Karnataka Times
Trending Stories, Viral News, Gossips & Everything in Kannada

Rakshak Bullet: ಬಿಗ್ ಬಾಸ್ ಫಿನಾಲೆಯಲ್ಲಿ ಕಿಚ್ಚನ ಪ್ರಶ್ನೆಗೆ ಕ್ಷಮೆ ಕೇಳಿದ ರಕ್ಷಕ್ ಬುಲೆಟ್!

advertisement

ಈ ಬಾರಿಯ ಬಿಗ್ ಬಾಸ್ ಬಹಳಷ್ಟು ಸುದ್ದಿಯಾಗಿತ್ತು.ಇಷ್ಟು ಸೀಸನ್ ಗಳಲ್ಲಿ ಈ ಸೀಸನ್ ಬಹಳಷ್ಟು ‌ಕಾಂಟ್ರವರ್ಸಿ ಯಾಗಿತ್ತು. ಇದೀಗ ಬಿಗ್ ಬಾಸ್‌ ಕನ್ನಡ 10 ಕಾರ್ಯಕ್ರಮದ ಗ್ರ್ಯಾಂಡ್‌ ಫಿನಾಲೆ ನಡೆಯುತ್ತಿದ್ದು ಈ ಬಾರಿಯ ಕಪ್ ಯಾರ ಕೈ ಸೇರಲಿದೆ ಎಂದು ಬಹಳಷ್ಟು ಮಂದಿ ಕಾತುರರಾಗಿದ್ದಾರೆ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ವಿನಯ್, ಕಾರ್ತಿಕ್‌, ಸಂಗೀತಾ, ವರ್ತೂರು ಸಂತೋಷ್, ತುಕಾಲಿ ಸಂತು ಹಾಗೂ ಡ್ರೋನ್ ಪ್ರತಾಪ್ ಕಾಲಿಟ್ಟಿದ್ದು‌ ಮನರಂಜನೆ ನೀಡ್ತಾ ಇದ್ದ ತುಕಾಲಿ ಸಂತೋಷ್ ಫಿನಾಲೆ ಸ್ಪರ್ಧೆಗಳಲ್ಲಿ ಮೊದಲನೆಯದಾಗಿ ಮನೆಯಿಂದ ಆಚೆ ಬಂದಿದ್ದಾರೆ.

ರಕ್ಷಕ್ ಸುದೀಪ್ ಬಗ್ಗೆ ಹೇಳಿಕೆ ನೀಡಿದ್ದರು:

ರಕ್ಷಕ್ (Rakshak Bullet) ಬಿಗ್​ಬಾಸ್ ಮನೆಯಿಂದ ಹೊರ ಹೋದ ಮೇಲೆ ಸಂದರ್ಶನದಲ್ಲಿ ಬಿಗ್ ಬಾಸ್ ವಿರುದ್ದವಾಗಿ ಮಾತನಾಡಿದ್ದಾರೆ.‌ ಸುದೀಪ್ (Kiccha Sudeep) ಬಗ್ಗೆಯು ನೆಗೆಟಿವ್ ಆಗಿ ರಕ್ಷಕ್ ಮಾತನಾಡಿದ್ದರು. ಸುದೀಪ್ ಬಂದ ಕೂಡಲೇ ಒಂದು ರೀತಿ ದೇವರು ರೀತಿ ನೋಡುತ್ತಾರೆ. ಸದಸ್ಯರೆಲ್ಲರೂ ಭಕ್ತರಂತೆ ವರ್ತಿಸುತ್ತಿದ್ದರು. ಆದರೆ ನಾನು ಹಾಗಿರಲಿಲ್ಲ. ಟಾಸ್ಕ್ ಆಡಿದ್ದರೂ ಮನೆಯಲ್ಲಿ ಏನು ಮಾಡಿದ್ದರೂ ಎಂದು ಕೇಳಿದ್ದರು. ಅಷ್ಟು ಮಾಡಿದ್ದರೂ ಇನ್ನೇನೂ ಯಾರನ್ನಾದರೂ ಹೊಡೆದು ಹೊರಗೆ ಬರಬೇಕಿತ್ತು ಎಂದಿದ್ದರು. ಅದರೆ ಸೋಷಿಯಲ್ ಮೀಡಿಯಾದಲ್ಲಿ ರಕ್ಷಕ್ ಬಹಳಷ್ಟು ಟ್ರೋಲ್ ಆಗುವ ಮೂಲಕ ವಿವಾದವಾಗಿತ್ತು. ರಕ್ಷಕ್ ಆ ಬಳಿಕ ಕ್ಷಮೆ ಕೇಳಿದ್ದರು.

ಫಿನಾಲೆಯಲ್ಲಿ ಸುದೀಪ್ ಪ್ರಶ್ನೆ:

 

advertisement

 

ನಿನ್ನೆಯಷ್ಟೆ ಫಿನಾಲೆಗೆ ರಕ್ಷಕ್ (Rakshak Bullet) ಅವರು ಆಗಮಿಸಿದ್ದರು. ಬಿಗ್ ಬಾಸ್ ಫಿನಾಲೆಯಲ್ಲಿ ಹಳೆಯ ಸ್ಪರ್ಧಿಗಳನ್ನು ಮಾತನಾಡಿಸಿ ರಕ್ಷಕ್ ಅವರನ್ನು ‌ಸುದೀಪ್ ಮಾತನಾಡಿಸಿದ್ದರು.‌ ರಕ್ಷಕ್ ಬಳಿ ಬರುತ್ತಿದ್ದಂತೆ, ರಕ್ಷಕ್‌ ಮೊದಲಿಗೆ ನಿಮ್ಮ ಕ್ಷಮೆ ಕೇಳಬೇಕು ನಾನು ಎಂದರು. ಕಿಚ್ಚ ಸುದೀಪ್‌ ಮಾತನಾಡಿಸುತ್ತಿದ್ದಂತೆ ರಕ್ಷಕ್‌ ನರ್ವಸ್‌ ಆದಂತೆ ಉತ್ತರ ಕೊಟ್ಟರು. ನಂತರದಲ್ಲಿ ಹೊರಗಡೆ ಇದ್ದ ವಾಯ್ಸ್ ಈಗೇಕೆ ಇಲ್ಲ‌ ಎಂದದಕ್ಕೆ ನೀವು ಎದುರಿಗೆ ಇದ್ದೀರಲ್ಲ, ಅದಕ್ಕೆ ಗೌರವ ಹೆಚ್ಚು ಎಂದು ರಕ್ಷಕ್ ಹೇಳಿದಾಗ ಇರಲಿ, ನಿಮಗೆ ಯಾರ ಬಗ್ಗೆಯಾದರೂ ಮಾತನಾಡುವ ಅಧಿಕಾರ ಇದೆ. ಮಾತನಾಡಿ, ಸಮಸ್ಯೆಯಿಲ್ಲ. ಕ್ಷಮೆ ಎಲ್ಲ ಕೇಳಬೇಡಿ ಎಂದರು. ಅದಕ್ಕೆ ರಕ್ಷಕ್, ಇಲ್ಲ ಅಣ್ಣ, ನನ್ನ ಉದ್ದೇಶ ಅದಲ್ಲ ಎನ್ನುತ್ತಾರೆ. ಅದಕ್ಕೆ ಸುದೀಪ್ ಪ್ರತ್ಯುತ್ತರ ವಾಗಿ ಇರಲಿ‌ ಬಿಡಿ, ನಿಮ್ಮ ಜೀವನದಲ್ಲಿ ನಿಮಗೆ ಒಳ್ಳೆಯದಾಗಲಿ ಎನ್ನುತ್ತಾರೆ.

ಯಾರು ಆಗ್ತಾರೆ ವಿನ್ನರ್:

ಬಿಗ್ ಬಾಸ್‌ ಕನ್ನಡ 10 ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ವಿನಯ್, ಕಾರ್ತಿಕ್‌, ಸಂಗೀತಾ, ವರ್ತೂರು ಸಂತೋಷ್, ಡ್ರೋನ್ ಪ್ರತಾಪ್ ಕಾಲಿಟ್ಟಿದ್ದಾರೆ. ಇದರಲ್ಲಿ ಟಾಪ್ ಟು ಯಾರಗಬಹುದು ಎಂಬ ಕುತೂಹಲ ಹೆಚ್ಚಿನವರಲ್ಲಿ ಇದ್ದು ಕಾರ್ತಿಕ್ ವಿನ್ನರ್ ಎಂದು ಹೇಳಲಾಗ್ತ ಇದೆ.‌ಒಟ್ಟಿನಲ್ಲಿ ಇದಕ್ಕೆ ಇಂದೇ ಉತ್ತರ ಸಿಗಲಿದೆ.

advertisement

Leave A Reply

Your email address will not be published.