Karnataka Times
Trending Stories, Viral News, Gossips & Everything in Kannada

Electric Vehicle: ಎಲೆಕ್ಟ್ರಿಕ್ ವಾಹನಗಳಿಗೆ ಎಂದು ಬಂಪರ್ ಆಫರ್ ಘೋಷಿಸಿದ ಕೇಂದ್ರ ಸರ್ಕಾರ !

advertisement

ಪೆಟ್ರೋಲ್, ಡೀಸೆಲ್ ಬಳಕೆ ಮಾಡದ ಪರಿಸರಕ್ಕೆ ಪೂರಕವಾದ ಎಲೆಕ್ಟ್ರಿಕ್ ವಾಹನ (Electric Vehicle) ಗಳು ಮಾರುಕಟ್ಟೆಯಲ್ಲಿ ಬಹಳಷ್ಟು ಲಭ್ಯವಿದೆ. ಆದರೂ ಅಲ್ಲೋ ಇಲ್ಲೋ ನಡೆದ ಕೆಲ ಅವಗಡಗಳ ಕುರಿತು ಕೇಳಿಯೋ ಇಲ್ಲ ನೋಡಿಯೋ ಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಾರ್ಚ್ 13 ರಂದು ಎಲೆಕ್ಟ್ರಿಕ್ ಮೊಬಿಲಿಟಿ ಪ್ರಮೋಷನ್ ಸ್ಕೀಮ್ (EMPS) ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಮತ್ತು 4 ತಿಂಗಳವರೆಗೆ ಮಾನ್ಯವಾಗಿರುತ್ತದೆ.

ಈವರೆಗೆ 5,829 ಕೋಟಿ ಸಹಾಯಧನ ವಿತರಣೆ:

2019 ರಲ್ಲಿ ಪ್ರಾರಂಭವಾದ FAME 2 ಅಡಿಯಲ್ಲಿ, ಇಲ್ಲಿಯವರೆಗೆ ಸುಮಾರು 12 ಲಕ್ಷ ಇವಿ ದ್ವಿಚಕ್ರ ವಾಹನಗಳು, 1.41 ಲಕ್ಷ ತ್ರಿಚಕ್ರ ವಾಹನಗಳು ಮತ್ತು 16,991 ನಾಲ್ಕು ಚಕ್ರ ವಾಹನಗಳಿಗೆ ಸಬ್ಸಿಡಿಯನ್ನು ಒದಗಿಸಲಾಗಿದೆ. ಫೇಮ್ 2 ಯೋಜನೆಯಡಿಯಲ್ಲಿ 5,829 ಕೋಟಿ ರೂ.ಗೂ ಹೆಚ್ಚು ಸಬ್ಸಿಡಿ ವಿತರಿಸಲಾಗಿದೆ.

ಎಲೆಕ್ಟ್ರಿಕ್‌ ಬೈಕ್ ಹಾಗೂ ತ್ರಿಚಕ್ರ ವಾಹನ ಮಾರಾಟ ಹೆಚ್ಚಿಸಲು ಹೊಸ ಯೋಜನೆ:

 

Image Source: Times Now

 

advertisement

ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಮಾರ್ಚ್ 13 ರಿಂದ ಎಲೆಕ್ಟ್ರಿಕ್ ಮೊಬಿಲಿಟಿ ಪ್ರಮೋಷನ್ ಸ್ಕೀಮ್ (EMPS) ಅನ್ನು ಪ್ರಾರಂಭಿಸುವುದಾಗಿ ಘೋಷಿಸಿತ್ತು. ಎಲೆಕ್ಟ್ರಿಕ್ ವಾಹನಗಳ (Electric Vehicles) ಮಾರಾಟವನ್ನು ಉತ್ತೇಜಿಸಲು ಸರ್ಕಾರ ಈ ಹೊಸ ಯೋಜನೆಯನ್ನು ತಂದಿದೆ. ನವೀಕರಿಸಿದ ಎಲೆಕ್ಟ್ರಿಕ್ ವೆಹಿಕಲ್ (Electric Vehicle) ಪ್ರಚಾರ ಯೋಜನೆಯು ವೇಗದ ಅಡಾಪ್ಷನ್ ಮತ್ತು ಎಲೆಕ್ಟ್ರಿಕ್ ವೆಹಿಕಲ್‌ಗಳ ತಯಾರಿಕೆಯನ್ನು (FAME-II) ಬದಲಿಸುತ್ತದೆ, ಈ ಯೋಜನೆಯು ಇದೇ ಮಾರ್ಚ್ 31, 2024 ರಂದು ಮುಕ್ತಾಯಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಯೋಜನೆಯ ಮೂಲ ಉದ್ದೇಶವೇನು?

 

Image Source: Business Standard

 

ಈಗಾಗಲೇ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಹೊಂದಿರುವ ಎಲೆಕ್ಟ್ರಿಕ್ ವಾಹನಗಳಿಗೆ (Electric Vehicles) ಎಲೆಕ್ಟ್ರಿಕ್ ವಾಹನಗಳಿಗೆ ಇನ್ನಷ್ಟು ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳ ಮಾರಾಟವನ್ನು ಹೆಚ್ಚಿಸಿ ಪರಿಸರವನ್ನು ರಕ್ಷಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಪ್ರಕಟಿಸಿದೆ. 500 ಕೋಟಿ ರೂ.ಗಳ ಈ ಯೋಜನೆಯಡಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳು ಅಗ್ಗವಾಗಲಿವೆ. ಈ ಎಲೆಕ್ಟ್ರಿಕ್ ಮೊಬಿಲಿಟಿ ಪ್ರಮೋಷನ್ ಸ್ಕೀಮ್ (EMPS) ಯೋಜನೆಯು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಮತ್ತು 4 ತಿಂಗಳವರೆಗೆ ಮಾನ್ಯವಾಗಿರುತ್ತದೆ.

ಫೇಮ್ ಇಂಡಿಯಾ ಯೋಜನೆಯ ಬಜೆಟ್ ಅಲ್ಲಿ ಹೆಚ್ಚಳ:

ಫೇಮ್ ಇಂಡಿಯಾ ಯೋಜನೆಯಡಿ, ಎಲೆಕ್ಟ್ರಿಕ್ ಎರಡು, ಮೂರು ಮತ್ತು ನಾಲ್ಕು ಚಕ್ರಗಳ ಸಬ್ಸಿಡಿಯನ್ನು 7048 ಕೋಟಿ ರೂ.ಗೆ ಪರಿಷ್ಕರಿಸಲಾಗಿದೆ. ಈ ಪೈಕಿ ವಿದ್ಯುತ್ ದ್ವಿಚಕ್ರ ವಾಹನಗಳಿಗೆ 5311 ಕೋಟಿ ರೂ. ಅಲ್ಲದೆ, ಎಲೆಕ್ಟ್ರಿಕ್ ಬಸ್ ಮತ್ತು ಇವಿ ಚಾರ್ಜಿಂಗ್ ಸ್ಟೇಷನ್ ನಿರ್ಮಿಸಲು 4048 ಕೋಟಿ ರೂ. ಫೇಮ್ ಇಂಡಿಯಾ ಯೋಜನೆಯ ಗುರಿಯು ದೇಶದಲ್ಲಿ ಇವಿಗಳು ಮತ್ತು ಚಾರ್ಜರ್‌ಗಳಿಗೆ ಸಬ್ಸಿಡಿಯನ್ನು ಒದಗಿಸಲಾಗುತ್ತದೆ ಇದರಿಂದ ಅವುಗಳ ಮಾರಾಟವನ್ನು ಹೆಚ್ಚಿಸಬಹುದು. ಇದಲ್ಲದೆ, ಈ ಯೋಜನೆಯಲ್ಲಿ, ದೇಶದಲ್ಲಿ ಇವಿ ಭಾಗಗಳ ತಯಾರಿಕೆಯನ್ನು ಸಹ ಪ್ರೋತ್ಸಾಹಿಸಲಾಗುತ್ತದೆ. ಇದರಿಂದಾಗಿ ಎಲೆಕ್ಟ್ರಿಕ್ ವಾಹನಗಳ ಕೊಂಡುಕೊಳ್ಳುವಿಕೆ ಹೆಚ್ಚಾಗುತ್ತದೆ ಎನ್ನುವುದು ಕೇಂದ್ರ ಸರ್ಕಾರದ ಲೆಕ್ಕಾಚಾರವಾಗಿದೆ.

advertisement

Leave A Reply

Your email address will not be published.