Karnataka Times
Trending Stories, Viral News, Gossips & Everything in Kannada

Student Scholorship: SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿದ್ದವರಿಗೆ ಬೆಳ್ಳಂಬೆಳಗ್ಗೆ ಸಿಹಿಸುದ್ದಿ! ಹೊಸ ಸೂಚನೆ

advertisement

ಇತ್ತೀಚಿನ ದಿನದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶೈಕ್ಷಣಿಕ ಪ್ರಗತಿಗೆ ಅಧಿಕ ಪ್ರಮುಖ್ಯತೆ ನೀಡುತ್ತಲಿದೆ ಎನ್ನಬಹುದು. ಹಾಗಾಗಿ ಮೆರಿಟ್ ಸೀಟ್, ಕಲಿಕಾ ಪರಿಕರ ವಿತರಣೆ ಮಾತ್ರವಲ್ಲದೇ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ವರ್ಗಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾದ ವಿದ್ಯಾರ್ಥಿ ವೇತನ (Student Scholorship)ವನ್ನು ನೀಡಲಾಗುತ್ತ ಬರಲಾಗಿದೆ. ಎಷ್ಟೊ ಸಲ ವಿದ್ಯಾರ್ಥಿ ವೇತನಕ್ಕೆ ಸರಿಯಾದ ಕ್ರಮದ ಮೂಲಕ ಅರ್ಜಿ ಹಾಕಿದ್ದರೂ ಹಣ ಇನ್ನು ಬರಲಾರದು ಆಗ ನಾವು ಹಾಕಿದ್ದ ಅರ್ಜಿ ಸರಿಯಾಗಿದೆಯಾ ಎಂಬ ಅನುಮಾನ ಸಹ ಕಾಡುತ್ತದೆ.

ಯಾವುದು ಈ ಸ್ಕಾಲರ್ ಶಿಪ್ (Student Scholorship): 

ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಪ್ರತಿಭಾವಂತರಿಗೆ ರಾಜ್ಯ ಸರಕಾರದಿಂದ ವಿದ್ಯಾರ್ಥಿ ವೇತನ (Student Scholorship) ನೀಡಲಾಗುತ್ತಿದ್ದು ಇದನ್ನು SSP ಎಂದು ಕರೆಯುತ್ತಾರೆ. SSP ಎಂದರೆ State Scholarship Portal ಎಂದು ವಿಸ್ತ್ರತ ರೂಪ ಪಡೆದಿದೆ. ಇದರಲ್ಲಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಎಂಬ ವಿಭಾಗ ಇರಲಿದೆ. ಇಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಾತಿ , ವರ್ಗ, ಲಿಂಗ ಎಂಬ ತಾರತಮ್ಯ ವಿಲ್ಲದೆ ಎಲ್ಲರಿಗೂ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಇಲ್ಲಿ ವಿದ್ಯಾರ್ಥಿ ವೇತನವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದ್ದು ಅನೇಕರು ಇದರ ಲಾಭ ಪಡೆದಿದ್ದಾರೆ.

Image Source: Japaship

ಇದರ ಪ್ರಾಮುಖ್ಯತೆ ಏನು?

ಈ ಒಂದು ವಿದ್ಯಾರ್ಥಿ ವೇತನವು ಶೈಕ್ಷಣಿಕ ವೆಚ್ಚವನ್ನು ಕಡಿಮೆ ಮಾಡುತ್ತದೆ. ಅಂದರೆ ಬೋಧನ ಶುಲ್ಕ, ಹಾಸ್ಟೆಲ್ ಶುಲ್ಕ ಇತರ ಶುಲ್ಕಗಳಲ್ಲಿ ವಿನಾಯಿತಿ ಹಾಗೂ ರೀಫಂಡ್ ಸಿಸ್ಟಂ ಇರಲಿದೆ. ಕರ್ನಾಟಕದಲ್ಲಿ ಮೂಲ ವಾಸ್ತವ್ಯ ಇರುವ ST, SC, OBc ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಈ ಸ್ಕಾಲರ್ ಶಿಪ್ ಅನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಪ್ರತ್ಯೇಕ 7 ಇಲಾಖೆ ಕಾರ್ಯ ನಿರ್ವಹಿಸಲಿದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

advertisement

ಅನೇಕ ಪ್ರಕಾರಗಳಿವೆ?

ಇದರಲ್ಲಿ ಕೂಡ ಅನೇಕ ಪ್ರಕಾರಗಳನ್ನು ಕಾಣಬಹುದು.

Image Source: Career360
  • ST, SC ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ.
  • ST, SC, OBC ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನ
  • ST, SC, OBC ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ
  • ನ್ಯಾಶನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್ಶಿಪ್.
  • ರಾಜ್ಯ ಮೆರಿಟ್ ವಿದ್ಯಾರ್ಥಿ ವೇತನ
  • ಅಲ್ಪಸಂಖ್ಯಾತರಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ
  • ಅಲ್ಪಸಂಖ್ಯಾತರಿಗೆ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನ

ಹೇಗೆ ನೋಡುವುದು?

ಈ ವರ್ಷದ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿದ್ದವರು ಅದರ ಪ್ರಸ್ತುತ ಸ್ಥತಿ ಅರಿಯಲು ಸರಕಾರದ ಅಧಿಕೃತ ವೆಬ್ ಸೈಟ್ ಭೇಟಿ ಮಾಡಿ. ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ 2023-24 ರ ಸ್ಟೇಟಸ್ ಇಯರ್ ಆಯ್ಕೆ ಮಾಡಿ. ಅದರಲ್ಲಿ ವೀವ್ ಸ್ಟೇಟಸ್ ಎಂದು ಕೊಟ್ಟು ಅದರಲ್ಲಿ ಸಬ್ ಮೀಟ್ ಐಡಿಯಲ್ಲಿ ನಿಮ್ಮ ಸ್ಕಾಲರ್ ಶಿಪ್ ಐಡಿ ಸಂಖ್ಯೆ ಹಾಕಿ. ಅದರಲ್ಲಿ ನಿಮ್ಮ ಅಪ್ಲಿಕೇಶನ್ ಓಪನ್ ಆಗಲಿದ್ದು ಆಧಾರ್ ಮಾಹಿತಿ, ಬ್ಯಾಂಕ್ ಹಾಗೂ ಬ್ರ್ಯಾಂಚ್ ಮಾಹಿತಿ ಹೋಲಿಕೆ ಆಗಿದೆ ಎಂಬುದಕ್ಕೆ ಎಸ್ ಎಂದು ಬರಲಿದೆ. ಹೀಗೆ ಎಲ್ಲ ಸರಿ ಇದೆ ಎಂದು ನೀವು ಚೆಕ್ ಮಾಡಬಹುದು.

advertisement

Leave A Reply

Your email address will not be published.