Karnataka Times
Trending Stories, Viral News, Gossips & Everything in Kannada

Maha Shivaratri 2024: ಶಿವರಾತ್ರಿಗೆ ಧರ್ಮಸ್ಥಳ ತೆರಳುವ ಭಕ್ತರು ಈ ವಿಚಾರ ಓದಲೇ ಬೇಕು

advertisement

ತಲತಲಾಂತರ ವರ್ಷದಿಂದ ನಡೆದುಕೊಂಡು ಬಂದ ಸಂಪ್ರದಾಯಗಳು ಆಚರಣೆ ಎಲ್ಲವೂ ಕೂಡ ಶಿವರಾತ್ರಿ ಹಬ್ಬದಂದು ಮತ್ತೆ ಪುನಃ ಮರುಕಳಿಸಲಿದೆ. ಈ ಮೂಲಕ ಶಿವರಾತ್ರಿಗೆನೆಯಲ್ಲೇ ಮಾಡುವ ಪೂಜೆ ಪುನಸ್ಕಾರಗಳ ಜೊತೆಗೆ ದೇಗುಲಗಳಿಗೆ ತೆರಳಿ ದೇವರ ಆರಾಧನೆ ಮಾಡುವವರ ಪ್ರಮಾಣ ಕೂಡ ಅಧಿಕವಾಗುತ್ತಿದೆ ಹಾಗಾಗಿ ಬಹುತೇಕ ಶಿವನ ದೇವಾಲಯಗಳು ಭಕ್ತರ ದಂಡನ್ನು ನಿಯಂತ್ರಿಸುವ ಸಲುವಾಗಿ ಕೆಲವೊಂದು ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.

ರಾಜ್ಯದಲ್ಲಿ ಧರ್ಮಸ್ಥಳ ಮಂಜುನಾಥನ ಕ್ಷೇತ್ರಕ್ಕೆ ಭೇಟಿ ನೀಡುವವರ ಸಂಖ್ಯೆ ತುಂಬಾ ಅಧಿಕ ಇದ್ದಾರೆ.‌ ಅದರಲ್ಲೂ ಲಕ್ಷ ದೀಪೋತ್ಸವ ಹಾಗೂ ಶಿವರಾತ್ರಿ (Maha Shivaratri 2024) ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಬರುವವರ ಸಂಖ್ಯೆ ಅಧಿಕ ಎಂದು ಹೇಳಬಹುದು. ಹಾಗಾಗಿ ಈ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಕೂಡ ಅಧಿಕವಾಗೇ ಇರಲಿದೆ, ವಾಹನದ ಸಂಖ್ಯೆ ಕೂಡ ಹೆಚ್ಚಾಗಿ ಇರಲಿದೆ. ಇದನ್ನು ಮನಗಂಡ ಧರ್ಮಸ್ಥಳ ಕ್ಷೇತ್ರದ ಆಡಳಿತ ಮಂಡಳಿಯು ವಾಹನ ಸವಾರರಿಗೆ ಕೆಲವೊಂದು ಸಲಹೆ, ಸೂಚನೆ ನೀಡಿದೆ.

ಸಲಹೆ , ಸೂಚನೆ

ಶಿವರಾತ್ರಿ ಹಿನ್ನೆಲೆಯಾದ ಕಾರಣ ಧರ್ಮಸ್ಥಳ ಸುತ್ತಮುತ್ತಲು ಸಂಭ್ರಮದ ವಾತಾವರಣ ಮನೆ ಮಾಡಿದೆ. ಎಷ್ಟೊ ಮಂದಿ ಪಾದ ಯಾತ್ರೆಯ ಮೂಲಕ ದೇಗುದ ಪ್ರವೇಶ ಪಡೆಯಲು ಕಾತುರರಾಗಿದ್ದಾರೆ. ದೂರದ ಊರುಗಳಿಂದ ದೇಗುಲಕ್ಕೆ ಬರುವ ಪಾದಯಾತ್ರಿಗಳ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ವಾಹನ ಸವಾರರಿರಗೆ ಸೂಚನೆ ನೀಡಲಾಗಿದೆ.ಪಾದಾಚಾರಿಗಳ ಸಂಖ್ಯೆ ಅಧಿಕ ಇರುವ ಸಲುವಾಗಿ ಈ ಸಲಹೆ ಸೂಚನೆ ನೀಡಿರುವುದಾಗಿ ತಿಳಿಸಲಾಗಿದೆ.

advertisement

ಯಾವುದು ಈ ಸೂಚನೆ?

ವಾಹನ ಸವಾರರು ಧರ್ಮಸ್ಥಳದ ಸುತ್ತ ಮುತ್ತಲ ಪ್ರದೇಶದಲ್ಲಿ ಜಾಗೃತಿಯಿಂದ ವಾಹನ ಚಲಾಯಿಸಬೇಕು. ಯಾಕೆಂದರೆ ಪಾದಾಚಾರಿಗಳಿಗೆ ತಿರುವು ಮತ್ತು ನೇರ ದಾರಿಯಲ್ಲಿ ಪ್ರಯಾಣಿಸುವಾಗ ಅಪಘಾತ ಉಂಟಾಗಬಹುದು. ನಸುಕು ಹಾಗೂ ಸಂಜೆ ವೇಳೆಯಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಲಿದೆ. ಹಾಗಾಗಿ ಆ ಸಂದರ್ಭದಲ್ಲಿ ಪ್ರಯಾಣ ಮಾಡುವ ವಾಹನ ಸವಾರರು ತೀರ ನಿಗಾ ವಹಿಸಿ ನೋಡಿಕೊಳ್ಳಿ.

ಪಾದಯಾತ್ರಿಗಳಿಗೂ ಸಲಹೆ?

ಶಿವರಾತ್ರಿ ಸಂದರ್ಭದಲ್ಲಿ ದೇಗುಲಕ್ಕೆ ಭೇಟಿ ನೀಡುವ ಭಕ್ತಾದಿಗಳು ಮತ್ತು ಪಾದಯಾತ್ರಿಗಳ ಸಂಖ್ಯೆ ಅಧಿಕ ಇದ್ದ ಕಾರಣ ಪಾದ ಯಾತ್ರಿಗಳಿಗೂ ಸುರಕ್ಷಿತ ಪಯಣ ಹಾಗೂ ಸ್ಚಚ್ಛತೆ ಹಿನ್ನೆಲೆ ಕೆಲವು ಸಲಹೆ, ಸೂಚನೆ ನೀಡಲಾಗಿದೆ. ರಸ್ತೆ ಮಧ್ಯ ಭಾಗದಲ್ಲಿ ನಡೆಯಬಾರದು, ಪ್ಲಾಸ್ಟಿಕ್ ಇತರ ಕಸ ಅಲ್ಲಲ್ಲಿ ಎಸೆಯಬಾರದು, ಕಂಡಕಂಡಲ್ಲಿ ಉಗುಳಬಾರದು, ಸ್ವಚ್ಚತೆ ಕಾಪಾಡಬೇಕೆಂದು ಸಲಹೆ ಸೂಚನೆ ನೀಡಲಾಗಿದೆ.

advertisement

Leave A Reply

Your email address will not be published.