Karnataka Times
Trending Stories, Viral News, Gossips & Everything in Kannada

Top 5 Safest Cars: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಸುರಕ್ಷಿತ ಕಾರುಗಳಿವು! ಅತೀ ಕಡಿಮೆ ಬೆಲೆ

advertisement

ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ವಿವಿಧ ಕಾರಣಗಳಿಂದ ರಸ್ತೆ ಅಪಘಾತಗಳಲ್ಲಿ ಸಾವು ನೋವಿನ ಪ್ರಕರಣಗಳು ಹೆಚ್ಚುತ್ತಿದ್ದು, ಅಪಘಾತಗಳನ್ನು ತಗ್ಗಿಸಲು ಮತ್ತು ಸಾವು ನೋವಿನ ಪ್ರಮಾಣವನ್ನು ತಗ್ಗಿಸಲು ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಅಪಘಾತಗಳಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗಲು ಕಳಪೆ ವಾಹನಗಳ ಕೊಡುಗೆ ಅಗ್ರವಾಗಿದ್ದು, ಇವು ಅಪಘಾತ ಸಂದರ್ಭದಲ್ಲಿ ಪ್ರಯಾಣಿಕರಿಗೆ ಕನಿಷ್ಠ ಮಟ್ಟದ ಸುರಕ್ಷತೆಯನ್ನು ಸಹ ನೀಡುವಲ್ಲಿ ವಿಫಲವಾಗಿವೆ. ಹೀಗಾಗಿ ಹೊಸ ವಾಹನಗಳ ಉತ್ಪಾದನೆಯಲ್ಲಿ ಅಮೂಲಾಗ್ರ ಬದಲಾವಣೆ ತರಲಾಗುತ್ತಿದ್ದು, ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ ಗಳನ್ನು ಜೋಡಣೆ ಮಾಡಲಾಗುತ್ತಿದೆ.

ಹೊಸ ಸುರಕ್ಷಾ ಫೀಚರ್ಸ್ ಗಳು ಅಪಘಾತದ ಸಂದರ್ಭದಲ್ಲಿ ಸಾವು ನೋವು ಪ್ರಕರಣಗಳನ್ನು ತಗ್ಗಿಸಲು ಸಾಕಷ್ಟು ಸಹಕಾರಿಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಭಾರತದಲ್ಲಿ ಖರೀದಿಗೆ ಲಭ್ಯವಿರುವ ಪ್ರಮುಖ SUV ಕಾರುಗಳ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಸೇಫ್ ಕಾರ್ಸ್ ಫಾರ್ ಇಂಡಿಯಾ ಅಭಿಯಾನದಡಿ ಸುರಕ್ಷಿತ ಕಾರುಗಳ ಬಳಕೆಗೆ ಒತ್ತು ನೀಡಲಾಗುತ್ತಿದ್ದು, ಇವು ಬೆಲೆಯಲ್ಲಿ ಸಾಮಾನ್ಯ ಕಾರುಗಳಿಂತ ತುಸು ದುಬಾರಿ ಬೆಲೆ ಎನ್ನಿಸಿದರೂ ಪ್ರಾಣಹಾನಿ ತಡೆಯುವಲ್ಲಿ ಸಾಕಷ್ಟು ಪ್ರಯೋಜನಕಾರಿಯಾಗಿವೆ ಎನ್ನಬಹುದು.

Tata Harrier and Safari:

 

 

ಇತ್ತೀಚೆಗೆ ಬಿಡುಗಡೆಯಾಗಿರುವ ಟಾಟಾ ಹ್ಯಾರಿಯರ್ (Tata Harrier) ಮತ್ತು ಸಫಾರಿ ಫೇಸ್ ಲಿಫ್ಟ್ (Tata Safari Facelift) ಕಾರುಗಳು ಹಲವಾರು ಸುರಕ್ಷಾ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಇವು ಗ್ಲೊಬಲ್ ಎನ್ ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 49 ಅಂಕಗಳಿಗೆ 45 ಅಂಕಗಳನ್ನು ಗಳಿಸುವ ಮೂಲಕ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿವೆ. ಹೊಸ ಕಾರುಗಳಲ್ಲಿ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೇರಿದಂತೆ 7 ಏರ್ ಬ್ಯಾಗ್ ಗಳು, ಎಬಿಎಸ್, ಇಬಿಡಿ, ತ್ರಿ ಪಾಯಿಂಟ್ ಸೀಟ್ ಬೆಲ್ಟ್, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, 360 ಡಿಗ್ರಿ ವ್ಯೂ ಕ್ಯಾಮೆರಾ ಸೇರಿದಂತೆ ಹಲವಾರು ಸುರಕ್ಷಾ ಫೀಚರ್ಸ್ ಗಳನ್ನು ನೀಡಲಾಗಿದೆ.

Skoda Slavia and Volkswagen Virtus:

 

 

ಹೊಸ ಸ್ಲಾವಿಯಾ (Skoda Slavia) ಮತ್ತು ವರ್ಟಸ್ (Volkswagen Virtus) ಕಾರುಗಳು ಅತ್ಯುತ್ತಮ ಸುರಕ್ಷಾ ಫೀಚರ್ಸ್ ಗಳೊಂದಿಗೆ ಗ್ಲೋಬಲ್ ಎನ್ ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದ್ದು, ಅಪಘಾತದ ವೇಳೆ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಖಾತ್ರಿಪಡಿಸುತ್ತವೆ. ಹೊಸ ವರ್ಟಸ್ ಮತ್ತು ಸ್ಲಾವಿಯಾ ಕಾರಿನಲ್ಲಿ ಕಾರ್ ಕನೆಕ್ಟ್ ಟೆಕ್ನಾಲಜಿ ಸೇರಿದಂತೆ ಒಟ್ಟು 40 ಕ್ಕೂ ಹೆಚ್ಚು ಸುರಕ್ಷಾ ಫೀಚರ್ಸ್‌ಗಳಿದ್ದು, ಮಲ್ಟಿ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಮಲ್ಟಿ ಕೂಲಿಷನ್ ಬ್ರೇಕ್ಸ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ತ್ರಿ ಪಾಯಿಂಟ್ ಸೀಟ್ ಬೆಲ್ಟ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, ರಿಯರ್ ವ್ಯೂ ಕ್ಯಾಮೆರಾ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಕ್ರೂಸ್ ಕಂಟ್ರೊಲ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಸೇರಿ ಹಲವಾರು ಸೌಲಭ್ಯಗಳಿವೆ.

advertisement

Skoda Kushaq and Volkswagen Tiguan:

 

 

ಗ್ಲೋಬಲ್ ಎನ್ ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 71.64 ಅಂಕಗಳೊಂದಿಗೆ ಸ್ಕೋಡಾ ಕುಶಾಕ್ (Skoda Kushaq) ಮತ್ತು ಫೋಕ್ಸ್ ವ್ಯಾಗನ್ ಟೈಗುನ್ (Volkswagen Tiguan) ಕಾರುಗಳು ಗರಿಷ್ಠ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದ್ದು, ಪ್ರೀಮಿಯಂ ಫೀಚರ್ಸ್ ಜೊತೆಗೆ ಪ್ರಯಾಣಿಕರ ಸುರಕ್ಷತೆಯಲ್ಲೂ ಹೆಚ್ಚು ಸುರಕ್ಷತೆಯನ್ನು ಖಾತ್ರಿಪಡಿಸುತ್ತವೆ. ಎಂಕ್ಯೂಬಿ-ಎo ಇನ್ ಪ್ಲ್ಯಾಟ್ ಫಾರ್ಮ್ ಆಧರಿಸಿರುವ ಹೊಸ ಕುಶಾಕ್ ಮತ್ತು ಟೈಗುನ್ ಕಾರುಗಳು ಹೆಚ್ಚಿನ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಶೇ.90 ರಷ್ಟು ಸ್ಥಳೀಯ ಬಿಡಿಭಾಗಗಳೊಂದಿಗೆ ಅಭಿವೃದ್ದಿಗೊಂಡಿವೆ.

ಹೊಸ ಕಾರುಗಳಲ್ಲಿ 40ಕ್ಕೂ ಹೆಚ್ಚು ಸುರಕ್ಷಾ ಫೀಚರ್ಸ್‌ಗಳಿದ್ದು, ಮಲ್ಟಿ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಮಲ್ಟಿ ಕೂಲಿಷನ್ ಬ್ರೇಕ್ಸ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ತ್ರಿ ಪಾಯಿಂಟ್ ಸೀಟ್ ಬೆಲ್ಟ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, ರಿಯರ್ ವ್ಯೂ ಕ್ಯಾಮೆರಾ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಕ್ರೂಸ್ ಕಂಟ್ರೊಲ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಸೇರಿ ಹಲವಾರು ಸುಧಾರಿತ ಸೌಲಭ್ಯಗಳಿವೆ.

Hyundai Verna:

 

 

ಐಷಾರಾಮಿ ಲುಕ್ ಹೊಂದಿರುವ ಹೊಸ ಹ್ಯುಂಡೈ ವೆರ್ನಾ (Hyundai Verna) ಕಾರು ಗುಣಮಟ್ಟದ ಉತ್ಪಾದನೆಯೊಂದಿಗೆ ಹೆಚ್ಚಿನ ಮಟ್ಟದ ಸೇಫ್ಟಿ ಫೀಚರ್ಸ್ ಹೊಂದಿದ್ದು, ಗ್ಲೊಬಲ್ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದೆ. ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಇದರಲ್ಲಿ ಆರು ಏರ್ ಬ್ಯಾಗ್, ಇಬಿಡಿ, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಸೌಲಭ್ಯಗಳನ್ನ ನೀಡಲಾಗಿದೆ.

ಇದರೊಂದಿಗೆ ಟಾಪ್ ಎಂಡ್ ವೆರಿಯೆಂಟ್ ಗಳಲ್ಲಿ ಹಲವು ಸುರಕ್ಷಾ ಸೌಲಭ್ಯಗಳನ್ನ ಒಳಗೊಂಡಿರುವ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ಸಹ ಜೋಡಿಸಲಾಗಿದ್ದು, ಇದು ಫ್ರಂಟ್ ಅಂಡ್ ರಿಯರ್ ಕ್ಯಾಮೆರಾ ಮತ್ತು ರಡಾರ್ ಸೌಲಭ್ಯದೊಂದಿಗೆ ಸಂಭಾವ್ಯ ಅಪಘಾತಗಳನ್ನ ತಡೆಯುವಲ್ಲಿ ಸಾಕಷ್ಟು ಸಹಕಾರಿಯಾಗಿದೆ.

advertisement

Leave A Reply

Your email address will not be published.