Karnataka Times
Trending Stories, Viral News, Gossips & Everything in Kannada

Electric Vehicle: ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವವರಿಗೆ ಊಹಿಸದ ಕಹಿಸುದ್ದಿ

advertisement

ಇತ್ತೀಚಿನ ದಿನದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಗಣನೀಯವಾಗಿ ಹೆಚ್ಚಾಗುತ್ತಲೇ ಇದೆ. ಪೆಟ್ರೋಲ್ ಹಾಗೂ ಡಿಸೆಲ್ ವಾಹನಕ್ಕಿಂಲೂ ಎಲೆಕ್ಟ್ರಿಕ್ ವಾಹನಗಳು ಪರಿಸರಕ್ಕೆ ಪೂರಕವಾಗುವ ಜೊತೆಗೆ ಜನರಿಗೆ ಹಣಕಾಸಿನ ಉಳಿತಾಯ ಕೂಡ ಆಗುತ್ತದೆ ಎಂದು ನಂಬಲಾಗಿದೆ. ಅದೇ ತರನಾಗಿ ವಾತಾವರಣದಲ್ಲಿ ಹಸಿರುಮನೆ ಪರಿಣಾಮವನ್ನು ಅಂದರೆ ಹಸಿರು ಮನೆ ಅನಿಲ ಉತ್ಪಾದನೆಯು ಎಲೆಕ್ಟ್ರಿಕ್ ವಾಹನ (Electric Vehicle) ದಲ್ಲಿ ಕಡಿಮೆ ಉತ್ಪತ್ತಿಯಾಗಿ ಹೊರಸೂಸುತ್ತದೆ ಎಂದು ನಂಬಲಾಗುತ್ತು ಆದರೆ ಅಧ್ಯಯನ ಒಂದರ ವರದಿಯಲ್ಲಿ ಅಚ್ಚರಿಯ ಮಾಹಿತಿಯೊಂದು ವೈರಲ್ ಆಗುತ್ತಿದೆ.

ಸಂಶೋಧನಾ ವರದಿ:

ಎಮಿಶನ್ ಎನಾಲಿಟಿಕ್ಸ್ (Emission Analytics) ಎಂಬ ಸಂಸ್ಥೆಯೂ ಇತ್ತೀಚೆಗಷ್ಟೇ ವಾಹನಗಳ ಹೊರಸೂಸುವಿಕೆಯ ಬಗ್ಗೆ ಅಧ್ಯಯನ ನಡೆಸಿದೆ. ಈ ಮೂಲಕ ಪೆಟ್ರೋಲ್, ಡಿಸೇಲ್ ವಾಹನಗಳಿಗಿಂತಲೂ ಎಲೆಕ್ಟ್ರಿಕ್ ವಾಹನ (Electric Vehicle) ದಲ್ಲಿ ಹೊರ ಸೂಸುವಿಕೆಯ ಪ್ರಮಾಣ ಅಧಿಕ ಇರುತ್ತದೆ ಎಂಬ ಆತಂಕಕಾರಿ ಮಾಹಿತಿಯನ್ನು ವೈರಲ್ ಮಾಡಲಾಗುತ್ತಿದೆ. ಇತ್ತೀಚಿನ ದಿನದಲ್ಲಿ ಆಧುನಿಕ ರೀತಿಯಲ್ಲಿ ಅನಿಲ ಚಾಲಿತ ವಾಹನಗಳನ್ನು ಸಿದ್ಧ ಪಡಿಸಲಾಗುತ್ತಿದ್ದು ಅದಕ್ಕೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳು ಭಾರ ರೂಪದಲ್ಲಿ ಸಿದ್ಧವಾಗುತ್ತಿದೆ. ಹಾಗಾಗಿ ಹೊರಸೂಸುವಿಕೆ ಮಾಲಿನ್ಯಕಾರಕವಾಗುತ್ತಿದೆ.

 

 

advertisement

ಅಧಿಕ ಮಾಲಿನ್ಯ:

ಎಲೆಕ್ಟ್ರಿಕ್ ವಾಹನದಲ್ಲಿ ಬ್ರೇಕ್ ಮತ್ತು ಟೈರ್ ಗಳಿಂದ ಗಮನಾರ್ಹವಾಗಿ ಹೆಚ್ಚಿನ ಮಾಲಿನ್ಯ ಕಾರಕ ಕಣಗಳನ್ನು ಬಿಡುಗಡೆ ಮಾಡುತ್ತಿದೆ. ಹಾಗಾಗಿ ಮಾಲಿನ್ಯ ಕಾರಕದಲ್ಲಿ ಸಾಂಪ್ರದಾಯಿಕ ಇಂಧನ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನವು 1,850 ಪಟ್ಟು ಹೆಚ್ಚು ಮಾಲಿನ್ಯ ಕಾರಕ ಕಣಗಳನ್ನು ಹೊರ ಸೂಸುತ್ತಿದೆ. ಎಲೆಕ್ಟ್ರಾನಿಕ್ ವಾಹನ ಭಾರವಾದ ತೂಕವಾಗುವ ಕಾರಣ ಟೈರ್ ಗಳು ಬೇಗನೆ ಹಾಳಾಗುತ್ತವೆ. ಬಳಿಕ ಅದರ ಹೊರ ಸೂಸುವಿಕೆ ಪ್ರಮಾಣ ಸಹ ಅಧಿಕ ಆಗಲಿದೆ ಎಂದು ಹೇಳಬಹುದು.‌

ಅಧಿಕ ಬ್ಯಾಟರಿ ತೂಕ:

ಬ್ಯಾಟರಿ ಅಧಿಕ ತೂಕದ ಕಾರಣದಿಂದ ಟೈರ್ ಹಾಗೂ ಬ್ರೇಕಿಂಗ್ ಸಿಸ್ಟಂ ಅನ್ನು ಜಾರಿಗೆ ತಂದಿದೆ. ಸಾಂಪ್ರದಾಯಿಕ ಗ್ಯಾಸೋಲಿನ್ ಇಂಜಿನ್ (Gasoline Engine) ಗಳಿಗೆ ಹೋಲಿಸಿದರೆ ಇವಿ ಬ್ಯಾಟರಿಗಳು ಅಧಿಕ ಬಾರ ಇರುತ್ತದೆ. ಬ್ರೇಕ್ ಮತ್ತು ಟೈರ್ ಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಲಿದೆ. ಬ್ರೇಕ್ ಮತ್ತು ಟೈರ್ ಗಳ ಮೇಲೆ ಸವೆತ ಉಂಟಾಗುವುದು ಕೂಡ ದೊಡ್ಡ ಮಟ್ಟದ ಮಾಲಿನ್ಯ ಕಾರಕವಾಗಲಿದೆ ಎಂದು ಈ ಮೂಲಕ ಹೇಳಬಹುದು.

ಒಟ್ಟಾರೆಯಾಗಿ ಎಲೆಕ್ಟ್ರಿಕ್ ವಾಹನಗಳು (Electric Vehicle) ಮಾಲಿನ್ಯಕ್ಕೆ ಪೂರಕ ಎಂದು ನಂಬಲಾಗಿದ್ದ ಮಾಹಿತಿ ಈಗ ಸುಳ್ಳು ಎಂಬಂತೆ ಎಮಿಶನ್ಸ್ ಎನಾಲಿಟಿಕ್ಸ್ ಎಂಬ ಸಂಸ್ಥೆ ವರದಿ ಮಾಡಿದ್ದ ಮಾಹಿತಿ ಆತಂಕಕಾರಿಯಾಗಿದೆ. ಹಾಗಾಗಿ ಇನ್ನು ಮುಂದೆ ಎಲೆಕ್ಟ್ರಾನಿಕ್ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಜಾರಿಗೆ ಬರುತ್ತದಾ ಎಂದು ಕಾದು ನೋಡಬೇಕು. ಹಾಗಾಗಿ ಮುಂದಿನ ದಿನದಲ್ಲಿ ಕಡಿಮೆ ತೂಕದ ಬ್ಯಾಟರಿಯನ್ನು ಎಲೆಕ್ಟ್ರಿಕ್ ವಾಹನದಲ್ಲಿ ಚಾಲನೆ ಮಾಡಬಹುದಾ ಎಂದು ಕಾದು ನೋಡಬೇಕು.

advertisement

Leave A Reply

Your email address will not be published.