Karnataka Times
Trending Stories, Viral News, Gossips & Everything in Kannada

Aadhaar Card: ಬೆಳ್ಳಂಬೆಳಗ್ಗೆ ಆಧಾರ್ ಕಾರ್ಡ್ ವಿಷಯವಾಗಿ ಕೇಂದ್ರ ಸರ್ಕಾರದ ಹೊಸ ನಿರ್ಧಾರ ಪ್ರಕಟ!

advertisement

ಆಧಾರ್‌ ಕಾರ್ಡ್ (Aadhaar Card) ಎನ್ನುವುದು ಭಾರತೀಯ ವಾಸ್ತವ್ಯ ಪುರಾವೆಯಲ್ಲಿ ಪ್ರಮುಖ ದಾಖಲೆಯ ಸಾಲಿನಲ್ಲಿ ಒಂದಾಗಿದೆ. ಇಂದು ಸರಕಾರಿ ಅಥವಾ ಖಾಸಗಿ ಕೆಲಸ ಇರಲಿ ಪ್ರತಿಯೊಂದು ಕ್ಷೇತ್ರದಲ್ಲೂ ಆಧಾರ್ ಕಾರ್ಡ್ ಸಲ್ಲಿಕೆ ಕಡ್ಡಾಯ ಮಾಡಲಾಗುತ್ತಿದೆ. ಆಧಾರ್ ಕಾರ್ಡ್ (Aadhaar Card) ಬಹಳ ಹಳೆಯದ್ದಾಗಿದ್ದು ಅದರಲ್ಲಿ ಫೋಟೋ ವಿಳಾಸ ಇತ್ಯಾದಿ ಬದಲಾಯಿಸಬೇಕಿದ್ದು ಬಾಕಿ ಉಳಿಸಿಕೊಂಡವರಿಗೆ ಇಲ್ಲೊಂದು ಮಹತ್ವದ ಸುದ್ದಿ ಕಾದಿದೆ. ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಬಾಕಿ ಇಟ್ಟವರು ಈ ಸುದ್ದಿ ಪೂರ್ತಿ ಓದಲೇಬೇಕು.

Aadhaar Card ಅಪ್ಡೇಟ್ ಮಾಡಲು ಅನೇಕ ಬಾರಿ ಅವಕಾಶ

ಆಧಾರ್ ಕಾರ್ಡ್ ನಲ್ಲಿ ಫೀಡ್ ಮಾಡಿರುವ ಮಾಹಿತಿ ಅಂದರೆ ಹೆಸರು, ಜನನ ದಿನಾಂಕ (Date Of Birth), ವಿಳಾಸ (Adress), ಫೋನ್ ಸಂಖ್ಯೆ (Phone Number), ಫೊಟೋ ಎಲ್ಲ ಮಾಹಿತಿ ಯಾವುದೇ ವಿಧವಾಗಿ ತಿದ್ದುಪಡಿ ಬಾಕಿ ಇದ್ದರೆ ಮಾರ್ಚ್ 14ರ ವರೆಗೆ ಅಪ್ಡೇಟ್ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಈಗ ಆ ಗಡುವಿನ ಅವಧಿಯನ್ನು ಮತ್ತೆ ಪುನಃ ಮೂರು ತಿಂಗಳ ಕಾಲಕ್ಕೆ ಮುಂದೂಡಲಾಗಿದೆ. ಜೂನ್ 14ರ ಒಳಗಾಗಿ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

Image Source: ABP News

ಎಲ್ಲ ಕ್ಷೇತ್ರಕ್ಕೂ ಅವಶ್ಯಕ:

advertisement

ಆಧಾರ್ ಕಾರ್ಡ್ (Aadhaar Card)ಎನ್ನುವುದು ಇಂದು ಎಲ್ಲ ಕ್ಷೇತ್ರಗಳಿಗೂ ಅತ್ಯವಶ್ಯಕವಾಗಿದೆ. ಬ್ಯಾಂಕ್ ಖಾತೆ ತೆರೆಯಲು, ಸರಕಾರದ ಯೋಜನೆಯ ಫಲಾನುಭವಿಗಳಾಗಲು, ಶೈಕ್ಷಣಿಕ ದಾಖಲಾತಿ ಸಲ್ಲಿಕೆಗೆ, ಭೂಮಿ ಖರೀದಿ ಮಾಡಲು ಹೀಗೆ ಅನೇಕ‌ ಕೆಲಸ ಕಾರ್ಯಕ್ಕೆ ಆಧಾರ್ ಕಾರ್ಡ್ ಅನ್ನು ಕಡ್ಡಾಯ ಮಾಡಲಾಗುತ್ತಿದೆ. ಈ ಎಲ್ಲ ಸೌಲಭ್ಯ ಪಡೆಯಲು ನಿಮ್ಮ ಆಧಾರ್ ಕಾರ್ಡ್ ಅನ್ನು ಕಾಲಕಾಲಕ್ಕೆ ತಕ್ಕಂತೆ ಅಪ್ಲೋಡ್ ಮಾಡುವುದು ಕೂಡ ಅತ್ಯವಶ್ಯಕವಾಗಿದೆ.

ಆನ್ಲೈನ್ ನಲ್ಲಿ ಅವಕಾಶ:

ಆಧಾರ್ ಕಾರ್ಡ್ ಅನ್ನು ಅಪ್ಡೇಟ್ (Aadhaar Card Update) ಮಾಡಲು ಈಗ ಹಿಂದಿಗಿಂತಲೂ ಸುಲಭ ವಿಧಾನ ಕಂಡುಕೊಳ್ಳಲಾಗಿದೆ. ಆನ್ಲೈನ್ ಮೂಲಕ ಸುಲಭವಾಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬಹುದು. ಇದು ತುಂಬಾ ಸರಳ ಮತ್ತು ಸುಲಭ ವಿಧಾನವಾಗಿದ್ದು ಆನ್ಲೈನ್ ಮೂಲಕ ಅಪ್ಡೇಟ್ ಮಾಡಿದರೆ ಯಾವುದೇ ವಿಧವಾಗಿ ಶುಲ್ಕ ಪಾವತಿ ಮಾಡುವ ಅಗತ್ಯವಿಲ್ಲ. ಹಾಗಾಗಿ ಜನರು ಶೀಘ್ರವೇ ತಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಬೇಕು. ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು ಜೂನ್ 14 ಕೊನೆ ದಿನವೆಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಈ ಬಗ್ಗೆ ತಮ್ಮ ಟಿಟ್ಟರ್ ಎಕ್ಸ್ (Twitter X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

Image Source: Moneycontrol

ಒಂದು ವೇಳೆ ನಿಮಗೆ ಆನ್ಲೈನ್ ಮೂಲಕ ಆಧಾರ್ ಕಾರ್ಡ್ (Aadhaar Card) ಅನ್ನು ಅಪ್ಡೇಟ್ ಮಾಡಲು ಸಾಧ್ಯ ವಾಗದೆ ಇದ್ದರೆ ಆಗ ನೀವು ಆಫ್ ಲೈನ್ ಮೂಲಕ ಅಪ್ಡೇಟ್ ಮಾಡಿ. ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆಧಾರ್ ಅಪ್ಡೇಟ್ ಮಾಡಬಹುದು ಆದರೆ ಇದಕ್ಕೆ ನಿಗಧಿತ ಶುಲ್ಕ ನೀವೆ ಕಟ್ಟಬೇಕು. ಹಾಗಾಗಿ ನೀವು ಬಯೋಮೆಟ್ರಿಕ್ ಡೇಟಾ(Biometric data) ಹೊರತು ಪಡಿಸಿ ಉಳಿದ ಯಾವುದೇ ಮಾಹಿತಿ ಅಪ್ಡೇಟ್ ಮಾಡಲು ಬಾಕಿ ಇದ್ದರೆ ಆನ್ಲೈನ್ ಮೂಲಕ ಮಾಡಿಸುವುದೆ ಉತ್ತಮ ಎಂದು ಸರಕಾರಿ ಮೂಲಗಳು ಈ ಬಗ್ಗೆ ಸಲಹೆ ನೀಡಿವೆ.

advertisement

Leave A Reply

Your email address will not be published.