Karnataka Times
Trending Stories, Viral News, Gossips & Everything in Kannada

CM Siddaramaiah: ಗೃಹಲಕ್ಷ್ಮೀ , ಗೃಹಜ್ಯೋತಿ ಸೇರಿದಂತೆ ಎಲ್ಲಾ ಗ್ಯಾರಂಟಿ ಯೋಜನೆಗಳ ಬಗ್ಗೆ ಸಿದ್ದರಾಮಯ್ಯ ದೊಡ್ಡ ಹೇಳಿಕೆ!

advertisement

2023ರ ಅವಧಿಯಲ್ಲಿ ರಾಜ್ಯದಲ್ಲಿ ಹೆಚ್ಚು ಸಂಚಲನ ಮೂಡಿಸಿದ್ದ ಯೋಜನೆ ಎಂದರೆ ಅದು ಗ್ಯಾರೆಂಟಿ ಯೋಜನೆ ಎನ್ನಬಹುದು. ಕಾಂಗ್ರೆಸ್ ಸರಕಾರವು ಚುನಾವಣೆ ಪೂರ್ವದಲ್ಲಿ ನಮ್ಮ ಸರಕಾರ ಬಹುಮತದಿಂದ ಆಡಳಿತಕ್ಕೆ ಬಂದರೆ ಪಂಚ ಗ್ಯಾರೆಂಟಿಗಳಾದ ಅನ್ನಭಾಗ್ಯ (Anna Bhagya), ಗೃಹಲಕ್ಷ್ಮೀ (Gruha Lakshmi), ಗೃಹಜ್ಯೋತಿ (Gruha Jyothi), ಶಕ್ತಿ ಯೋಜನೆ (Shakti Yojana) ಮತ್ತು ಯುವನಿಧಿ (Yuva Nidhi) ಜಾರಿಗೆ ತರುವುದಾಗಿ ಹೇಳಲಾಗಿತ್ತು. ಬಳಿಕ ಬಹುಮತದಿಂದ ಗೆದ್ದು ಒಂದೊಂದೇ ಯೋಜನೆಯನ್ನು ಈಡೇರಿಸುತ್ತಲೇ ಬಂದಿದೆ. ಪಂಚ ಗ್ಯಾರೆಂಟಿ ಯೋಜನೆ ಮುಂದಿನ ಲೋಕಸಭೆ ಚುನಾವಣೆಯ ಬಳಿಕ ನಿಲ್ಲಲಿದೆ ಎಂದವರಿಗೆ ಸಿಎಂ ಅವರು ಇದೀಗ ಖಡಕ್ ಹೇಳಿಕೆ ನೀಡಿದ್ದಾರೆ.

ಗ್ಯಾರೆಂಟಿ ಯೋಜನೆ ಸಮಾವೇಶ ಸಭೆ:

ಇತ್ತೀಚೆಗೆ ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ನಡೆದ ಮುಖ್ಯಮಂತ್ರಿಗಳ ಗ್ಯಾರೆಂಟಿ ಯೋಜನೆ (Guarantee Scheme) ಸಮಾವೇಶ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸಿ ಮಾತನಾಡಿದ್ದಾರೆ. ಈ ವೇಳೆ ಗ್ಯಾರೆಂಟಿ ಯೋಜನೆ ಸಾಧಕ ಭಾದಕ ಹಾಗೂ ಉಂಟಾದ ಕೆಲ ಸಮಸ್ಯೆಗಳಿಗೆ ಪರಿಹಾರ ಕ್ರಮ ಮುಂತಾದವುಗಳ ಬಗ್ಗೆ ಜನರೊಂದಿಗೆ ಮುಕ್ತವಾಗಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಗ್ಯಾರೆಂಟಿ ಯೋಜನೆ ಬಗ್ಗೆ ಜನರಿಗೆ ಇದ್ದ ಗೊಂದಲ ಬಗೆಹರಿಸಿದ್ದಾರೆ.

ಏನಂದ್ರು ಸಿಎಂ:

 

Image Source: The Indian Express

 

advertisement

ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ಇರುವಷ್ಟು ಕಾಲ ಗ್ಯಾರೆಂಟಿ ಯೋಜನೆ (Guarantee Scheme) ಇದ್ದೆ ಇರುತ್ತದೆ. ವಿಪಕ್ಷಗಳು ಗ್ಯಾರೆಂಟಿ ಯೋಜನೆ ಜಾರಿಗೆ ತರುವುದಿಲ್ಲ‌ ಎಂದು ಅನಗತ್ಯವಾಗಿ ಚುನಾವಣೆ ಪೂರ್ವ ಮತ್ತು ನಂತರ ಹೇಳಿಕೆ ನೀಡಿದ್ದವು ಆದರೆ ನಾವು ನುಡಿದಂತೆ ನಡೆಯುತ್ತಿದ್ದೇವೆ. ಈಗ ವಿಪಕ್ಷಗಳ ಮನೆಬಾಗಿಲವರೆಗೂ ನಮ್ಮ ಗ್ಯಾರೆಂಟಿ ತಲುಪುತ್ತಿದೆ ಎಂದರೆ ಅದು ನಿಜವಾದ ಸಾಧನೆ ಎಂದರ್ಥ ಎಂದರು.

ದಿವಾಳಿ ಆಗಿಲ್ಲ ಅಭಿವೃದ್ಧಿ ಆಯ್ತು:

ಬಳಿಕ ಮಾತನಾಡಿದ ಸಿಎಂ ಗ್ಯಾರೆಂಟಿ ಯೋಜನೆಯ ಫಲಾನುಭವಿಗಳನ್ನು ಅವಮಾನಿಸುವುದು ಸರಿಯಲ್ಲ.ಈ ಹಿಂದೆ ಕೇಂದ್ರ ಸರಕಾರದ ಪ್ರಬಲ ನಾಯಕರು ಹಾಗೂ ರಾಜ್ಯದ ನಾಯಕರು ಕಾಂಗ್ರೆಸ್ ಗ್ಯಾರೆಂಟಿ ಬಗ್ಗೆ ಟೀಕೆ‌ಮಾಡಿದ್ದರು. ಇದರಿಂದ ರಾಜ್ಯದ ಆರ್ಥಿಕತೆ ದಿವಾಳಿ ಆಗುತ್ತದೆ ಎಂದಿದ್ದರು ಆದರೆ ಜನರಿಗೆ ಉತ್ತಮ ಆಡಳಿತ ವ್ಯವಸ್ಥೆ ಸಿಕ್ಕಿದೆ ದಿವಾಳಿ ಆಗಲಿಲ್ಲ ಬದಲಾಗಿ ಜನರಿಗೆ ಬಲವರ್ಧನೆ ಜೊತೆಗೆ ಅಭಿವೃದ್ಧಿ ಆಗಿದೆ. ನಾವು ನುಡಿದಂತೆ ನಡೆದಿದ್ದೇವೆ ಸುಳ್ಳನ್ನು ಆಡಿದ್ದು ವಿಪಕ್ಷಗಳು ಎಂದು ಕಿಡಿಕಾರಿದ್ದಾರೆ.

ಎಲ್ಲರೂ ಸಮಾನರು:

ನಮ್ಮ ಗ್ಯಾರೆಂಟಿ ಯೋಜನೆಯಲ್ಲಿ ಮೇಲು ಕೀಳು ಬೇಧ ಭಾವ ವಿಲ್ಲ ಎಲ್ಲರೂ ಸಮಾನರು. ಯಾವುದೆ ಜಾತಿ , ಧರ್ಮ, ಮತ ಎಂಬ ವೈಮನಸ್ಸು ಇಲ್ಲ ವಿಪಕ್ಷಗಳಿಗೂ ಪಂಚ ಗ್ಯಾರೆಂಟಿ ಇದೆ. ದೇಶದ ಪ್ರಜಾಪ್ರಭುತ್ವ ಗೌರವ ಕಾಪಾಡುವ ನೆಲೆಯಲ್ಲಿ ಪಕ್ಷವು ರಾಜ್ಯದ ಎಲ್ಲ ಜನತೆಯನ್ನು ಸಮಾನವಾಗಿ ಕಂಡು ಪಂಚ ಗ್ಯಾರೆಂಟಿ ಯೋಜನೆ ಘೋಷಣೆ ಮಾಡಿದೆ. ಇದಕ್ಕಾಗಿ ಬಜೆಟ್ ನಲ್ಲಿ ಪ್ರತ್ಯೇಕ ಹಣ ಕೂಡ ಮೀಸಲಿಟ್ಟಿದ್ದು ಜನರಿಗೆ ಯಾವುದೇ ಮೋಸ ನಮ್ಮ ಪಕ್ಷ ಮಾಡಿಲ್ಲ. ಮುಂದಿನ 5ವರ್ಷವೂ‌ ಪಂಚ ಗ್ಯಾರೆಂಟಿ ಇರಲಿದೆ ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಸಿಎಂ ಸಿದ್ದರಾಮಯ್ಯ ಅವರು ಸಮಾವೇಶದಲ್ಲಿ ಮಾತನಾಡಿದರು.

advertisement

Leave A Reply

Your email address will not be published.