Karnataka Times
Trending Stories, Viral News, Gossips & Everything in Kannada

New RTO Rules: ಏಪ್ರಿಲ್ 1 ರಿಂದಲೇ ಈ ರಾಜ್ಯದಲ್ಲಿ ಹೊಸ RTO ನಿಯಮ ಜಾರಿ! ಶೀಘ್ರದಲ್ಲೇ ಎಲ್ಲರಿಗೂ ಅನ್ವಯ

advertisement

ನೀವು ವಾಹನ ಚಲಾಯಿಸುವವರಾಗಿದ್ದರೆ RTO ನಿಯಮಗಳನ್ನ (RTO Rules) ಪಾಲಿಸಲೇಬೇಕು. ಯಾವುದೇ ರಾಜ್ಯ ತನ್ನ ರಾಜ್ಯದಲ್ಲಿ ಪ್ರಯಾಣಿಸುವ ಚಾಲಕರಿಗಾಗಿ ಹಲವಾರು ನಿಯಮಗಳನ್ನು ರೂಪಿಸಿರುತ್ತದೆ. ಈ ನಿಯಮಗಳ ಪಾಲನೆ ಪ್ರತಿಯೊಬ್ಬರ ಕರ್ತವ್ಯ ಒಂದು ವೇಳೆ ನಿಯಮ ಪಾಲನೆ ಮಾಡದೆ ಇದ್ದಲ್ಲಿ ಬಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ. ಅಷ್ಟೇ ಅಲ್ಲದೆ ಡ್ರೈವಿಂಗ್ ಲೈಸೆನ್ಸ್ (Driving License) ಕಳೆದುಕೊಳ್ಳುವ ಸಂಭವವು ಎದುರಾಗಬಹುದು..

RTO ಹೊಸ ನಿಯಮ ಏನು?

 

Image Source: Business League

 

ಇದೀಗ RTO ಹೊಸ ನಿಯಮಗಳನ್ನ (New RTO Rules) ರಾಜಸ್ಥಾನ ಸಾರಿಗೆ ಇಲಾಖೆ ತಿಳಿಸಿದ್ದು ಇದೇ ಏಪ್ರಿಲ್ 1, 2024 ರಿಂದ ಜಾರಿಗೆ ಬರಲಿದೆ. ರಾಜಸ್ಥಾನ ಸಾರಿಗೆ ಇಲಾಖೆ ತಿಳಿಸಿರುವಂತೆ ಏಪ್ರಿಲ್ 1, 2024 ರಿಂದ ಯಾವುದೇ ಪರವಾನಿಗೆಗಳು ಹಾಗೂ RC Smart Card ಗಳನ್ನು ನೀಡಲಾಗುವುದಿಲ್ಲ. ಈ ಎರಡು ಪ್ರಮುಖ ದಾಖಲೆಗಳನ್ನು ನೀವು ಆನ್ಲೈನ್ ನಲ್ಲಿ ಪಡೆದುಕೊಳ್ಳಬಹುದು.

advertisement

ಇದರ ಜೊತೆಗೆ ಲೈಸೆನ್ಸ್ – RC ಗೆ ವಿಧಿಸಲಾಗಿದ್ದ 200 ರೂಪಾಯಿ ಶುಲ್ಕವನ್ನು ಇನ್ನು ಮುಂದೆ ವಿಧಿಸುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಇದರಿಂದ ಸಾಮಾನ್ಯ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಹಳೆಯ DL ಮತ್ತು RC ಯನ್ನು ನವೀಕರಣಗೊಳಿಸಿಕೊಳ್ಳಬೇಕು ಹಾಗೂ ಮನೆಯಲ್ಲಿಯೇ ಕುಳಿತು ಈ ಕೆಲಸವನ್ನು ಮಾಡಬಹುದು ಎಂದು ಸರ್ಕಾರ ತಿಳಿಸಿದೆ ಆದ್ದರಿಂದ ನೀವು ಇದಕ್ಕಾಗಿ ಒಂದೇ ಒಂದು ರೂಪಾಯಿ ಶುಲ್ಕವನ್ನು ಕೂಡ ಪಾವತಿಸುವ ಅಗತ್ಯ ಇಲ್ಲ.

ಮನೆಯಲ್ಲಿಯೇ ಕುಳಿತು ಪಡೆಯಬಹುದು ಪರವಾನಿಗೆ:

 

Image Source: The Indian Express

 

DL ಮತ್ತು RC ಪಡೆದುಕೊಳ್ಳುವುದಕ್ಕೆ ಈಗ ಹೆಚ್ಚಿನ ಅವಕಾಶ ಇದೆ ಅದರಲ್ಲೂ ಮನೆಯಲ್ಲಿಯೇ ಕುಳಿತು ಪರವಾನಿಗೆ ಪಡೆದುಕೊಳ್ಳುವಂತಹ ಸೌಲಭ್ಯ ನೀಡಲಾಗುತ್ತಿದೆ. e-DL, e-RC ಗೆ ಹೆಚ್ಚು ಮಹತ್ವ ನೀಡಲಾಗಿದ್ದು ಜನರು ಡಿಎಲ್ ಮಾಡಿಸುವುದಕ್ಕೆ RTO ಕಚೇರಿಗೆ ಅಲೆದಾಡಬೇಕಾದ ಅಗತ್ಯ ಇಲ್ಲ. ಇ ಮಿತ್ರ ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್ಸೈಟ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಹಣವು ಉಳಿತಾಯವಾಗುತ್ತದೆ ಜೊತೆಗೆ ಸಮಯವೂ ವ್ಯರ್ಥವಾಗುವುದಿಲ್ಲ. ಎಂದು ಜೈಪುರದ RTO ರಾಜೇಶ್ ಚೌಹಾಣ್ ತಿಳಿಸಿದ್ದಾರೆ.

ಇತ್ತೀಚಿಗೆ ಜೈಪುರ RTO ಕಚೇರಿಯಲ್ಲಿ e-DL ಮತ್ತು e-RC ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಭೆ ನಡೆಸಲಾಗಿತ್ತು ಈ ಸಭೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು, ಪೊಲೀಸ್ ಕಮಿಷನರ್, ಟ್ರಾಫಿಕ್ ಪೊಲೀಸ್, ವಾಹನ ವಿತರಕ ಸಂಘದ ಪ್ರತಿನಿಧಿಗಳು, ಇ ಮಿತ್ರ ಅಪ್ಲಿಕೇಶನ್ ಆಪರೇಟರ್ ಗಳು ಉಪಸ್ಥಿತರಿದ್ದರು.

advertisement

Leave A Reply

Your email address will not be published.