Karnataka Times
Trending Stories, Viral News, Gossips & Everything in Kannada

Drought Relief Money: ಬರ ಪರಿಹಾರ ಮೊತ್ತ ಇನ್ನೂ ಬಂದಿಲ್ಲ! ಇದರ ಬೆನ್ನಲ್ಲೇ ಸಿಎಂ ಹೊಸ ನಿರ್ಧಾರ

advertisement

ಮಳೆಯ ಅಭಾವ ರೈತರಿಗೆ ದೊಡ್ಡ ಮಟ್ಟದ ಸಂಕಷ್ಟ ಎದುರಾಗುತ್ತಿದೆ. ಒಂದು ಕಡೆ ಮಳೆ ಇಲ್ಲದೆ ಬೆಳೆದ ಬೆಳೆ ನಾಶವಾಗುತ್ತಿದ್ದರೆ ಇನ್ನೊಂದೆಡೆ ಬರಗಾಲ ಪರಿಹಾರ ನೀಡ್ತೆವೆ ಎಂಬ ಕನಸ್ಸು ಕೂಡ ಈಡೇರುತ್ತಿಲ್ಲ. ಹೀಗಾಗಿ ರಾಜ್ಯದ ಕಾಂಗ್ರೆಸ್ ಸರಕಾರ ಈ ಹಿಂದೆ ಬರಗಾಲ ಪರಿಹಾರ ಮೊತ್ತ (Drought Relief Money) ವಿತರಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದರೂ ಇದುವರೆಗೆ ಯಾವುದೇ ಪರಿಹಾರ ಬಂದಿಲ್ಲ ಹಾಗಾಗಿ ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕಿಡಿ ಕಾರಿದ್ದಾರೆ.

ನಿರಾಸೆ ಪ್ರತಿಕ್ರಿಯೆ:

ಬರ ಪರಿಹಾರಕ್ಕೆ ಕೇಂದ್ರ ಸರಕಾರದ 75% ಹಾಗೂ ರಾಜ್ಯ ಸರಕಾರದಿಂದ 25% ನಷ್ಟು ಅನುದಾನ ಮಂಜೂರಾಗಬೇಕು. ಕೇಂದ್ರಕ್ಕೆ ಈ ಬಗ್ಗೆ ಮನವಿ ಮಾಡಿದ್ದ ಬಳಿಕ ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡ ಬರಬೇಕಿತ್ತು ಆದರೆ ಒಂದು ವಾರಕ್ಕೆ ಮೂರು ತಂಡ ಮಾತ್ರವೇ ಬಂದಿದೆ. ಪರಿಶೀಲನೆ ಮಾಡಿ ವರದಿ ಸಲ್ಲಿಸಿ 5-6ತಿಂಗಳಾಗುತ್ತಿದ್ದರೂ ಇನ್ನು ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಇದು ರಾಜ್ಯಕ್ಕೆ ನಿರಾಸೆ ತರಿಸಿದೆ ಎಂದು ಸಿಎಂ ಅವರು ಈ ಬಗ್ಗೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಕೇಂದ್ರ ಸರಕಾರದ ವಿರುದ್ಧ ಸಿಎಂ ಕ್ರಮ:

 

Image Source: CNBC TV18

 

advertisement

ಮಾರ್ಚ್ 23ರಂದು ಸಿಎಂ ಅವರು ಸುದ್ದಿ ಗೋಷ್ಠಿ ಕರೆದು ಮಾಧ್ಯಮದ ಮುಂದೆ ಬರಗಾಲ ಪರಿಹಾರದ ಮೊತ್ತ ವಿತರಿಸುವ ಕುರಿತಾಗಿ ಮಾತನಾಡಿದ್ದಾರೆ. ಬರಗಾಲ ಪರಿಹಾರ ಮೊತ್ತ (Drought Relief Money) ಬಿಡುಗಡೆ ಮಾಡುವಂತೆ ಕಳೆದ 6ತಿಂಗಳಿಂದ ಮನವಿ ಮಾಡಿದ್ದೇವೆ. ಆದರೆ ಕೇಂದ್ರ ದಿಂದ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ ಎಂಬುದು ಬೇಸರ ತರಿಸಿದೆ. ಇನ್ನು ಕಾಯುವ ಹಂತ ಮುಗಿದಿದೆ. ಕೇಂದ್ರ ಸರಕಾರದ ವಿರುದ್ಧ ಕಾನೂನು ಹೋರಾಟ ಮಾಡಿ ಬರ ಪರಿಹಾರ ಪಡೆದೆ ಪಡೆಯುತ್ತೇವೆ ಎಂದರು.

ರಿಟ್ ಅರ್ಜಿ ಸಲ್ಲಿಕೆ:

ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, ಕೇಂದ್ರ ಸರಕಾರ ಬರಗಾಲ ಪರಿಹಾರದ ಬಗ್ಗೆ ಇದುವರೆಗೆ ಯಾವುದೇ ಸೂಚನೆ ನೀಡದ ಹಿನ್ನೆಲೆ ಸುಪ್ರೀಂ ಕೋರ್ಟಿನ ಆರ್ಟಿಕಲ್ 32ರ ಅಡಿಯಲ್ಲಿ ಬರಪರಿಹಾರ ಕೊಡಿಸುವಂತೆ ರಿಟ್ ಅರ್ಜಿ ಸಲ್ಲಿಸಿದ್ದೇವೆ. ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಕೇಂದ್ರ ಸರಕಾರದಿಂದ ಸುಪ್ರೀಂ ಕೋರ್ಟಿನ ಕಾನೂನಿನ ಉಲ್ಲಂಘನೆ ಆಗುತ್ತಿದೆ. ಹಾಗಾಗಿ ಸುಪ್ರೀಂ ಕೋರ್ಟ್ ಈ ಬಗ್ಗೆ ತೀರ್ಮಾನ ನೀಡಲಿ ಎಂದರು.

ರಾಜ್ಯದ ಪರಿಹಾರ ಮೊತ್ತ ನೀಡಿಕೆ:

 

Image Source: Freepik

 

ಬರಗಾಲ ಪರಿಹಾರಕ್ಕಾಗಿ ರಾಜ್ಯ ಸರಕಾರದಿಂದ ಅಧ್ಯಯನ ಮಾಡಲಾಗಿದೆ. 223ತಾಲೂಕನ್ನು ಬರಗಾಲ ಸಂತ್ರಸ್ತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಕೇಂದ್ರದ ಪರಿಹಾರ ಮೊತ್ತ ಬರುವರೆಗೆ ರೈತರಿಗೆ ನೆರವಾಗಬೇಕು ಎಂಬ ಕಾರಣಕ್ಕೆ ರಾಜ್ಯದಿಂದ 2000 ದಂತೆ ಮೊತ್ತ ನೀಡಲು ಬರ ಪರಿಹಾರ ಘೋಷಣೆ ಮಾಡಿದೆ. ಒಟ್ಟು 33,44,650ಕೋಟಿ ರೂಪಾಯಿ ಅನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದ್ದು ಕೇಂದ್ರದ ಅನುದಾನ ಇನ್ನು ಮುಂದಾದರೂ ಬರಬಹುದು ಎಂಬ ನಿರೀಕ್ಷೆಯಲ್ಲಿ ಇದ್ದು ಕಾನೂನು ಕ್ರಮದಂತೆ ರಿಟ್ ಅರ್ಜಿ ಸಲ್ಲಿಸಿದ್ದಾಗಿ ಸಿಎಂ ಅವರು ತಿಳಿಸಿದರು.

advertisement

Leave A Reply

Your email address will not be published.