Karnataka Times
Trending Stories, Viral News, Gossips & Everything in Kannada

Post Office Scheme: ಅಂಚೆ ಕಛೇರಿ ಯೋಜನೆ ಮೂಲಕ ಹೂಡಿಕೆ ಮಾಡಿ, 100ರೂ. ಹೂಡಿಕೆಯ ಮೇಲೆ ನೀವು 2.5 ಲಕ್ಷ ರೂಪಾಯಿ ಪಡೆಯಬಹುದು

advertisement

ಇಂದು‌ ಪ್ರತಿಯೊಬ್ಬರು ಹೂಡಿಕೆಗಾಗಿ ಹೆಚ್ಚಿನ ಒತ್ತನ್ನು ನೀಡುತ್ತಾರೆ‌. ಅದರಲ್ಲೂ ಸೇವಿಂಗ್ ಅಂತ ಬಂದಾಗ ಬ್ಯಾಂಕ್, ಪೋಸ್ಟ್ ಆಫೀಸ್ (Post Office), ಚಿನ್ನ (Gold), ಆಸ್ತಿ ಇತ್ಯಾದಿಗಳ ಮೂಲಕ ಹಣ ಹೂಡಿಕೆ ಮಾಡುತ್ತಾರೆ. ಅದೇ ರೀತಿಯಲ್ಲಿ ಅತೀ ಹೆಚ್ಚು ಸೇಫ್ ಎಂದು ನಂಬಿಕೊಂಡು ಬಂದಿರುವ ಪೋಸ್ಟ್ ಆಫೀಸ್ (Post Office) ನಲ್ಲಿ ಹೂಡಿಕೆ ಪ್ರಮಾಣ ಹೆಚ್ಚಾಗಿದೆ. ಇಲ್ಲಿ ಕನಿಷ್ಠ ಮೊತ್ತವಾದರೂ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಕೆ ಮಾಡಬಹುದಾಗಿದೆ. ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹೂಡಿಕೆ ಸುರಕ್ಷಿತವಾಗಿರುತ್ತೆ ಅಷ್ಟೆ ಅಲ್ಲದೆ ಬ್ಯಾಂಕ್ ಗಳಲ್ಲಿ ನಿಶ್ಚಿತ ಠೇವಣಿ ಇಟ್ಟರೂ ಇಲ್ಲಿ ಸಿಗುವಷ್ಟು ಬಡ್ಡಿ ಸಿಗುವುದಿಲ್ಲ. ಹೆಚ್ಚಿನ ಬಡ್ಡಿ ಸೌಲಭ್ಯ ಇಲ್ಲಿ ದೊರೆಯುತ್ತದೆ.

ಹೆಚ್ಚಿನ ಬಡ್ಡಿ ಸೌಲಭ್ಯ:

ಪೋಸ್ಟ್ ಆಫೀಸ್ ಯೋಜನೆ (Post Office Scheme) ಯಡಿಯಲ್ಲಿ ನೀವು ಕನಿಷ್ಠ 100 ರೂಪಾಯಿ ಹೂಡಿಕೆ ಮಾಡಿದ್ರೆ ‌ 5 ವರ್ಷಗಳಲ್ಲಿ 1.80 ಲಕ್ಷ ರೂ. ಪಡೆಯಬಹುದಾಗಿದ್ದು ಇದರಲ್ಲಿ 6.7 %ತ ಬಡ್ಡಿಯನ್ನು ಪಡೆಯಬಹುದು.

5 ವರ್ಷಗಳಲ್ಲಿ ನೀವು 2.5 ಲಕ್ಷ ರೂ ಪಡೆಯಬಹುದು:

advertisement

ಅದೇ ರೀತಿ ಪೋಸ್ಟ್ ಆಫೀಸ್‌ (Post office) ನಲ್ಲಿ ಹೂಡಿಕೆ ಮಾಡಲು ಹಲವು ರೀತಿಯ ಅವಕಾಶ ಇದ್ದು ಠೇವಣಿ ಖಾತೆಯನ್ನು RD ಮೂಲಕ ತೆರೆಯಬಹುದು. ಅದೇ ರೀತಿಯಾಗಿ, ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ ನಿಮ್ಮ 1.80 ಲಕ್ಷ ರೂಪಾಯಿ ಠೇವಣಿ ಇದ್ದರೆ 2,12,972 ರೂಪಾಯಿಗಳನ್ನು ಪಡೆಯಬಹುದು. SIP ನಲ್ಲಿ ಹೂಡಿಕೆ ಮಾಡಿದ್ರೆ ಈ ಮೊತ್ತವು 5 ವರ್ಷಗಳಲ್ಲಿ 12% ನಷ್ಟು ಅಂದರೆ ರೂ 2,47,459 ದೊರೆಯುತ್ತದೆ.

 

 

SIP ನಲ್ಲಿ ನೀವು ತಿಂಗಳಿಗೆ ಕನಿಷ್ಠ ಮೊತ್ತದ ಹಣ ಹೂಡಿಕೆ ಮಾಡಿದ್ರೆ ಸಾಕು. ಆದರೆ RD ನಲ್ಲಿ ನೀವು ತಿಂಗಳಿಗೆ ಕೇವಲ 100 ರೂಗಳನ್ನು ಠೇವಣಿ ಮಾಡುವ ಮೂಲಕ ಖಾತೆಯನ್ನು ತೆರೆಯಬಹುದು.

Time Deposit Scheme:

ಪೋಸ್ಟ್ ಆಫೀಸ್ (Post Office) ಟೈಮ್ ಡೆಪಾಸಿಟ್ ಸ್ಕೀಮ್ (Time Deposit Scheme) ಮೂಲಕ 5 ವರ್ಷಗಳ ಠೇವಣಿಗೆ 7.5 ಪ್ರತಿಶತ ವಾರ್ಷಿಕ ಬಡ್ಡಿ ಇರುತ್ತದೆ. ಇದರಲ್ಲಿ 1-3 ವರ್ಷ ಹೂಡಿಕೆ ಮಾಡಿದರೆ ಶೇ.6.90 ಬಡ್ಡಿ ದೊರೆಯುತ್ತದೆ. ಅದೇ ರೀತಿ ಪೋಸ್ಟ್ ಆಫೀಸ್ ಸುಕನ್ಯಾ ಸಮೃದ್ಧಿ ಯೋಜನೆ (Post Office Sukanya Samriddhi Yojana) ಮೂಲಕ‌ ಹೆಣ್ಣುಮಕ್ಕಳಿಗೆ ಹೂಡಿಕೆ ಮಾಡಲು ಉತ್ತಮ ಅವಕಾಶ ಇದ್ದು ಇದರಲ್ಲಿ 10 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಖಾತೆ ತೆರೆಯಲು ಅವಕಾಶ ಇದ್ದು ಬಡ್ಡಿ ದರ ಶೇ.7.6ರಷ್ಟಿರುತ್ತದೆ.

advertisement

Leave A Reply

Your email address will not be published.