Karnataka Times
Trending Stories, Viral News, Gossips & Everything in Kannada

Maruti Ertiga CNG: ಮಾರುತಿ ಎರ್ಟಿಗಾ ಸಿ ಎನ್ ಜಿ ನೀಡುವ ಮೈಲೇಜ್ ಎಷ್ಟು ಗೊತ್ತಾ?

advertisement

ಭಾರತೀಯ ಮಾರುಕಟ್ಟೆಯಲ್ಲಿ ವಿಶಾಲವಾದ ಹಾಗೂ ಆರಾಮದಾಯಕವಾದ ಕಾರುಗಳನ್ನು ನೀಡುವಲ್ಲಿ ಮಾರುತಿ ಮುಂಚೂಣಿಯಲ್ಲಿ ಇದೆ. ಕೈಗೆಟುಕುವ ಬೆಲೆಯಲ್ಲಿ ದೊಡ್ಡ ಕಾರುಗಳನ್ನು ಗ್ರಾಹಕರಿಗೆ ಒದಗಿಸುವ ಏಕೈಕ ಮೋಟಾರ್ ಕಂಪನಿ, ಮಾರುತಿ ಎನ್ನಬಹುದು. ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಮಾರುತಿ ಸುಜುಕಿ ಇದೀಗ Maruti Ertiga CNG ವರ್ಷನ್ ಕೂಡ ಪರಿಚಯಿಸಿದೆ.

Maruti Suzuki Ertiga:

ಕಾರ್ಯಕ್ಷಮತೆ, ಸುರಕ್ಷಿತತೆ ಹಾಗೂ ವೈಶಿಷ್ಟ್ಯತೆಗೆ ಸರಿಸಾಟಿ ಇಲ್ಲದೆ ಇರುವ ಕಾರು ಎನಿಸಿಕೊಂಡಿದೆ Maruti Ertiga CNG. ಮಾರುತಿ ಸುಜುಕಿ ಎರ್ಟಿಗಾ ಪೆಟ್ರೋಲ್ ಎಂಜಿನ್ ಕಾರಿನಷ್ಟೇ ಸಿ ಏನ್ ಜಿ ಕೂಡ ಈಗ ಫೇಮಸ್ ಆಗುತ್ತಿದೆ. ಇದರ ಬಗ್ಗೆ ಒಂದಿಷ್ಟು ಅನುಕೂಲಕರ ಮಾಹಿತಿ ಇಲ್ಲಿದೆ.

Maruti Ertiga CNG Engine:

 

 

ಸಿಎನ್‌ಜಿ 1.5 ಲೀಟರ್ K15C ಇಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದೆ. ಇದು 88ಪಿಎಸ್ ಪವರ್ ಹಾಗೂ 121.5 nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ನಿಮಗೆ ಪೆಟ್ರೋಲ್ ಮೂಡ್ ನಲ್ಲಿ 13 ಪಿಎಸ್ ಪವರ್ ಹಾಗೂ 137nm ಟಾರ್ಕ್ ಪಡೆದುಕೊಳ್ಳಬಹುದು. ಸಿ ಎನ್ ಜಿ ವರ್ಷನ್ ನಲ್ಲಿ 5 Speed Manual Transmission ಅಳವಡಿಸಲಾಗಿದೆ. ಹಾಗೂ ಡ್ಯೂಯಲ್ ಇಂಟರ್ ಡಿಪೆಂಡೆಂಟ್ ECU ಅಳವಡಿಸಲಾಗಿದೆ ಇನ್ನು ಸ್ಥಿರವಾದ ಕಾರ್ಯ ಕ್ಷಮತೆಯನ್ನು ಕೊಡಬಲ್ಲ ಇಂಜಿನ್ ಇದಾಗಿದ್ದು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದಿಂದಾಗಿ ಇಂಧನದ ದಕ್ಷತೆ ಹೆಚ್ಚಿದೆ ಎನ್ನಬಹುದು.

advertisement

Maruti Ertiga CNG Features:

 

 

ಹೊಗೆ ಹೊರೆಸುವಿಕೆ ಕಡಿಮೆ ಮಾಡುವ ಸಾಮರ್ಥ್ಯ ಇಂಜಿನ್ ನಲ್ಲಿ ಇದೆ. ಇನ್ನು ಕಾರಿನ ಒಳಾಂಗಣದಲ್ಲಿ Wireless Android Auto ಮತ್ತು Apple Car Play Display ಕೊಡಲಾಗಿದ್ದು 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಇದೆ. ಅದರಂತೆ LED Tail Lamp ಕ್ರೋಮೋ ಗ್ರಿಲ್ ಕಂಟ್ರೋಲ್ ಆಟೋ ಹೆಡ್ ಲೈಟ್ ಆಟೋ ಎಸಿ ಮೊದಲಾದವುಗಳನ್ನು ಕಾಣಬಹುದು.

ಇನ್ನು ಅಲಾಯಿ ವೀಲ್ಗಳು ಕಾರಿನ ಬಾಹ್ಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ರೂಫ್ ರೈಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ LED ಟೈಲ್ ಲ್ಯಾಂಪ್ ಗಳನ್ನು ಕೊಡಲಾಗಿದೆ. ಕಾರಿನ ಮೂರನೇ ಸಾಲಿನಲ್ಲಿ ರಿಕ್ಲೇನರ್ ಆಸನಗಳನ್ನು ಕೊಡಲಾಗಿದ್ದು, ಎರಡನೇ ಸಾಲಿನಲ್ಲಿ ಆರ್ಮ್ ರೆಸ್ಟ್ ಹಾಗೂ ಅಡ್ಜಸ್ಟೇಬಲ್ ಹೆಡ್ ರೆಸ್ಟ್ ಕೊಡಲಾಗಿದೆ. ಜೊತೆಗೆ ಲೆಗ್ ರೂಮ್ ಮತ್ತು ಹೆಡ್ ರೂಮ್ ಏಳು ಜನ ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣ ಮಾಡಲು ಅನುಕೂಲ ಮಾಡಿಕೊಡುತ್ತದೆ.

ಸುರಕ್ಷತೆಯ ದೃಷ್ಟಿಯಿಂದ ನೋಡುವುದಾದರೆ ಡುಯಲ್ ಏರ್ ಬ್ಯಾಗ್ ಕೊಡಲಾಗಿದ್ದು, EBD ಜೊತೆಗೆ ABS ಬ್ರೇಕ್ ಅಸಿಸ್ಟ್ ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಮೊದಲಾದ ಸುರಕ್ಷಿತ ವ್ಯವಸ್ಥೆ ನೀಡಲಾಗಿದೆ. ಜೊತೆಗೆ ಸಿ ಎನ್ ಜಿ ಇಂಧನ ಸೋರಿಕೆ ನಿರೋಧಕ ವಿನ್ಯಾಸ ಮಾಡಲಾಗಿದೆ.

ಸಿ ಎನ್ ಜಿ ಎರ್ಟಿಗಾ (Maruti Ertiga CNG) ದಲ್ಲಿ ಎರಡು ರೂಪಾಂತರವನ್ನು ಕಾಣಬಹುದು. ಒಂದು VXi (O) CNG ಮತ್ತು ಎರಡನೆಯದು ZXi (O) CNG. ಇನ್ನು ಇದರ ಬೆಲೆ ನೋಡುವುದಾದರೆ ಮೊದಲನೇ ರೂಪಾಂತರದ ಎಕ್ಸ್ ಶೋರೂಮ್ ಬೆಲೆ 10.44 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಹಾಗೂ ಎರಡನೇ ರೂಪಾಂತರದ ಬೆಲೆ 11.68 ಲಕ್ಷ ರೂಪಾಯಿಗಳು. ಕೈಗೆಟಿಕುವ ಬೆಲೆಯ ಮಾರುತಿ ಸುಜುಕಿ ಎರ್ಟಿಗಾ ಸಿ ಎನ್ ಜಿ 7 ಆಸನಗಳನ್ನು ಹೊಂದಿರುವ ವಿಶಾಲವಾದ ಎಂಪಿವಿ ಆಗಿದ್ದು ದೂರದ ಆರಾಮದಾಯಕ ಪ್ರಯಾಣವನ್ನು ಉತ್ತೇಜಿಸುತ್ತದೆ.

advertisement

Leave A Reply

Your email address will not be published.