Karnataka Times
Trending Stories, Viral News, Gossips & Everything in Kannada

Govt Land: ಅಕ್ರಮವಾಗಿ ಸರಕಾರಿ ಜಾಗದ ಒತ್ತುವರಿ ಆದರೆ ಹೇಗೆ ದೂರು ನೀಡಬೇಕು? ಹೊಸ ರೂಲ್ಸ್

advertisement

ನಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಅನೇಕ ಸರಕಾರಿ ಜಾಗ (Govt Land) ಒತ್ತುವರಿ ಮಾಡಿಕೊಂಡು ಸಾರ್ವಜನಿಕರು ಅಕ್ರಮವಾಗಿ ಬಳಸುತ್ತಲಿರುವುದನ್ನು ನಾವು ಕಾಣಬಹುದು. ಆದರೆ ಅಂತಹ ಸಂದರ್ಭದಲ್ಲಿ ಅದು ತಪ್ಪು ಎಂದು ತಿಳಿದಿದ್ದರೂ ಈ ಬಗ್ಗೆ ಯಾರಿಗೆ ದೂರು ನೀಡಬೇಕು ಎಂಬ ಇತ್ಯಾದಿ ಮಾಹಿತಿ ನಮಗೆ ಇರಲಾರದು. ಅಂತಹ ಸಂದರ್ಭದಲ್ಲಿ ಏನು ಮಾಡಬೇಕು? ಎಂಬುದು ಅನೇಕರಿಗೆ ತಿಳಿಯಲಾರದು. ಹಾಗಾಗಿ ನಾವಿಂದು ನೀಡುವ ಈ ಮಾಹಿತಿ ಅನೇಕ ಜನರಿಗೆ ಬಹಳ ಉಪಯುಕ್ತ ಆಗಲಿದೆ ಎಂದು ಹೇಳಬಹುದು.

ಸರಕಾರಿ ಭೂಮಿ(Govt Land) ಆಗುವುದು ಹೇಗೆ?

ಸರಕಾರಿ ಭೂಮಿ (Govt Land) ಆಗಲು ಅನೇಕ ಕಾರಣಗಳನ್ನು ನಾವು ಕಾಣಬಹುದು. ಜಮೀನಿನ ವಂಶಸ್ಥರು ನೂರು ವರ್ಷಕ್ಕಿಂತ ಹಳೆಯ ಜಮೀನಾಗಿದ್ದು ಅದನ್ನು ಕಾನೂನು ಪ್ರಕಾರ ಪಡೆಯದಿದ್ದರೆ ಆಗ ಸರಕಾರಿ ಜಮೀನು ಆಗಿ ಮಾರ್ಪಾಡು ಆಗಲಿದೆ. ಗ್ರಾಮದಲ್ಲಿ ದನ ಕರುಗಳಿಗಾಗಿಯೇ ಸರಕಾರಿ ಜಮೀನ (Govt Land) ನ್ನು ಸಹ ಮೀಸಲಿಡಲಾಗುತ್ತದೆ. ಗೈರಾಳ, ಗೋಮಾಳ, ಪರಂಪೋಕ ಜಮೀನೆಲ್ಲವೂ ಸರಕಾರಿ ಜಮೀನು ಆಗಿರುತ್ತದೆ. ಅಂತಹ ಜಮೀನನ್ನು ಇತ್ತೀಚಿನ ದಿನದಲ್ಲಿ ಅಕ್ರಮವಾಗಿ ಬಳಕೆ ಮಾಡಲಾಗುತ್ತ ಬರಲಾಗಿದೆ.

ದೂರು ಎಲ್ಲಿ ನೀಡಬೇಕು?

 

 

advertisement

ಸರಕಾರಿ ಜಮೀನು (Govt Land) ಅಥವಾ ಭೂಮಿ ಅಕ್ರಮವಾಗಿ ಬಳಕೆ ಆಗುವುದು ಕಂಡುಬಂದರೆ ಮೊದಲಿಗೆ ಕಂದಾಯ ನಿರಕ್ಷಕರನ್ನು ಭೇಟಿ ಮಾಡಿ ದೂರು ನೀಡಬೇಕು. ಆಗ ಅವರು ಈ ಬಗ್ಗೆ ಯಾವುದೇ ಸ್ಪಂದನೆ ನೀಡದಿದ್ದಾಗ ನಿಮ್ಮ ಬಳಿ ಲಭ್ಯ ಇರುವ ಎಲ್ಲ ದಾಖಲಾತಿ ಪಡೆದುಕೊಂಡು ನಿಮ್ಮ ಪ್ರದೇಶದ ತಹಶೀಲ್ದಾರರಿಗೆ ದೂರು ನೀಡಬೇಕು. ಯಾವ ಸ್ಥಳ ಎಷ್ಟು ಜಮೀನು ಕಬಳಿಸಿದ್ದಾರೆ ಎಂದು ತಿಳಿಸಬೇಕು.

ಅರ್ಜಿ ಬರೆಯಬೇಕು?

 

 

ತಹಶೀಲ್ದಾರರಿಗೆ ದೂರು ಸಲ್ಲಿಸುವಾಗ ಅರ್ಜಿ ಸಲ್ಲಿಕೆ ಕಡ್ಡಾಯವಾಗಿದೆ. ಅರ್ಜಿಯಲ್ಲಿ ಲೆಟರ್ ಹೆಡ್ ಫಾರ್ಮೆಟ್ (Letterhead Format) ಇರಬೇಕು. ಎಲ್ಲಿನ ಜಾಗ ಎಂದು ತಿಳಿಸಿ ಅಕ್ರಮವಾಗಿ ಒತ್ತುವರಿಮಾಡಿದ್ದಾರೆ. ಈ ಬಗ್ಗೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ಮಾಡಿದ್ದಾರೆ ಹಾಗಾಗಿ ಒತ್ತುವರಿ ಸ್ಥಳ ಪರಿಶೀಲನೆ ಮಾಡಿ ಗಡಿ ನಿಯಮ ವಿಧಿಸುವಂತೆ ಈ ಮೂಲಕ ಕೋರಿರುವುದಾಗಿ ತಿಳಿಸಿ ಲೆಟರ್ ನಲ್ಲಿ ಬರೆಯಬೇಕು. ಬಳಿಕ 5 ಸಾಕ್ಷಿದಾರರ ಸಹಿ ಸಹ ಹಾಕಬೇಕು. ಇದರ ಜೊತೆಗೆ ನಿಮ್ಮ ಬಳಿ ಲಭ್ಯ ಇರುವ ದಾಖಲೆಗಳು, ಫೋಟೋ, ಸಹಿ ಎಲ್ಲ ಸಲ್ಲಿಕೆ ಮಾಡಬೇಕು.

ಈ ಬಗ್ಗೆ ಗಮನಿಸಿ:

ದೂರು ನೀಡುವಾಗ ಒಗ್ಗಟ್ಟಾಗಿ ದೂರು ನೀಡಬೇಕು ಅಗತ್ಯ ವಿದ್ದರೆ ದೂರಿನ ಒಂದು ಕಾಪಿಯನ್ನು ಜಿಲ್ಲಾಧಿಕಾರಿ ಅವರಿಗೂ ಸಲ್ಲಿಸಿ. ನಿಮ್ಮ ಭೂಮಿ ಗ್ರಾಮ ಠಾಣಾ ವ್ಯಾಪ್ತಿ ಒಳಗಿದ್ದರೆ ಆಗ ತಹಶೀಲ್ದಾರರಿಗೆ ದೂರು ನೀಡಲು ಸಾಧ್ಯವಿಲ್ಲ ಅದರ ಬದಲು ಗ್ರಾಮ ಪಂಚಾಯತ್ ಅಧಿಕಾರಿ PDO ಅವರಿಗೆ ದೂರು ನೀಡಬಹುದು. ಸರಕಾರಿ ಜಮೀನಿನ ಹೊಣೆ ನಮ್ಮ ಹೊಣೆಯಾದ ಕಾರಣ ಅಲ್ಲಿ ಆಗುವ ಅಕ್ರಮ ತಡೆಯುವುದು ಸಹ ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆ.

advertisement

Leave A Reply

Your email address will not be published.