Karnataka Times
Trending Stories, Viral News, Gossips & Everything in Kannada

Guarantee Scheme: ಮಾರ್ಚ್ 14ರ ಒಳಗೆ ಈ ಕೆಲಸ ಮಾಡಿಕೊಳ್ಳಿ ಇಲ್ಲವಾದರೆ ಅನ್ನಭಾಗ್ಯ ಗೃಹಲಕ್ಷ್ಮಿ ಯೋಜನೆಯ ಹಣ ಬರಲ್ಲ!

advertisement

ರಾಜ್ಯ ಸುಭೀಕ್ಷವಾಗಿರಬೇಕು ಎನ್ನುವ ಕಾರಣಕ್ಕೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಗ್ಯಾರಂಟಿ ಯೋಜನೆಗಳು(Guarantee Schemes) ಜನರ ಹಿತ ರಕ್ಷಣೆಗೆ, ಆರ್ಥಿಕ ಸ್ವಾವಲಂಬನೆಗೆ ಹೆಚ್ಚು ಸಹಕಾರಿಯಾಗಿದೆ ಎನ್ನಬಹುದು. ಆದರೆ ಈ ಯೋಜನೆಗಳ ಪ್ರಯೋಜನವನ್ನು ನೀವು ಪಡೆದುಕೊಳ್ಳಲು ಕೆಲವೊಂದು ಮಾನದಂಡಗಳನ್ನು ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಒಂದು ವೇಳೆ ಸರ್ಕಾರ ತಿಳಿಸಿರುವ ಕಡ್ಡಾಯ ನಿಯಮಗಳನ್ನು ಪಾಲಿಸದೆ ಇದ್ದಲ್ಲಿ ಯಾವ ಗ್ಯಾರಂಟಿ ಯೋಜನೆ (Guarantee Scheme)ಯ ಹಣವನ್ನು ಕೂಡ ನೀವು ಪಡೆದುಕೊಳ್ಳಲು ಸಾಧ್ಯವಿಲ್ಲ.

ಗ್ಯಾರಂಟಿ ಯೋಜನೆ (Guarantee Scheme)ಯ ಹಣ್ಣಕ್ಕಾಗಿ ಈ ಕೆಲಸ ಮಾಡಿ!

ಹೌದು, ಸರ್ಕಾರ ಮಾರ್ಚ್ 14ರಿಂದ ಅನ್ನ ಭಾಗ್ಯ (AnnaBhagya)ಯೋಜನೆ ಮತ್ತು ಗೃಹಲಕ್ಷ್ಮಿ (Gruha Lakashmi) ಯೋಜನೆ ಹಣ ಪ್ರತಿಯೊಬ್ಬರ ಖಾತೆಗೆ ಡಿ ಬಿ ಟಿ (DBT) ಮಾಡಲು ಆರಂಭಿಸುತ್ತದೆ. ಮಾರ್ಚ್ ತಿಂಗಳ ಕೊನೆಯ ದಿನಾಂಕದ ಒಳಗೆ ನೀವು ಗೃಹಲಕ್ಷ್ಮಿ ಹಣ ಮತ್ತು ಅನ್ನ ಭಾಗ್ಯ ಯೋಜನೆಯ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಸಾಧ್ಯವಿದೆ. ಆದರೆ ಈ ರೀತಿ ನಿಮ್ಮ ಖಾತೆಗೆ ಹಣ ಬರಬೇಕು ಅಂದ್ರೆ ಇದೊಂದು ಕೆಲಸವನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಇಲ್ಲದೆ ಇದ್ದರೆ ಹಣ ಬರುವುದಿಲ್ಲ.

Karnataka Guarantee Schemes
Image Source: Vistara News

ಮಾರ್ಚ್ 14ರ ಒಳಗೆ ಆಧಾರ್ ಕಾರ್ಡ್ (Aadhaar Card) ಅಪ್ಡೇಟ್ ಮಾಡಿಸಿ!

advertisement

ಆಧಾರ್ ಕಾರ್ಡ್ (Aadhaar Card) ಎನ್ನುವುದು ಪ್ರತಿಯೊಬ್ಬರಿಗೂ ಬಹಳ ಮುಖ್ಯವಾಗಿ ಬೇಕಾಗಿರುವ ದಾಖಲೆ. ನಾವು ಯಾವುದೇ ಕೆಲಸಕ್ಕೂ ಕೂಡ ಆಧಾರ್ ಕಾರ್ಡ್ ಇದ್ದರೆ ಮಾತ್ರ ಆ ಕೆಲಸವನ್ನು ಮಾಡಿಸಿಕೊಳ್ಳಲು ಸಾಧ್ಯವಿದೆ ಹಾಗಾಗಿ ಸರ್ಕಾರಿ ಯೋಜನೆಗಳಿಗೂ ಕೂಡ ಆಧಾರ್ ಕಾರ್ಡ್ ಬಹಳ ಮುಖ್ಯ. ಇನ್ನು ಸರ್ಕಾರ ಈಗಾಗಲೇ ತಿಳಿಸಿರುವಂತೆ ಗ್ಯಾರಂಟಿ ಯೋಜನೆ (Guarantee Scheme) ಯ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಈಕೆ ವೈ ಸಿ ಕಡ್ಡಾಯವಾಗಿದೆ. ಅಂದರೆ ನೀವು ಆಧಾರ್ ಕಾರ್ಡ್ ಬ್ಯಾಂಕ್ ಖಾತೆ (Bank Account) ಯನ್ನು ಲಿಂಕ್ ಮಾಡಿಕೊಳ್ಳಬೇಕು.

ಈ ರೀತಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಲಿಂಕ್ ಮಾಡಿಕೊಳ್ಳುವುದಕ್ಕೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿರಬೇಕು. ಕಳೆದ ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದುಕೊಂಡಿರುವವರು ನೀವಾಗಿದ್ದರೆ, ತಕ್ಷಣ ಅದನ್ನು ಅಪ್ಡೇಟ್ ಮಾಡಿಸಿ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ವಿಳಾಸ, ಬಯೋಮೆಟ್ರಿಕ್, ಲಿಂಗ, ಜನ್ಮ ದಿನಾಂಕ ಹೀಗೆ ಪ್ರತಿಯೊಂದುರ ಅಪ್ಡೇಟ್ ಮಾಡಿಸಿಕೊಳ್ಳಬೇಕು. ಒಂದು ವೇಳೆ ನೀವು ಮಾರ್ಚ್ 14ರ ಒಳಗೆ ಅಂದರೆ ಗ್ಯಾರಂಟಿ ಯೋಜನೆಯ 7ನೇ ಕಂತಿನ ಹಣ ಬಿಡುಗಡೆ ಆಗುವುದರ ಒಳಗೆ ಅಪ್ಡೇಟ್ ಮಾಡಿಸಿಕೊಳ್ಳದೆ ಇದ್ದರೆ ನಿಮ್ಮ ಖಾತೆಗೆ ಹಣ ಡಿ ಬಿ ಟಿ ಆಗುವುದಿಲ್ಲ.

Aadhaar Card Update
Image Source: Digit Insurance

ಕೇವಲ ಅನ್ನಭಾಗ್ಯ ಗೃಹಲಕ್ಷ್ಮಿ ಯೋಜನೆಯ ಹಣ ಮಾತ್ರವಲ್ಲದೆ, ಆಧಾರ್ ಕಾರ್ಡ್ ಲಿಂಕ್ ಆಗಿರುವ ಯಾವುದೇ ಯೋಜನೆಯ ಪ್ರಯೋಜನವನ್ನು ನೀವು ಪಡೆದುಕೊಳ್ಳಲು ಸಾಧ್ಯವಲ್ಲ. ಹಾಗಾಗಿ ತಕ್ಷಣ ಆಧಾರ್ ಅಪ್ಡೇಟ್ ಮಾಡಿಸಿ. ಒಂದು ವೇಳೆ ಆಧಾರ್ ಅಪ್ಡೇಟ್ ಮಾಡಿಸಿದ್ದರೆ ಚಿಂತೆ ಪಟ್ಟುಕೊಳ್ಳುವ ಅಗತ್ಯವಿಲ್ಲ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.

ಆಧಾರ್ ಅಪ್ಡೇಟ್ ಎಲ್ಲಿ ಮಾಡಿಸಬೇಕು?

ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಆನ್ಲೈನ್ ನಲ್ಲಿ ಅವಕಾಶವಿದೆ ಆನ್ಲೈನ್ ನಲ್ಲಿ ನಿಮಗೆ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಲು ತಿಳಿಯದೆ ಇದ್ದರೆ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸುವುದರ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಬಹುದು.

advertisement

Leave A Reply

Your email address will not be published.