Karnataka Times
Trending Stories, Viral News, Gossips & Everything in Kannada

PM Kisan: 17 ನೇ ಕಂತಿನ ಕಿಸಾನ್ ಹಣ ಖಾತೆಗೆ ಜಮೆ ಯಾಗಬೇಕಿದ್ರೆ ಈ ಕೆಲಸ ಕೂಡಲೇ ಮಾಡಿ! ಹೊಸ ಆದೇಶ

advertisement

ರೈತರು ಈ ದೇಶದ ಮುಖ್ಯ ಅಂಗ ವಾಗಿದ್ದು ರೈತರ ಅಭಿವೃದ್ಧಿ ಕೂಡ ದೇಶದ ಪ್ರಗತಿ ಗೆ ಬಹಳ ಮುಖ್ಯವಾಗುತ್ತದೆ. ಇಂದು ರೈತರ ಅಭಿವೃದ್ಧಿಗಾಗಿ ಸರಕಾರ ಹಲವು ರೀತಿಯ ಯೋಜನೆಯನ್ನು ರೂಪಿಸುತ್ತಲೆ ಬಂದಿದೆ. ಅದರಲ್ಲಿ ಮುಖ್ಯವಾಗಿ ಕೇಂದ್ರ‌ ಸರಕಾರದ ಕಿಸಾನ್ ಯೋಜನೆ (PM Kisan) ಕೂಡ ಒಂದಾಗಿದೆ. ರೈತರನ್ನು ಆರ್ಥಿಕವಾಗಿ ಸಧೃಡ ಪಡಿಸಲು, ಕೃಷಿಗೆ ಬೇಕಾದ ಸಲಕರಣೆಗಳನ್ನು ಖರೀದಿ ಮಾಡಲು ರೈತರ ಖಾತೆಗೆ ಕಿಸಾನ್ ಹಣವನ್ನು ಕೂಡ ಕೇಂದ್ರ ಸರಕಾರ ಜಮೆ ಮಾಡುತ್ತಿದೆ.

PM Kisan ಮೂರು ಕಂತುಗಳಲ್ಲಿ ಜಮೆ:

 

Image Source: The Hans India

 

ಕಿಸಾನ್ ಯೋಜನೆ (PM Kisan) ಯ ಮೊತ್ತವನ್ನು ಕೇಂದ್ರ ಸರಕಾರವು ‌ ಮೂರು ಕಂತುಗಳಲ್ಲಿ ಬ್ಯಾಂಕ್ ಖಾತೆಗೆ 6,000 ರೂ ಜಮಾ ಮಾಡುತ್ತಿದ್ದು ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ಹಣ ‌ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಯಾಗುತ್ತಿದೆ. ಈ ಹಣ ಖಾತೆಗೆ ‌ಜಮೆ ಯಾಗಬೇಕಿದ್ರೂ ಫಲಾನುಭವಿಗಳು ಕೆಲವೊಂದು ನಿಯಮಗಳನ್ನು ‌ಪಾಲಿಸಲೇ ಬೇಕಾಗುತ್ತದೆ.

advertisement

PM Kisan 17 ನೇ ಕಂತಿನ ಹಣ ಯಾವಾಗ ಜಮೆ?

 

Image Source: India.com

 

ಇಲ್ಲಿಯವರೆಗೆ ನೊಂದಣಿ ಮಾಡಿದ ರೈತರಿಗೆ 16 ಕಂತಿನ ಹಣ ಬಿಡುಗಡೆಯಾಗಿದ್ದು. 17ನೇ ಕಂತಿನ ಮೊತ್ತ ಇನ್ನಷ್ಟೆ ಬಿಡುಗಡೆ ಯಾಗಬೇಕಿದೆ. 16ನೇ ಕಂತಿನ ಹಣ ಫೆಬ್ರವರಿ ತಿಂಗಳಿನಲ್ಲಿ ಜಮೆ ಆಗಿದ್ದು 17ನೇ ಕಂತಿನ ಹಣ ಯಾವಾಗ ಬರಲಿದೆ ಎಂದು ರೈತರು ಕಾಯುತ್ತಿದ್ದಾರೆ. 17 ನೇ ಕಂತಿನ ಹಣ ಜೂನ್ ತಿಂಗಳಿನಲ್ಲಿ ಜಮೆ ಯಾಗಲಿದ್ದು ಅದಕ್ಕೂ ಮೊದಲು ಈ ಕೆಲಸವನ್ನು ಪೂರ್ಣಗೊಳಿಸಬೇಕು ಎಂದು ಕೇಂದ್ರ ಸರಕಾರ ಮಾಹಿತಿ ‌ನೀಡಿದೆ.

ಯಾವುದು ಆ ಕೆಲಸ?

  • ನಿಮಗೆ ಹದಿನೇಳನೇ ಕಂತಿನ ಹಣ ಜಮೆ ಯಾಗಬೇಕಿದ್ರೆ ರೈತರು KYC ಅನ್ನು ಪೂರ್ಣಗೊಳಿಸುವುದು ಕಡ್ಡಾಯ ವಾಗಿದೆ.‌ ಆಧಾರ್ (Aadhaar Card), ಬ್ಯಾಂಕ್ ಖಾತೆ (Bank Account) ಲಿಂಕ್ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ಪರಿಶೀಲಿಸಿ.
  • ನೀವು ನೀಡಿದ ದಾಖಲೆಗಳಲ್ಲಿ ಏನಾದರೂ ತಪ್ಪಾಗಿದ್ದರೆ ಅದನ್ನು ಕೂಡಲೇ ಸರಿಪಡಿಸಬೇಕು. ಹೀಗೆ ಮಾಡಿದ್ದಲ್ಲಿ ಹದಿನೇಳನೆ ಕಂತಿನ ಮೊತ್ತವನ್ನು ನೀವು ಪಡೆಯಬಹುದು.
  • ಇನ್ನೂ ನಿಮ್ಮ‌ ಭೂ ದಾಖಲೆಗಳಿಗೂ ಆಧಾರ್ ಸಿಡಿಂಗ್ ಆಗಿದೆಯೇ ಎಂಬುದನ್ನು ಖಚಿತ‌ ಪಡಿಸಿಕೊಳ್ಳಿ.
  • ಈ ಎಲ್ಲ ಕೆಲಸ ಗಳು ಪೂರ್ಣ ವಾದರೂ ಪಿಎಂ ಕಿಸಾನ್ ಹಣ (PM Kisan Money) ಜಮೆ ಯಾಗದೇ ಇದ್ದಲ್ಲಿ‌ ಅರ್ಹ ರೈತರು ಪಿಎಂ ಕಿಸಾನ್ ಸಹಾಯವಾಣಿಗೆ ಕರೆ ಮಾಡುವ ಮೂಲಕ ದೂರು ಸಲ್ಲಿಸಬಹುದಾಗಿದೆ.

advertisement

Leave A Reply

Your email address will not be published.