Karnataka Times
Trending Stories, Viral News, Gossips & Everything in Kannada

Student Scholarship: ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಬಂದಿಲ್ಲ ಎಂದರೆ ಹೀಗೆ ಮಾಡಿ

advertisement

ಕಟ್ಟಡ ಕಾರ್ಮಿಕರಿಗೆ ಸರಕಾರದಿಂದ ಈಗಾಗಲೇ ಅನೇಕ ಸೌಲಭ್ಯವನ್ನು ರಾಜ್ತ ಹಾಗೂ ಕೇಂದ್ರ ಸರಕಾರಗಳು ನೀಡುತ್ತಲೇ ಬಂದಿವೆ. ಕಾರ್ಮಿಕರಿಗೆ ಕುಟುಂಬಕ್ಕೆ ಸೌಲಭ್ಯ ನೀಡುವ ಜೊತೆಗೆ ಕಟ್ಟಡ ಕಾರ್ಮಿಕರ ಮಕ್ಕಳಿಗೂ ಕೂಡ ವಿದ್ಯಾರ್ಥಿ ವೇತನ ದೊರೆಯುತ್ತಿದ್ದು ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಈ ಮೊತ್ತ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಹಾಗಿದ್ದರೂ ಅನೇಕ ಕಟ್ಟಡ ಕಾರ್ಮಿಕರಿಗೆ ಈ ಬಗ್ಗೆ ಮಾಹಿತಿ ಲಭ್ಯ ವಾಗಿಲ್ಲ ಎನ್ನಬಹುದು. ನಾವಿಂದು ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡಲಿದ್ದೇವೆ.

ಶಿಕ್ಷಣ ಪ್ರತಿ ಮಗುವಿನ ಹಕ್ಕು ಎಂಬುದು ತಿಳಿದಿದ್ದರೂ ಕಟ್ಟಡ ಕಾರ್ಮಿಕರು ಅನೇಕ ಜನ ವಲಸೆ ಜೀವನಕ್ಕೆ ಒಗ್ಗಿಕೊಂಡಿರುತ್ತಾರೆ ಹಾಗಾಗಿ ಶೈಕ್ಷಣಿಕ ಕಾರ್ಯಚಟುವಟಿಕೆಯಲ್ಲಿ ಹಿಂದೆ ಬೀಳುತ್ತಾರೆ. ಅಂತಹ ಮಕ್ಕಳಿಗೂ ಸಾಮಾಜಿಕ ನ್ಯಾಯ ಒದಗಿಸುವ ಸಲುವಾಗಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅನೇಕ ಯೋಜನೆ ಜಾರಿಗೆ ತರಲಾಗಿದ್ದು ಅದರಲ್ಲಿ ವಿದ್ಯಾರ್ಥಿ ವೇತನ (Student Scholarship) ಸೌಲಭ್ಯ ಕೂಡ ಸೇರಿದೆ. ಅದನ್ನು ಎಲ್ಲಿ ಪಡೆಯಬಹುದು ಇತ್ಯಾದಿ ಮಾಹಿತಿ ಇಲ್ಲಿದೆ.

ಎಲ್ಲಿ ಸಲ್ಲಿಕೆ ಮಾಡಬೇಕು?

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (Construction Workers Welfare Board) ಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ (Student Scholarship) ಕ್ಕೆ ಅವಕಾಶ ನೀಡಲಾಗುತ್ತಿದೆ. ಅದಕ್ಕಾಗಿ ನೀವು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು. ಅದಕ್ಕೆ ಸರಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಭೇಟಿ ನೀಡಿ ಕೆಲವೊಂದು ಅಗತ್ಯ ಮಾಹಿತಿ ಸಲ್ಲಿಕೆ ಮಾಡಬೇಕು. ನೀವೆನಾದರೂ ಈಗಾಗಲೇ ಮೊದಲೇ ಸಲ್ಲಿಕೆ ಮಾಡಿದ್ದರೆ ಆಗ ನೀವು ಆ ಅರ್ಜಿಯ ಪ್ರಸ್ತುತ ಸ್ತಿತಿ ತಿಳಿಯಬೇಕು.

advertisement

ಹೀಗೆ ಮಾಡಿ:

 

Student Scholarship
Image Source: YourStory.com

 

ನೀವು ಅರ್ಜಿ ಸಲ್ಲಿಸಿದ ಬಳಿಕ ನಿಮಗೆ ಒಂದು ರೆಫರೆನ್ಸ್ ನಂಬರ್ (Reference no) ಅನ್ನು ನೀಡಲಾಗುತ್ತದೆ. ಆಗ ನೀವು ಕಟ್ಟಡ ಕಾರ್ಮಿಕರ ಮಕ್ಕಳ ಸ್ಕಾಲರ್ ಶಿಪ್ (Student Scholarship) ನೀಡುವ ಅಧಿಕೃತ ವೆಬ್‌ಸೈಟ್‌ನಲ್ಲಿ ಹೋಗಿ ಪ್ರಸೆಂಟ್ ಸ್ಟೇಟಸ್ ಚೆಕ್ ಮೇಲೆ ಕ್ಲಿಕ್ ಮಾಡಿ. ನಿಮಗೆ ರೆಫರೆನ್ಸ್ ನಂಬರ್ ಸಿಕ್ಕಿದ್ದ ಮೇಲೆ ಅದನ್ನು ಅಲ್ಲಿ ಮೆನ್ಶನ್ ಮಾಡಿ ಚೆಕ್ ಅಂತ ನೀಡಬೇಕು. ನಿಮ್ಮ ಅರ್ಜಿ ಸಲ್ಲಿಕೆ ಸರಿಯಾದರೆ ಪ್ರಸೆಂಟ್ ಆಗಿದೆ ವೈಟಿಂಗ್ ಫಾರ್ ರೆಸ್ಪಾನ್ಸ್ ಅಂದು ಬರಲಿದೆ.

ಒಟ್ಟಾರೆಯಾಗಿ ನಿಮ್ಮ ಎಲ್ಲ ಪ್ರಕ್ರಿಯೆ ಸರಿಯಾದರೆ ನಿಮ್ಮ ಬ್ಯಾಂಕ್ ಖಾತೆಗೆ ಶೀಘ್ರವೇ ಹಣ ಜಮೆ ಆಗಲಿದೆ. ಹಾಗೆಬರದೆ ಇದ್ದರೆ ಸಮಸ್ಯೆ ಏನೆಂದು ತಿಳಿದು ಬಗೆಹರಿಸುವುದು ಅವಶ್ಯಕವಾಗಿದೆ. ಈ ಬಗ್ಗೆ ಚೆಕ್ ಮಾಡಲು ಅಧಿಕೃತ ವೆಬ್‌ಸೈಟ್‌ ಭೇಟಿ ನೀಡಲು ಈ ಲಿಂಕ್ ಬಳಸಿ. 👉 https://kbocwwb.Karnataka.gov.in/sche

advertisement

Leave A Reply

Your email address will not be published.