Karnataka Times
Trending Stories, Viral News, Gossips & Everything in Kannada

Guarantee Schemes: ಗ್ಯಾರೆಂಟಿ ಯೋಜನೆ ಬಗ್ಗೆ ಸರ್ಕಾರದ ಹೊಸ ನಿರ್ಧಾರ

advertisement

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತ ಜಾರಿಗೆ ಬಂದ ಬಳಿಕ ಅನೇಕ ಯೋಜನೆಗೆ ಒತ್ತು ನೀಡಿದಂತಾಗಿದೆ. ಈ ಮೂಲಕ ಸರಕಾರಿ ಸ್ವಾಮ್ಯದ ಹಾಗೂ ಖಾಸಗಿ ಕ್ಷೇತ್ರಕ್ಕೂ ಅಭಿವೃದ್ಧಿಗೆ ಒತ್ತು ನೀಡಿದಂತಾಗಿದೆ. ಚುನಾವಣೆ ಪೂರ್ವದಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಪಂಚ ಗ್ಯಾರೆಂಟಿ ಯೋಜನೆ (Guarantee Schemes) ಬಗ್ಗೆ ಅಧಿಕ ಪ್ರಾತಿನಿಧ್ಯ ನೀಡಿತ್ತು. ಬಳಿಕ ಚುನಾವಣೆಯಲ್ಲಿ ಗೆದ್ದ ಬಳಿಕ ಮೊದಲು ಶಕ್ತಿ ಯೋಜನೆ ಬಳಿಕ ಅನ್ನಭಾಗ್ಯ (Anna Bhagya), ಗೃಹಜ್ಯೋತಿ (Gruha Jyothi), ಗೃಹಲಕ್ಷ್ಮೀ (Gruha Lakshmi) ಹಾಗೂ ಅಂತಿಮವಾಗಿ ಯುವ ನಿಧಿ (Yuva Nidhi) ಸಹ ಜಾರಿಗೆ ತಂದಿದೆ.

ಗ್ಯಾರೆಂಟಿ ಯೋಜನೆ ಸಮೀಕ್ಷೆ:

ಪಂಚ ಗ್ಯಾರೆಂಟಿ ಯೋಜನೆಗಳು (Guarantee Schemes) ಅತೀ ಹೆಚ್ಚು ಜನರನ್ನು ಆಕರ್ಷಿಸುತ್ತದೆ. ಈ ಮೂಲಕ ಮುಂದಿನ ಚುನಾವಣೆಗೆ ಈಗಲೇ ಜನರ ಮನ ಗೆಲ್ಲುವ ಸಲುವಾಗಿ ಈ ಪಂಚ ಗ್ಯಾರೆಂಟಿ ತುಂಬಾ ಯಶಸ್ವಿಯಾಗಿದೆ. ಹಾಗಾಗಿ 2023-24ನೇ ಸಾಲಿನಲ್ಲಿ ಪಂಚ ಯೋಜನೆಗಳು ಜನರ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಎಂದು ಸಮೀಕ್ಷೆ ಮಾಡಲು ಚಿಂತಿಸಲಾಗಿದ್ದು ಹೀಗಾಗಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಗ್ಯಾರೆಂಟಿ ಯೋಜನೆಗಳ ಸಮೀಕ್ಷೆ ನಡೆಸಲಾಗುತ್ತದೆ.

ಉದ್ದೇಶ ಏನು?

 

 

advertisement

ಗ್ಯಾರೆಂಟಿ ಯೋಜನೆಗಳು (Guarantee Schemes) ಬಡವರ್ಗದ ಜನತೆಗೆ ಸರಿಯಾಗಿ ತಲುಪುತ್ತಿಲ್ಲ ಅವುಗಳು ಶ್ರೀಮಂತರ ಪಾಲಾಗಿದೆ. ಹಾಗಾಗಿ ಇದು ಬಡವರ್ಗಕ್ಕೆ ತಲುಪುತ್ತಿವೆಯೇ ಇದರ ಸಾಧಕ ಬಾಧಕಗಳನ್ನು ಅರಿಯುವ ಪ್ರಯತ್ನ ಇದಾಗಿದ್ದು ಪ್ರತಿ ಮನೆ ಮನೆಗಳಲ್ಲೂ ಗ್ಯಾರೆಂಟಿ ಯೋಜನೆ ತಲುಪಿವೆಯೇ ಎಂಬುದನ್ನು ತಿಳಿಯುವ ಸಲುವಾಗಿ ಸಮೀಕ್ಷೆ ಮಾಡಲು ತೀರ್ಮಾನಿಸಲಾಗಿದೆ. ಹೀಗಾಗಿ ಗ್ಯಾರೆಂಟಿ ಯೋಜನೆಗೆ ಸ್ವಯಮ ಸೇವಕರ ನೇಮಕ ಮಾಡಲು ತೀರ್ಮಾನಿಸಲಾಗಿದೆ.

ಯಾರು ಈ ಸ್ವಯಂ ಸೇವಕರು?

ಗ್ಯಾರೆಂಟಿ ಯೋಜನೆ ಸಮೀಕ್ಷೆ ನಡೆಸಲು ಸರಕಾರವು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಇತರ ಇಲಾಖೆ ಸಿಬಂದಿಗಳನ್ನು ಸ್ವಯಂ ಸೇವಕರಾಗಿ ನೇಮಕ ಮಾಡಲು ಚಿಂತಿಸಿದ್ದಾರೆ. ಈ ಮೂಲಕ ಜನರಿಗೆ ತಲುಪುತ್ತಿರುವ ಗ್ಯಾರೆಂಟಿ ಯೋಜನೆಗಳ ಬಗ್ಗೆ ಅಭಿಪ್ರಾಯ , ಸಲಹೆ ಸೂಚನೆಯನ್ನು ಪಡೆಯಲಾಗುತ್ತದೆ. ಈ ಎಲ್ಲ ಕುರಿತಾದ ಮಾಹಿತಿಯನ್ನು ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಹೀಗಾಗಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ ಪ್ರೋತ್ಸಾಹ ಧನ ನೀಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ.

ಎಷ್ಟು ಮೊತ್ತ ಸಿಗಲಿದೆ?

ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಈ ಯೋಜನೆಯ ಸಲುವಾಗಿ ಸ್ವಯಂ ಸೇವಕರೆಂದು ಪರಿಗಣಿಸಿ ಪ್ರೋತ್ಸಾಹ ಧನ ನೀಡಲು ಚಿಂತಿಸಲಾಗಿದ್ದು ರಾಜ್ಯಾದ್ಯಂತ 1.2 ಲಕ್ಷ ಸ್ವಯಂ ಸೇವಕರ ನೇಮಕ ಆಗಲಿದೆ. ಅವರಿಗೆ 10ರಿಂದ 15 ದಿನಕ್ಕೆ ಒಂದು ಬಾರಿ ಸಮೀಕ್ಷೆ ಕಾರ್ಯ ನಿಯೋಜನೆ ಆಗಲಿದ್ದು 1000 ದಂತೆ ಪ್ರೋತ್ಸಾಹ ಧನ ನೀಡಲಾಗುತ್ತದೆ.

advertisement

Leave A Reply

Your email address will not be published.