Karnataka Times
Trending Stories, Viral News, Gossips & Everything in Kannada

BH Number Plate: ನಿಮ್ಮ ವಾಹನದ ಮೇಲೆ BH ನಂಬರ್ ಪ್ಲೇಟ್ ಹಾಕುವುದರಿಂದ ಸಿಗುವ ಬೆನಿಫಿಟ್ಸ್ ಏನು ಗೊತ್ತಾ?

advertisement

ಯಾವುದೇ ವ್ಯಕ್ತಿ ವಾಹನ ಚಲಾಯಿಸುವಾಗ ಅದಕ್ಕೆ ಸಂಬಂಧಪಟ್ಟಂತೆ ಇರುವ ಸಾಕಷ್ಟು ನಿಯಮಗಳ ಬಗ್ಗೆ ತಿಳಿದುಕೊಂಡಿರಬೇಕು. ರಸ್ತೆ ನಿಯಮ ಪಾಲನೆ ಬಹಳ ಮುಖ್ಯವಾಗಿದೆ. ಅದು ಅಲ್ಲದೆ ನೀವು ಬಳಸುವ ವಾಹನಕ್ಕೆ ಯಾವ ರೀತಿಯ ನಂಬರ್ ಪ್ಲೇಟ್ ಮಾಡಕ್ಕೆ ಮಾಡಬೇಕು. ಹಾಗೂ ಯಾವ ರೀತಿಯ ನಂಬರ್ ಪ್ಲೇಟ್ ಹಾಕಿದ್ರೆ ಯಾವ ಉದ್ದೇಶಕ್ಕೆ ಆ ಗಾಡಿಯನ್ನು ಬಳಸಬೇಕು ಎನ್ನುವುದಕ್ಕೂ ಕೂಡ ನಿಯಮಗಳು ಇವೆ. ಇತ್ತೀಚಿಗೆ ನಿಮಗೆಲ್ಲ ತಿಳಿದಿರುವಂತೆ HSRP ನಂಬರ್ ಪ್ಲೇಟ್ ಅನ್ನು ಪ್ರತಿ ಗಾಡಿ ಗೆ ಅಳವಡಿಸುವುದು ಕಡ್ಡಾಯವಾಗಿದೆ. ಅದೇ ರೀತಿ ಇಂದು ನಾವು BH Number Plate ಅಳವಡಿಸಿಕೊಳ್ಳುವುದರ ಹಿಂದಿನ ಪ್ರಾಮುಖ್ಯತೆಯನ್ನು ತಿಳಿಸುತ್ತಿದ್ದೇವೆ.

BH Number Plate ಯಾಕೆ ಬಳಸಬೇಕು!

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2021 ರಲ್ಲಿ ಭಾರತ್ ಸರಣಿ ನಂಬರ್ ಪ್ಲೇಟ್ (BH Number Plate) ಅನ್ನು ರೂಪಿಸಿತು. ಇದು ನಮ್ಮ ದೇಶದಲ್ಲಿ ಪ್ರತ್ಯೇಕ ವಾಹನಕ್ಕೆ ನೀಡಲಾಗುವ ಅನನ್ಯ ನೋಂದಣಿ ಸಂಖ್ಯೆ. ಈ ಸಂಖ್ಯೆಯನ್ನು ಬಳಸಿಕೊಂಡು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸುಲಭವಾಗಿ ನಿಮ್ಮ ವಾಹನದಲ್ಲಿ ಚಲಿಸಬಹುದು.

BH Number Plate Benefits:

 

advertisement

 

ಎಷ್ಟೋ ಬಾರಿ ಉದ್ಯೋಗ ಅಥವಾ ಇತರ ಕಾರಣಕ್ಕಾಗಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಹನವನ್ನು ತೆಗೆದುಕೊಂಡು ಹೋಗುವಾಗ ಮರು ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ಇಂಥ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಇವೆಲ್ಲವನ್ನ ಎದುರಿಸುವ ಸಲುವಾಗಿಯೇ BH ಸರಣಿ ನಂಬರ್ ಪ್ಲೇಟ್ ಅನ್ನು ಪರಿಚಯಿಸಲಾಗಿದೆ.

  • ಬಿ ಹೆಚ್ ನಂಬರ್ ಪ್ಲೇಟ್ ಹೊಂದಿರುವ ವಾಹನದ ಮೇಲೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋದರು ಕೂಡ ವಿಮೆ ಸೌಲಭ್ಯದಲ್ಲಿ ವ್ಯತ್ಯಾಸವಾಗುವುದಿಲ್ಲ.
  • ಈ ನಂಬರ್ ಪ್ಲೇಟ್ ಅನ್ನು ರಾಜ್ಯ ಮತ್ತು ಕೇಂದ್ರ ಸರಕಾರಿ ನೌಕರರು ಬ್ಯಾಂಕ್ ಅಥವಾ ಆಡಳಿತ ಸೇವಾ ನೌಕರರು ರಕ್ಷಣಾ ಸಿಬ್ಬಂದಿ ಬಳಕೆ ಮಾಡಬಹುದು.
  • ಇದಕ್ಕಿಂತ ಹೆಚ್ಚು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಕಚೇರಿ ಕಡೆ ಹೋಗಲು ಖಾಸಗಿ ಕಂಪನಿಗಳು ಬಿಹೆಚ್ ಸರಣಿ ನಂಬರ್ ಪ್ಲೇಟ್ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

BH Number Plate ಗಾಗಿ ನೋಂದಣಿ ಮಾಡಿಸಿಕೊಳ್ಳುವುದು ಹೇಗೆ?

MoRTH ವೆಹಿಕಲ್ ಪೋರ್ಟಲ್ ಗೆ ಲಾಗಿನ್ ಆಗಿ. ನಂತರ ಆನ್ಲೈನ್ ಫಾರ್ಮ್ ಭರ್ತಿ ಮಾಡಬೇಕು. BH ನಂಬರ್ ಪ್ಲೇಟ್ ಪಡೆದುಕೊಳ್ಳಲು ಅರ್ಹತೆ ಇರುವ ವಾಹನ ಮಾಲೀಕರಿಗೆ ಪರವಾನಿಗೆ ನೀಡಲಾಗುತ್ತದೆ. ಇದಕ್ಕೆ ಮೋಟಾರ್ ವಾಹನ ತೆರಿಗೆ ಪಾವತಿ ಮಾಡಬೇಕು ಈ ಪ್ರಕ್ರಿಯೆ ಪೂರ್ಣಗೊಂಡ ನಂತರ BH ನೋಂದಣಿ ಮಾಡಲಾಗುತ್ತದೆ. ಅಥವಾ ನೀವು ಅಧಿಕೃತ ಆಟೋಮೊಬೈಲ್ ಡೀಲರ್ ಸಹಾಯದಿಂದಲೂ BH ನಂಬರ್ ಪ್ಲೇಟ್ ಪಡೆದುಕೊಳ್ಳಬಹುದು.

advertisement

Leave A Reply

Your email address will not be published.