Karnataka Times
Trending Stories, Viral News, Gossips & Everything in Kannada

Gold: ದುಬೈನಿಂದ ಭಾರತಕ್ಕೆ ಚಿನ್ನ ತರುವವರಿಗೆ ಬೆಳ್ಳಂಬೆಳಗ್ಗೆ ಹೊಸ ನಿಯಮ! ಲಿಮಿಟ್ ಇಷ್ಟು ಮಾತ್ರ

advertisement

ಚಿನ್ನ (Gold) ಇದು ಒಂದು ಲೋಹವಾಗಿದ್ದರೂ ಇದಕ್ಕೆ ಯಾವ ಕಾಲಕ್ಕಾದರೂ ಪ್ರಾಮುಖ್ಯತೆ ಇದ್ದೆ ಇರುತ್ತದೆ. ಆಪತ್ಕಾಲಕ್ಕೆ ಸಹಾಯ ವಾಗುವ ನಿಟ್ಟಿನಲ್ಲಿ ಚಿನ್ನ ಒಂದು ಅತೀ ಪ್ರಮುಖ ವಸ್ತುವಾಗಿ ಮಾರ್ಪಟ್ಟಿದೆ. ಆಭರಣ ಪ್ರಿಯರಾದ ಮಹಿಳೆಯರಿಗೆ ಚಿನ್ನದ ಒಡವೆಗಳೆಂದರೆ ಅದೆಲ್ಲಿಲ್ಲದ ವ್ಯಾಮೋಹ ಇದ್ದೇ ಇರುತ್ತದೆ. ಹೀಗಾಗಿಯೇ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಅಧಿಕ ಬೇಡಿಕೆ ಇದ್ದು ವಿದೇಶದಿಂದ ಕೂಡ ಸಾಕಷ್ಟು ಪ್ರಮಾಣದಲ್ಲಿ ಚಿನ್ನ ಆಮದ್ದಾಗುತ್ತಿದೆ.

ಚಿನ್ನ (Gold) ದ ವಿಚಾರಕ್ಕೆ ದುಬೈ ದೇಶ ಪ್ರಮುಖ ಸ್ಥಾನ ಪಡೆದಿದೆ. ಅಲ್ಲಿ ಕಡಿಮೆ ಬೆಲೆಗೆ ಚಿನ್ನ ಹೇರಳವಾಗಿ ಲಭ್ಯವಾಗುತ್ತಿದ್ದು ಅನೇಕರು ಅಲ್ಲಿಂದ ದೇಶಕ್ಕೆ ಕಳ್ಳ ಸಾಗಾಣಿಕೆ ಮಾಡಿ ಮಾರಾಟ ಮಾಡಲು ಪ್ರಯತ್ನಗಳನ್ನು ಪಡುತ್ತಿದ್ದಾರೆ. ಇಂತಹ ಪ್ರಯತ್ನದಲ್ಲಿ ಅನೇಕರು ಸಿಕ್ಕಿಹಾಕಿಕೊಂಡು ಜೈಲು ಶಿಕ್ಷೆ ಕೂಡ ಅನುಭವಿಸುತ್ತಾರೆ. ಅದೇ ರೀತಿ ಇನ್ನು ಕೆಲವರು ಸರಕಾರದ ನಿಯಮದ ಅನುಸಾರ ಕಾನೂನಿನ ಪ್ರಕಾರವೇ ದುಬೈನಿಂದ ಚಿನ್ನ ತರುತ್ತಾರೆ. ಇದಕ್ಕೆ ಕಾರಣ ಏನು? ಕಾನೂನಿನ ನಿಯಮ ಏನು ಹೇಳುತ್ತೆ? ಎಂಬ ಬಗ್ಗೆ ಪೂರ್ತಿ ವಿವರ ಇಲ್ಲಿದೆ.

Image Source: Sami Asim

ಚಿನ್ನ (Gold) ತರಲು ನಿಯಮ ಹೇಗಿದೆ?

ಭಾರತದಲ್ಲಿ ಚಿನ್ನದ ಸಾಗಾಟ ಮಾರಾಟಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ನೀತಿ ನಿಯಮ ಇದ್ದೇ ಇದೆ‌. ಹೊರಗಿನಿಂದ ಚಿನ್ನ ತರಲು ಸುಂಕ, ಶುಲ್ಕ ವಿಧಿಸುವ ಕಾರಣ ಅದರ ಹೊರತು ಇಂತಿಷ್ಟು ಮಾತ್ರ ತರಬೇಕು ಎಂಬ ನಿಯಮ ಕೂಡ ಇದೆ. CBCI ನಿಯಮ ಕೂಡ ಇದೆ. ಕೇಂದ್ರಿಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಪ್ರಕಾರ ಸುಂಕದ ರಿಯಾಯಿತಿ ದರ 12.5% + ಸಾಮಾಜಿಕ ಕಲ್ಯಾಣ ರ್ಚಾರ್ಜ್ 1.25%+ನಂತೆ ತೆರಿಗೆ ಬರಿಸಬೇಕು ಎಂಬ ನಿಯಮ ಇದೆ. ಈ ನಿಯಮವು ಭಾರತೀಯ ವಾಸಿ ದುಬೈನಲ್ಲಿ ಆರು ತಿಂಗಳಿಗಿಂತ ಅಧಿಕ ಕಾಲ ವಾಸ್ತವ್ಯ ಹೊಂದಿದ್ದರೆ ಅನ್ವಯವಾಗಲಿದೆ.

advertisement

ಚಿನ್ನದ (Gold) ಮೇಲೆ ಕಸ್ಟಂಸ್ ಸುಂಕವಿದೆ?

ಚಿನ್ನವನ್ನು ಭಾರತಕ್ಕೆ ತರಬೇಕಾದರೆ ಇಂತಿಷ್ಟು ಪ್ರಮಾಣ ಕಸ್ಟಂಸ್ ಸುಂಕ (Custom Duty)  ಬರಿಸಬೇಕು. ಹೀಗಾಗಿ ಚಿನ್ನದ ಮೇಲೆ 38.5% ನಷ್ಟು ಕಸ್ಟಮ್ಸ್ ಸುಂಕ ಬೀಳಲಿದೆ. ಅದಾಗಿಯೂ ಓರ್ವ ವ್ಯಕ್ತಿಗೆ ಸುಂಕವೆಲ್ಲ ಬರಿಸಿದ ಮೇಲೆಯೂ 1 kg ಗಿಂತ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವಂತಿಲ್ಲ. ಹೆಚ್ಚುವರಿ ಶುಲ್ಕ ಪಾವತಿ ಮಾಡಲು ಬಯಸಿದ್ದರೂ ಚಿನ್ನದ ಮೌಲ್ಯವು ನಿರ್ದಿಷ್ಟ ಮಿತಿ ಒಳಗೆ ಇರಬೇಕಾಗಿದೆ.

Image Source: India Today

ಎಷ್ಟು ಮಿತಿ ಇದೆ?

ಒಂದು ವರ್ಷಕ್ಕಿಂತ ಅಧಿಕ ಕಾಲ ದುಬೈ ನಲ್ಲಿ ನೆಲೆಸಿದ್ದ ಭಾರತೀಯ ಪ್ರಜೆಗೆ ಅದರಲ್ಲಿ ಪುರುಷರಾಗಿದ್ದರೆ 20ಗ್ರಾಂ ಚಿನ್ನ ಕೊಂಡು ಹೋಗಬಹುದು. ಪುರುಷರಿಗೆ 50,000 ದ ವರೆಗೆ ಮೌಲ್ಯ ಉಳ್ಳ ಚಿನ್ನಕ್ಕೆ ಸುಂಕ ಇರಲಾರದು ಬಳಿಕ 20 ಗ್ರಾಂ ವರೆಗೆ ಖರೀದಿ ಮಾಡಬಹುದು ಅಲ್ಲಿ ಕೂಡ ಕೆಲ ನಿಯಮ ಹೇರಲಾಗಿದೆ. ಮಹಿಳೆಯರಿಗೆ 1ಲಕ್ಷದ ವರೆಗೆ ಖರೀದಿ ಮಾಡಬಹುದು. 40 ಗ್ರಾಂ ವರೆಗೆ ಚಿನ್ನ ತರಲು ಅವಕಾಶ ಇದೆ.

advertisement

Leave A Reply

Your email address will not be published.