Karnataka Times
Trending Stories, Viral News, Gossips & Everything in Kannada

Govt. Schemes: ಬಡ ವರ್ಗದ ಜನತೆಗೆ ಕೇಂದ್ರ ಸರ್ಕಾರದ ಹೊಸ ಯೋಜನೆ ಘೋಷಣೆ, ಸೌಲಭ್ಯ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ

advertisement

ಇಂದು ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳನ್ನು (Govt Guaranteed Schemes) ಘೋಷಣೆ ಮಾಡುತ್ತಿದ್ದಂತೆ ಕೇಂದ್ರ ಸರಕಾರವು ಹೊಸ ಹೊಸ ಯೋಜನೆಗಳನ್ನು (New Govt. Schemes) ಜಾರಿಗೆ ತರುತ್ತಲೆ ಇದೆ. ಅದೇ ರೀತಿ ಮಹೀಳೆ ಯರನ್ನು ಸದೃಢ ಪಡಿಸಲು, ಬಡ ವರ್ಗದ ಜನತೆಗೆ ಸಹಾಯ ಹಸ್ತ ನೀಡಲು ಕೇಂದ್ರ ಸರಕಾರವು ಇದೀಗ ಹೊಸ ಯೋಜನೆಗಳನ್ನು ಆರಂಭಿಸಿದೆ. ಯಾವೆಲ್ಲ ಯೋಜನೆ, ಯಾರೆಲ್ಲ ಬಳಸಿಕೊಳ್ಳಬಹುದು ಎಂಬ ಮಾಹಿತಿ ತಿಳಿಯಲು ಈ ಲೇಖಜ ಓದಿ.

PM Vishwakarma Yojana:

 

 

ಇದೀಗ ಕೇಂದ್ರ ಸರ್ಕಾರ ಪಿಎಂ ವಿಶ್ವ ಕರ್ಮ ಯೋಜನೆ (PM Vishwakarma Yojana) ಯನ್ನು ಜಾರಿಗೆ ತಂದಿದೆ. ಕುಶಲಕರ್ಮಿಗಳು ಮತ್ತು ಕಾರ್ಮಿಕರಿಗಾಗಿ ಈ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿದ್ದು ಬಡವರ್ಗದ ಜನತೆಯನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮುಖ್ಯ ಗುರಿಯಾಗಿದೆ. ನೇಕಾರರು, ಅಕ್ಕಸಾಲಿಗರು, ಬಡಗಿ, ಶಿಲ್ಪಿ ರಚನಾಕಾರರು, ಚಮ್ಮಾರ, ಮೇಸ್ತ್ರಿ, ಬುಟ್ಟಿ ತಯಾರಿಸುವರು, ಸವಿತ ಸಮಾಜ ದವರು ಇತ್ಯಾದಿ ಕೆಲವು ವರ್ಗದ ಜನರು ಅರ್ಜಿ ಹಾಕಲು ಅವಕಾಶ ಇದೆ.ಇದರ ಮೂಲಕ ಸುಮಾರು 30 ಲಕ್ಷ ಕುಟುಂಬಗಳಿಗೆ ಶೇ 5 ರಷ್ಟು ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ.

Mahila Samman Savings Scheme:

 

advertisement

 

ರಾಜ್ಯ ಸರಕಾರವು ಮಹೀಳೆಯರಿಗಾಗಿ ಗೃಹಲಕ್ಷ್ಮಿ (Gruha Lakshmi), ಶಕ್ತಿ ಯೋಜನೆ (Shakti Yojana) ಆರಂಭ ಮಾಡಿದ್ರೆ ಕೇಂದ್ರ ಸರಕಾರವು ಮಹಿಳಾ ಸಮ್ಮಾನ್ ಪತ್ರ ಯೋಜನೆ (Mahila Samman Savings Certificate Scheme) ಯನ್ನು ಆರಂಭ ಮಾಡಿದೆ. ಈ ಯೋಜನೆಯಲ್ಲಿ ಕನಿಷ್ಠ ಮೊತ್ತದ ಹಣವನ್ನು ಹೂಡಿಕೆ ಮಾಡುವ ಮೂಲಕ ಮಹಿಳೆಯರು ಶೇಕಡಾ 7.5 ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ.ಈ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯ ಮೂಲಕ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಖಾತೆ ತೆರೆಯಲು ಅವಕಾಶ ಇದ್ದು ಠೇವಣಿ ಮಾಡಿದ 1 ವರ್ಷದ ನಂತರ, ಸುಮಾರು 40% ಮೊತ್ತವನ್ನು ಹಿಂಪಡೆಯಲು ಅವಕಾಶ ಇದೆ.ಮಹಿಳೆಯರು ಎರಡು ವರ್ಷಗಳ ಅವಧಿಯ ಮೂಲಕ ಕನಿಷ್ಠ 1,000 ರೂ.ನಿಂದ ಗರಿಷ್ಠ 2 ಲಕ್ಷ ರೂ.ವರೆಗೆ ಹಣ ಠೇವಣಿ ಮಾಡಲು ಅವಕಾಶ ಇದೆ.

PM Pranam Scheme:

 

 

ರೈತರನ್ನು ಪ್ರೋತ್ಸಾಹಿಸುವ ಯೋಜನೆ ಇದಾಗಿದ್ದು ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ, ರೈತರನ್ನು ಪ್ರೊತ್ಸಾಹ ಮಾಡಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರಕಾರ ಪಿಎಂ ಪ್ರಣಾಮ್‌ ಯೋಜನೆ (PM Pranam Scheme) ಯನ್ನು ಜಾರಿಗೆ ಮಾಡಿದೆ.ಕಡಿಮೆ ರಸಗೊಬ್ಬರ ಬಳಕೆ ಮಾಡಿದ್ದರೆ ಅದಕ್ಕೂ ಪ್ರೋತ್ಸಾಹ ಧನ ವಿತರಣೆ ಮಾಡಲಾಗುತ್ತದೆ.ದೇಶದೆಲ್ಲಡೆ ನೈಸರ್ಗಿಕ ಕೃಷಿ ಅಳವಡಿಕೆ ಜತೆಗೆ ರಾಸಾಯನಿಕ ಮುಕ್ತ ಪ್ರದೇಶ ವಾಗಬೇಕು ಎಂಬುದು ಈ ಯೋಜನೆಯ ಮುಖ್ಯ‌ಗುರಿ. ಕೇಂದ್ರ ಸರ್ಕಾರ ರಸಗೊಬ್ಬರ ಸಹಾಯಧನಕ್ಕಾಗಿ ಸಬ್ಸಿಡಿ ಹಣ ನೀಡಲಿದೆ.

advertisement

Leave A Reply

Your email address will not be published.