Govt. Employees: ಸಾಲ ಪಡೆಯುವ ಸರ್ಕಾರಿ ನೌಕರರಿಗೆ ಸಿಹಿಸುದ್ದಿ, ಇಎಂಐ ಮೇಲೆ ಯಾವುದು ಷರತ್ತು ಇಲ್ಲ
![](https://karnatakatimes.com/wp-content/uploads/2023/12/Good-news-for-govt-employees-who-avail-loans.jpg)
advertisement
ಸರಕಾರಿ ನೌಕರಿ ಎಂದರೆ ಮೊದಲಿನಿಂದಲೂ ಒಂದು ತರಹದ ಸುರಕ್ಷಿತ ಎನ್ನುವ ಭಾವ ಇದೆ. ಇದರ ಜೊತೆಗೆ ಸರಕಾರಿ ನೌಕರಿಯಲ್ಲಿ ಇರುವವರನ್ನು ಸಮಾಜ ಗೌರವದಿಂದ ನೋಡುತ್ತದೆ. ಯಾವುದೇ ಉದ್ದಿಮೆ ಅಥವಾ ವ್ಯವಹಾರದಲ್ಲಿ ಎಷ್ಟೇ ಬದಲಾವಣೆ ಆದರೂ ಸರ್ಕಾರಿ ನೌಕರರ (Govt. Employees) ಸ್ಥಿತಿಗತಿಗಳು ಹೆಚ್ಚಾಗಿ ಬದಲಾಗುವುದಿಲ್ಲ. ಅವರ ವೇತನವಾಗಲಿ ಅಥವಾ ಇತರ ಭತ್ಯೆಗಳಾಗಲಿ ಸರಿಯಾಗಿ ಸಿಗುತ್ತಿರುತ್ತವೆ.
ಸರ್ಕಾರಿ ನೌಕರರಿಗೆ ನಿಗದಿತ ಸಮಯಕ್ಕೆ ಅಥವಾ ಕೆಲವೊಂದು ಬಾರಿ ವಿಳಂಬವಾಗಿ ಸಂಬಳ (Salary) ದಲ್ಲಿ ಹೆಚ್ಚಳ ಭತ್ಯೆಗಳಲ್ಲಿ ಹೆಚ್ಚಳ ಆಗುತ್ತಿರುವ ವರದಿಗಳನ್ನು ನೀವು ಕೇಳುತ್ತಿರಬಹುದು. ಆದರೆ ಇದರ ಜೊತೆಗೆ ಸರ್ಕಾರಿ ನೌಕರರಿಗೆ ಹಣದ ಅಗತ್ಯ ಇದ್ದಾಗ ಯಾವುದೇ ಬಡ್ಡಿ ಇಲ್ಲದೆ ಸಾಲದ ಸೌಲಭ್ಯ ಸಿಗುತ್ತದೆ ಎನ್ನುವುದು ನಿಮಗೆ ಗೊತ್ತಿದೆಯೇ? ಇಲ್ಲ ಎಂದಾದಲ್ಲಿ ಈಗ ಇದರ ಬಗ್ಗೆ ಮಾಹಿತಿ ನೀಡುತ್ತೇವೆ.
ಈ ಸಾಲ ಸೌಲಭ್ಯವನ್ನು ಹೆಚ್ಚಾಗಿ ಎಲ್ಲಾ ಸರ್ಕಾರಿ ನೌಕರರು ಕೂಡ ಒಂದಲ್ಲ ಒಂದು ಸಮಯದಲ್ಲಿ ಬಳಸಿರುತ್ತಾರೆ. ಇಲ್ಲಿ ಹಣವನ್ನು ಮರುಪಾವತಿ ಮಾಡುವುದು ಸಂಪೂರ್ಣ ನೌಕರರ ಮೇಲೆ ಅವಲಂಬಿತವಾಗಿರುತ್ತದೆ ಹಾಗೂ ಈ ಸಾಲಕ್ಕೆ ಬಡ್ಡಿ ಕೂಡ ಇರುವುದಿಲ್ಲ.
Provident Fund Loan:
2004 ರ ಮೊದಲು ಜನರಲ್ ಪ್ರಾವಿಡೆಂಟ್ ಫಂಡ್ (GPF) ಎಲ್ಲಾ ಸರ್ಕಾರಿ ನೌಕರರಿಗೆ ಇರುತ್ತಿತ್ತು. ನಿಗದಿತ ಮೊತ್ತ ಪ್ರತಿ ತಿಂಗಳು ನೌಕರರ ಕಡೆಯಿಂದ ಡೆಪಾಸಿಟ್ ಆಗುತ್ತಿತ್ತು. ಇದು ಆ ನೌಕರರ ನಿವೃತ್ತಿಯ ಸಮಯದಲ್ಲಿ ಸಹಾಯ ಮಾಡುತ್ತಿತ್ತು. ಇಲ್ಲಿಂದ ಸಾಲದ ರೂಪದಲ್ಲಿ ಹಣ ಪಡೆದುಕೊಂಡಾಗ ನೌಕರರು ಯಾವುದೇ ರೀತಿಯ ಬಡ್ಡಿ ಇಲ್ಲದೆ ತೆಗೆದುಕೊಂಡ ಹಣವನ್ನು ಮರುಪಾವತಿ ಮಾಡಬಹುದು. ಈಗ ಜನರಲ್ ಪ್ರಾವಿಡೆಂಟ್ ಫಂಡ್ ಬದಲಿಗೆ ನ್ಯೂ ಪೆನ್ಷನ್ ಸ್ಕೀಮ್ ಚಾಲ್ತಿಯಲ್ಲಿದೆ.
advertisement
2004 ರ ನಂತರ ಬದಲಾದ ಈ ಅಕೌಂಟಿನಿಂದನೂ ಕೂಡ ನೌಕರರು ಅದೇ ತರಹದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಜಿಪಿಎಫ್ ಅಕೌಂಟ್ ನಲ್ಲಿ ಸಂಬಳದ ಬೇಸಿಕ್ ಮತ್ತು ಡಿ.ಎ ಯ ಆರು ಶೇಕಡ ದಷ್ಟು ಡೆಪೋಸಿಟ್ ಆಗುತ್ತಿತ್ತು. ಈ ಡೆಪಾಸಿಟ್ ಆದ ಹಣಕ್ಕೆ ಸರ್ಕಾರ ಬಡ್ಡಿ ಕೂಡ ನೀಡುತ್ತಿತ್ತು. ಪ್ರತಿ ಮೂರು ತಿಂಗಳಿಗೆ ಒಮ್ಮೆ ಬಡ್ಡಿಯ ದರಗಳು ಬದಲಾಗುತ್ತಿರುತ್ತವೆ.
ಎಷ್ಟು ಸಾಲ ಸಿಗುತ್ತದೆ ?
ಮೊದಲು GPF Account ನಲ್ಲಿ ಇರುವ 75 ಶೇಕಡಾದಷ್ಟು ಹಣವನ್ನು ಸಾಲವಾಗಿ ಪಡೆಯಬಹುದಿತ್ತು. ಆದರೆ 2021ರ ನಿಯಮಗಳ ಪ್ರಕಾರ ಈ ವ್ಯಾಪ್ತಿಯನ್ನು 10 ಶೇಕಡದಿಂದ 50% ದವರೆಗೆ ಬದಲಾಯಿಸಿದ್ದರು. ಆದರೆ ಇನ್ನೊಮ್ಮೆ ಅದಕ್ಕೆ ಬದಲಾವಣೆ ತಂದು 90 ಶೇಕಡಾದಷ್ಟು GPF ನಲ್ಲಿರುವ ಹಣವನ್ನು ಪಡೆದುಕೊಳ್ಳಬಹುದೆಂದು ಬದಲಾವಣೆ ಮಾಡಲಾಯಿತು. ನೌಕರರು ಸಲ್ಲಿಸಿದ ಸೇವೆಯ ಆಧಾರದಲ್ಲಿ ಎಷ್ಟು ಶೇಕಡ ಹಣ ಪಡೆಯಬಹುದು ಎನ್ನುವುದು ನಿರ್ಧಾರ ಆಗುತ್ತದೆ. ಇದೇ ರೀತಿ ಮರುಪಾವತಿಯ ಅವಧಿಯು ಕೂಡ ಇದೆ ಆಧಾರದಲ್ಲಿ ನಿಗದಿಯಾಗುತ್ತದೆ. ಎಷ್ಟೇ ಮರುಪಾವತಿಯ ಅವಧಿ ಇದ್ದರೂ ಎಷ್ಟೇ ಮೊತ್ತ ಸಾಲವಾಗಿ ಪಡೆದರು ಇದಕ್ಕೆ ಬಡ್ಡಿ ಇರುವುದಿಲ್ಲ.
ಸೇವೆಯಲ್ಲಿ 15 ವರ್ಷ ಪೂರೈಸಿದ ನೌಕರರಿಗೆ (Govt. Employees) 75 ಶೇಕಡದಿಂದ 90% ದ ವರೆಗೆ ಸಾಲ (Loan) ಸಿಗುತ್ತದೆ. ಈ ಸಾಲಕ್ಕೆ ಯಾವುದೇ ರೀತಿಯ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ಒಂದು ವೇಳೆ ನಿಮ್ಮ ನಿವೃತ್ತಿಗೆ ಹತ್ತು ವರ್ಷಗಳಿಗಿಂತ ಕಡಿಮೆ ಅವಧಿ ಬಾಕಿ ಇದೆ ಎಂದಾದಲ್ಲಿ ನೀವು ಪಡೆದ ಸಾಲವನ್ನು ನೀವು ಮರುಪಾವತಿ ಮಾಡಬೇಕು ಎಂಬ ನಿಯಮವು ಇಲ್ಲ.
15 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿದ ನೌಕರರಿಗೆ 75% ಸಾಲ ಸಿಗುತ್ತದೆ. ವಿಶೇಷ ಸ್ಥಿತಿಗಳಲ್ಲಿ 90 ಶೇಕಡಾ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇಲ್ಲಿಯೂ ಕೂಡ ಯಾವುದೇ ತರಹದ ಬಡ್ಡಿ ಇರದೇ ಇದ್ದರು ಈ ಹಣವನ್ನು 24 ತಿಂಗಳುಗಳಲ್ಲಿ EMI ಮೂಲಕ ನೌಕರರು ಮರುಪಾವತಿ ಮಾಡಬೇಕಾಗುತ್ತದೆ.
advertisement