Karnataka Times
Trending Stories, Viral News, Gossips & Everything in Kannada

7 Seater Car: 8 ಲಕ್ಷಕ್ಕಿಂತ ಕಡಿಮೆ ಬೆಲೆ 26 ಕಿಲೋಮೀಟರ್ ಮೈಲೇಜ್; ಈ 7 ಸೀಟರ್ ಕಾರು ಖರೀದಿಸಲು ಮುಂದಾದ ಜನತೆ!

advertisement

ಕುಟುಂಬದವರೆಲ್ಲ ಸೇರಿ ಟ್ರಿಪ್ ಹೋಗಬೇಕು ಅಂದ್ರೆ ಸಣ್ಣಪುಟ್ಟ ಕಾರು ಸಾಕಾಗೋದಿಲ್ಲ. ಆಗ ದೊಡ್ಡ MPV ಕಾರು ಅಥವಾ ಶಕ್ತಿಶಾಲಿ ಆಗಿರುವ 7 ಸೀಟರ್ ಇರುವ ಕಾರು ಬೇಕು. ಹಾಗಂತ ಎಲ್ಲರೂ ಈ ದೊಡ್ಡ ಕಾರನ್ನು ಅಫರ್ಡ್ ಮಾಡುವುದಕ್ಕೆ ಆಗುತ್ತಾ? ಖಂಡಿತವಾಗಿಯೂ ಇಲ್ಲ. ನೀವು ದೊಡ್ಡ ಕಾರ್ಯದಲ್ಲಿ ಪ್ರಯಾಣ ಮಾಡಲು ಸಾಧ್ಯವೇ ಇಲ್ಲ ಎಂದೇನಲ್ಲ. ಈಗ ಮಾರುಕಟ್ಟೆಯಲ್ಲಿ ಫಾರ್ಚುನರ್ ಇನೋವಾ ಕಾರುಗಳನ್ನ ಮೀರಿಸುವಂತಹ ಕಾರು ಬಿಡುಗಡೆ ಆಗಿದೆ. ಅದರಲ್ಲೂ ಕೈಗೆಟುಕುವ ಬೆಲೆಗೆ ಈ ಶಕ್ತಿಶಾಲಿ ನೀವು ಖರೀದಿಸಬಹುದು.

Maruti Ertiga 7 Seater Car:

 

 

ಈ MPV ಟಾಪ್ 10 ಕಾರುಗಳಲ್ಲಿ ಮಾರುತಿ ಎರ್ಟಿಗಾ (Maruti Ertiga) ಕೂಡ ಒಂದು. 7 ಆಸನಗಳನ್ನು ಹೊಂದಿರುವ ದೊಡ್ಡ ಹ್ಯಾಚ್ ಬ್ಯಾಕ್ ಕಾರು ಇದಾಗಿದ್ದು ಇತರ ಎಲ್ಲಾ ಶಕ್ತಿಶಾಲಿ ಕಾರುಗಳನ್ನು ಮೀರಿಸುವಷ್ಟು ಸಂಖ್ಯೆಯಲ್ಲಿ ಮಾರಾಟವಾಗಿದೆ. ಕಳೆದ ಬಂದೇ ತಿಂಗಳಿನಲ್ಲಿ 15,519 ಲಿಮಿಟ್ ಏರ್ಟಿಗ ಮಾರಾಟವಾಗಿದೆ. ಜನವರಿ ತಿಂಗಳಿನಲ್ಲಿ 14,632 ಯುನಿಟ್ ಮಾರಾಟವಾಗಿತ್ತು. ಅಂದ್ರೆ ಕೇವಲ ಒಂದು ತಿಂಗಳಿನಲ್ಲಿ 887 ಯೂನಿಟ್ ಹೆಚ್ಚು ಮಾರಾಟವಾದಂತೆ ಆಯಿತು.

10 ಲಕ್ಷ ಮಾರುತಿ ಎರ್ಟಿಗಾ ಯೂನಿಟ್ ಮಾರಾಟ:

advertisement

ಟಾಪ್ 10, 7 ಆಸನಗಳ ಕಾರುಗಳ ಪೈಕಿ ಮಹೀಂದ್ರಾ ಸ್ಕಾರ್ಪಿಯೊ ಹಾಗೂ ಎರ್ಟಿಗಾ ಕಳೆದ ಒಂದು ತಿಂಗಳಲ್ಲಿ ಒಂದು ಮಿಲಿಯನ್ ಯೂನಿಟ್ ಮಾರಾಟ ಮಾಡಿ ದಾಖಲೆ ಸೃಷ್ಟಿಸಿದೆ. ಎರ್ಟಿಗಾ ಖರೀದಿ ಮಾಡುವ ಗ್ರಾಹಕರ ಸಂಖ್ಯೆ 41% ನಷ್ಟು ಹೆಚ್ಚಾಗಿದೆ. 2012ರಲ್ಲಿ ಎರ್ಟಿಗಾ ಮಾರಾಟ ಆರಂಭವಾಯಿತು. 2019ರವರೆಗೆ 5 ಲಕ್ಷ ಯೂನಿಟ್ ತಲುಪಿತು. 2020ರಲ್ಲಿ 6 ಲಕ್ಷ ಯೂನಿಟ್ ಮಾರಾಟ ಮಾಡಲಾಗಿತ್ತು. ಆದರೆ ಕೇವಲ ಒಂದು ವರ್ಷಗಳಲ್ಲಿ ಅಂದರೆ 2023ರಲ್ಲಿ ಒಂದು ಲಕ್ಷ ಯೂನಿಟ್ ಮಾರಾಟ ಮಾಡಿ ದಾಖಲೆ ಸೃಷ್ಟಿಸಿದೆ. 11 ವರ್ಷಗಳ ಅವಧಿಯಲ್ಲಿ ಎರ್ಟಿಗಾ ಹಂತ ಹಂತವಾಗಿ ಉತ್ತಮ ಮಾರಾಟ ಕಂಡಿದೆ ಎನ್ನಬಹುದು.

Maruti Ertiga Engine:

 

 

ಈ MPV ಯಲ್ಲಿ 1.5ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಇದು 13 ಪಿಎಸ್ ಹಾಗೂ 137nm ಟಾರ್ಕ್ ಉತ್ಪಾದಿಸಬಹುದು. ಅಷ್ಟೇ ಅಲ್ಲ ಸಿ ಎನ್ ಜಿ ರೂಪಾಂತರವನ್ನು ಕೂಡ ನೀವು ಪಡೆಯಬಹುದು. ಮೈಲೇಜ್ ವಿಚಾರಕ್ಕೆ ಬಂದ್ರೆ ಪೆಟ್ರೋಲ್ ಮಾದರಿ 20.51 ಕೆ ಎಮ್ ಪಿ ಎಲ್ ಮೈಲೇಜ್ ನೀಡಬಹುದು. ಅದೇ ರೀಟಿ CNG ರೂಪಾಂತರ 26.11km/kg ಮೈಲೇಜ್ ನೀಡಬಲ್ಲದು. ಇನ್ನು ಇದರ ಆರಂಭಿಕ ಎಕ್ಸ್ ಶೋರೂಮ್ ಬೆಲೆ 8.69 ಲಕ್ಷಗಳಿಂದ ಆರಂಭವಾಗುತ್ತದೆ. ಅಂದರೆ ಕೈಗೆಟಿಕುವ ಬೆಲೆಯಲ್ಲಿ ನೀವು 7 ಆಸನಗಳ ವಿಸ್ತಾರವಾದ ಕಾರನ್ನು ಖರೀದಿಸಬಹುದು.

Maruti Ertiga Features:

ಈ ಕಾರಿನಲ್ಲಿ ಪ್ಯಾಡಲ್ ಶಿಫ್ಟರ್, ಆಟೋ ಹೆಡ್ ಲೈಟ್, ಆಟೋ ಎಸಿ, ಕ್ರೂಸ್ ಕಂಟ್ರೋಲ್ ಮೊದಲಾದ ವೈಶಿಷ್ಟ್ಯತೆಗಳನ್ನು ಕೊಡಲಾಗಿದೆ. ಅದೇ ರೀತಿ 2023ರ ಎರ್ಟಿಗಾ ಮಾಡೆಲ್ ನಲ್ಲಿ, ಹಿಂದಿನ 7ಇಂಚಿನ ಟಚ್ ಸ್ಕ್ರೀನ್ ಬದಲಿಗೆ 9 ಇಂಚಿನ ಹೆಚ್ಚು ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಕೊಡಲಾಗಿದೆ. ಇದರಲ್ಲಿ ಸುಜುಕಿ ಸ್ಟಾರ್ಟ್ ಪ್ಲೇ ಪ್ರೊ ತಂತ್ರಜ್ಞಾನವನ್ನು ಕಾಣಬಹುದು. ಅದೇ ರೀತಿ ಬ್ಲೂಟೂತ್ ಕನೆಕ್ಟಿವಿಟಿ, ವಾಯ್ಸ್ ಕಮಾಂಡ್, ಟೌ ಅಲರ್ಟ್, ಟ್ರ್ಯಾಕಿಂಗ್, ಜಿಯೋ ಫೆನ್ನಿಂಗ್, ಓವರ್ ಸ್ಪೀಡಿಂಗ್ ಅಲರ್ಟ್, ರಿಮೋಟ್ ಫಂಕ್ಷನ್, 360 ಡಿಗ್ರಿ ವ್ಯೂ ಕ್ಯಾಮೆರಾ ಹೀಗೆ ಸಾಕಷ್ಟು ಆಧುನಿಕ ತಂತ್ರಜ್ಞಾನವನ್ನು ಮಾರುತಿ ಎರ್ಟಿಗಾ ಕಾರಿನಲ್ಲಿ ಪಡೆಯಬಹುದು.

advertisement

Leave A Reply

Your email address will not be published.