Karnataka Times
Trending Stories, Viral News, Gossips & Everything in Kannada

KSRTC: ಇಂತಹ ಸಂದರ್ಭದಲ್ಲಿ ಶಕ್ತಿ ಯೋಜನೆ ಇದ್ದರೂ ಕೂಡ ಟಿಕೆಟ್ ವಿಧಿಸಲಿದೆ KSRTC! ಇಲ್ಲಿದೆ ರೂಲ್ಸ್

advertisement

ಮಹಿಳೆಯರಿಗಾಗಿ ರಾಜ್ಯ ಸರಕಾರದಲ್ಲಿ ಶಕ್ತಿ ಯೋಜನೆ ಜಾರಿಗೆ ತಂದಿದ್ದ ಬಳಿಕ ಮಹಿಳೆಯದ ಓಡಾಟ ಪ್ರಮಾಣ ಅಧಿಕ ಆಗಿದೆ ಎನ್ನಬಹುದು. ದೂರದ ಊರುಗಳಿಗೆ, ಸಂಬಂಧಿಕರ ಮನೆಗೆ, ದೇಗುಲ ಪ್ರವಾಸಕ್ಕೆ, ನಿತ್ಯ ಕಚೇರಿ ಕೆಲಸಕ್ಕೆ ಹಾಗೂ ಇನ್ನಿತರ ಕಾರ್ಯಕ್ಕಾಗಿ KSRTC Bus ಗಳನ್ನು ಅಧಿಕ ಬಳಕೆ ಮಾಡಲಾಗುತ್ತಾ ಬಂದಿರುವುದನ್ನು ಕಾಣಬಹುದು. ಹೆಣ್ಣು ಮಕ್ಕಳಿಗೆ ಫ್ರೀ ಟಿಕೆಟ್ ಇದ್ದರೂ ತಮ್ಮ ಜೊತೆಗೆ ಕೊಂಡೊಯ್ಯುವ ವಸ್ತುಗಳ ವಿಚಾರಕ್ಕೆ ಈ ನಿಯಮ ವಿಧಿಸಲಾಗುವುದನ್ನು ಕಾಣಬಹುದು. ತಮ್ಮ ಜೊತೆಗೆ ಬಸ್ ನಲ್ಲಿ ಪ್ರಾಣಿ ಪಕ್ಷಿ ಕೊಂಡೊಯ್ದರೆ ಟಿಕೆಟ್ ಖರೀದಿ ಮಾಡಬೇಕೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ KSRTC ಸ್ಪಷ್ಟನೆ ನೀಡಿದೆ.

ಯಾವುದು ಈ ಘಟನೆ?

 

Image Source: The Hans India

 

ಮಾರ್ಚ್ 8ರಂದು ಬೆಂಗಳೂರಿನಿಂದ ಮೈಸೂರಿಗೆ ಅಜ್ಜಿ ಮತ್ತು ಮೊಮ್ಮಗಳು ಪ್ರಯಾಣ ಬೆಳೆಸಿದ್ದು Shakti Yojana ಯ ಅಡಿಯಲ್ಲಿ ಉಚಿತ ಟಿಕೆಟ್ ಅನ್ನು ನೀಡಲಾಗಿದೆ. ಆದರೂ ಕೂಡ 444ರೂಪಾಯಿ ಟಿಕೇಟ್ ದರ ಸಹ ವಿಧಿಸಲಾಗಿದೆ‌. ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಟಿಕೆಟ್ ನೀಡಿದರೂ ಕೂಡ ಮಹಿಳೆ ಕೊಂಡೊಯ್ಯುವ ಪ್ರಾಣಿ ಪಕ್ಷಿಗೆ ಉಚಿತ ಟಿಕೆಟ್ ಇರಲಾರದು ಎಂಬ ಬಗ್ಗೆ ಇದೀಗ ಮಾಹಿತಿ ಸಿಕ್ಕಿದೆ.

ಅಧಿಕ ಟಿಕೆಟ್ ದರ:

advertisement

ಅಜ್ಜಿ ಮತ್ತು ಮೊಮ್ಮಗಳು ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಮಾಡಲಿದ್ದು ತಮ್ಮ ಜೊತೆಗೆ ಪಕ್ಷಿಯ ಗೂಡನ್ನು ಇಟ್ಟು ಕೊಂಡಿದ್ದಾರೆ ಹಾಗಾಗಿ ಅಜ್ಜಿ ಮೊಮ್ಮಗಳಿಗೆ ಉಚಿತ ಟಿಕೆಟ್ ನೀಡಿ ಜೊತೆಗೆ ಇದ್ದ ಪಕ್ಷಿಗೆ ಬಸ್ ದರ ವಿಧಿಸಲಾಗಿದೆ. ಒಟ್ಟು 4 ಪಕ್ಷಿ ಇದ್ದು 444 ರೂಪಾಯಿ ಟಿಕೆಟ್ ದರ ವಿಧಿಸಲಾಗಿದೆ. ನಾಲ್ಕು ಲವ್ ಬರ್ಡ್ಸ್ ಹಕ್ಕಿಗೆ ಒಂದರ ಮೇಲೆ 111ರೂಪಾಯಿ ಯಂತೆ ನಾಲ್ಕು ಹಕ್ಕಿಗೆ 444ರೂಪಾಯಿ ಪಡೆಯಲಾಗಿದೆ. ಬಳಿಕ ಮಹಿಳೆ ಮನವಿ ಮಾಡಿದ್ದು ಅರ್ಧ ಟಿಕೆಟ್ ಮೊತ್ತವನ್ನು ನಿರ್ವಾಹಕರೇ ನೀಡಿಬಿಟ್ಟಿದ್ದಾರೆ.

 

Image Source: ETV Bharat

 

ನಿಯಮ ಇದೆಯಾ?

ಈ ಒಂದು ಘಟನೆ ನಡೆಯುತ್ತಿದ್ದಂತೆ ನಿಜಕ್ಕೂ ಇಂತಹ ನಿಯಮ ಇದೆಯಾ ಎಂಬ ಬಗ್ಗೆ ಜನರಿಗು ಗೊಂದಲ ಉಂಟಾಗುತ್ತಿದೆ. KSRTC ನಿಯಮದ ಪ್ರಕಾರ ಪ್ರಯಾಣಿಕರು ತಮ್ಮ ಜೊತೆಗೆ ಪ್ರಾಣಿ ಪಕ್ಷಿ, ನಾಯಿ ಮರಿ ಕೊಂಡೊಯ್ಯುವಾಗ ಅವುಗಳಿಗೆ ಅರ್ಧ ಟಿಕೆಟ್ ಪಡೆಯಬೇಕು ಎಂಬ ನಿಯಮ ಇದೆ. ಒಂದು ವೇಳೆ ಅರ್ಧ ಟಿಕೆಟ್ ಪಡೆಯದೆ ಇದ್ದರೆ 10% ನಷ್ಟು ದಂಡ ವಿಧಿಸಲಾಗುತ್ತದೆ. ನಿರ್ವಾಹಕರ ಅಮಾನತ್ತು ಮಾಡಲಾಗುವುದು.

ನಿರ್ವಾಹಕರಿಗೂ ಕಠಿಣ ನಿಯಮ ಇದೆ:

ಇತ್ತೀಚೆಗೆ KSRTC Bus ನಲ್ಲಿ ಕೋಳಿ ಸಾಕುವವರು ಹೆಚ್ಚು ಕೋಳಿ ಕೊಂಡೊಗುತ್ತಿದ್ದು ಟಿಕೆಟ್ ಖರೀದಿ ಮಾಡುತ್ತಿಲ್ಲದೆ ಅನೇಕ ನಿರ್ವಾಹಕರ ವಿರುದ್ಧ ಕ್ರಮ ಕೈಗೊಂಡು ಅಮಾನತ್ತು ಮಾಡಲಾಗಿದೆ. ನಿರ್ವಾಹಕರ ಮೇಲೆ ಅಧಿಕ ನಿಯಮ ವಿಧಿಸಲಾಗುವುದು. ಪ್ರಯಾಣಿಕರ ಟಿಕೆಟ್ ದರ ಮತ್ತು ಕಲೆಕ್ಟ್ ಆದ ಹಣ ದುರುಪಯೋಗ ಮಾಡಿದರೆ ಆಗ ಅಂತಹ ನಿರ್ವಾಹಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಕ್ರಿಮಿನಲ್ ಪ್ರಕರಣ ಕೂಡ ದಾಖಲಿಸಿ ನಿರ್ವಾಹಕರನ್ನು ಅಮಾನತ್ತು ಮಾಡಲಾಗುವುದು.

advertisement

Leave A Reply

Your email address will not be published.