ್ಲಿ ಸಾಗಬಹುದಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಾಗುವ ಬೈಕ್ ಗಿಂತ ಇದು ಗಂಟೆಗೆ 15ಕಿಲೋ‌ ಮೀಟರ್ ನಂತೆ ಅಧಿಕ ಕ್ರಮಿಸುವ ಸಾಮರ್ಥ್ಯ ಹೊಂದಿದೆ.

ಅತ್ಯುತ್ತಮ ವ್ಯವಸ್ಥೆ

advertisement

ಇದರಲ್ಲಿ ಮುಂಭಾಗ ಹಾಗೂ ಹಿಂಭಾಗದಲ್ಲಿ ಉತ್ತಮ ಬ್ರೇಕಿಂಗ್ ಸಿಸ್ಟಂ ಅನ್ನು ಪರಿಚಯಿಸಿದೆ. TFT ಇನ್ ಸ್ಟ್ರುಮೆಂಟ್ ಕ್ಲಸ್ಟರ್ ಜೊತೆ ಬ್ಯಾಟರಿ ಕೂಡ ಉತ್ತಮವಾಗಿ ಇರಲಿದೆ. ಇದರ ಡಿಸ್‌ಪ್ಲೇ ಅತ್ಯಾಕರ್ಷಕವಾಗಿದ್ದು ಉತ್ತಮ ಬ್ರೇಕಿಂಗ್ ಸಿಸ್ಟಂ ಇದರಲ್ಲಿ ಇರಲಿದೆ. ಈ ಬೈಕ್ ನ ಒಟ್ಟು ತೂಕ 115 kg ಆಗಿದ್ದು ಅತ್ಯಾಕರ್ಷಕವಾಗಿ ಈ ಬೈಕ್ ರಚಿತವಾಗಿದೆ.

ಬ್ಯಾಟರಿ ಸಾಮರ್ಥ್ಯ

ಹೀರೋ ಕಂಪೆನಿಯು ಈ ಹೊಸ ಎಲೆಕ್ಟ್ರಿಕ್ ಸ್ಪ್ಲೆಂಡರ್ ಗೆ 3000W ಬಿಎಲ್ ಡಿಸಿ ಮೋಟರ್ (BLDC Motor) ಅನ್ನು ಹಾಕಲಾಗುತ್ತದೆ. 4.0KWH ಲಿಥಿಂ ಐಯಾನ್ ಬ್ಯಾಟರಿ ಇಲ್ಲಿನ ಪ್ರಮುಖ ವೈಶಿಷ್ಟ್ಯವಾಗಿದೆ. ಒಂದು ಚಾರ್ಜಿಂಗ್ ನಲ್ಲಿ 250km ವರೆಗೆ ಆರಾಮದಾಯಕವಾಗಿ ಸಂಚಾರ ಮಾಡಬಹುದು. ಕೆಲವೇ ಸೆಕೆಂಡ್ ನಲ್ಲಿ ಹೈ ಸ್ಪೀಡ್ ಮಾಡಲು ಈ ಬೈಕ್ ತುಂಬಾ ಉಪಯುಕ್ತವಾಗಿದೆ.

ಬೆಲೆ ಎಷ್ಟು?

ಹೀರೋ ಕಂಪೆನಿಯ ಎಲೆಕ್ಟ್ರಿಕ್ ಸ್ಪ್ಲೆಂಡರ್ ಬೆಲೆ ವಿಚಾರಕ್ಕೆ ಬಂದರೆ ನಿಮಗೆ ನಿಜಕ್ಕೂ ಆಶ್ಚರ್ಯ ಆಗಬಹುದು.ಇದು ಸಾಮಾನ್ಯ ಬೈಕ್ ನಂತೆ ಲಕ್ಷದಿಂದಲೇ ಬೆಲೆ ಇಡಲಾಗಿದೆ. 1.50ಲಕ್ಷ ರೂಪಾಯಿಯಿಂದ ಇದರ ಆರಂಭಿಕ ಬೆಲೆ ಇದ್ದು ಶೋ ರೂಂ ನಲ್ಲಿ 1.60 ಲಕ್ಷ ರೂಪಾಯಿ ವರೆಗೆ ಮಾರಾಟವಾಗಲಿದೆ.

advertisement

Leave A Reply

Your email address will not be published.