Karnataka Times
Trending Stories, Viral News, Gossips & Everything in Kannada

3 New SUV Car: ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗಲಿದೆ ಈ 3 ಹೊಸ SUV ಕಾರುಗಳು! ಶೋರೂಮ್ ಮುಂದೆ ಜನರ ಕ್ಯೂ ಪಕ್ಕಾ.

advertisement

ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಸದ್ಯದ ಮಟ್ಟಿಗೆ ಗ್ರಾಹಕರು ಸೆಡಾನ್ ಹಾಗೂ ಹ್ಯಾಚ್ ಬ್ಯಾಕ್ ಸೆಗ್ಮೆಂಟ್ ನ ಕಾರುಗಳನ್ನು ಬಿಟ್ಟು SUV ಕಾರುಗಳನ್ನು ಖರೀದಿಸುವುದಕ್ಕೆ ಪ್ರಾರಂಭಿಸಿದ್ದಾರೆ. ಇನ್ನು ಈ ಆರ್ಟಿಕಲ್ ನಲ್ಲಿ ನಾವು ನಿಮಗೆ ಅತಿ ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗಲಿರುವಂತಹ ಮೂರು SUV ಕಾರುಗಳ ಬಗ್ಗೆ ಹೇಳಲು ಹೊರಟಿದ್ದೇವೆ. ಒಮ್ಮೆ ಈ ಕಾರುಗಳು ಭಾರತದಲ್ಲಿ ಲಾಂಚ್ ಆದರೆ ಈ ಕಾರುಗಳ ಕಂಪನಿಯ ಶೋರೂಮ್ ಮುಂದೆ ಜನರ ದಂಡು ನಿಲ್ಲಲಿದೆ. ಹಾಗಿದ್ರೆ ಬನ್ನಿ ಆ ಮೂರು ಕಾರುಗಳು (3 New SUV Car) ಯಾವು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಶೀಘ್ರದಲ್ಲಿ ಲಾಂಚ್ ಆಗಲಿರುವ ಮೂರು SUV ಕಾರು (3 New SUV Car)ಗಳು:

1. ಟೊಯೋಟಾ ಟೇಸರ್:

ಏಪ್ರಿಲ್ 3ನೇ ತಾರೀಖಿನಂದು ಖ್ಯಾತ ಕಾರು ನಿರ್ಮಾಣ ಕಂಪನಿಯಾಗಿರುವಂತಹ ಟೊಯೋಟಾ ಸಂಸ್ಥೆ ತನ್ನ ಹೊಸ ಕಾರ್ ಆಗಿರುವಂತಹ Toyota Taisor ಕಾರ್ ಅನ್ನು ಲಾಂಚ್ ಮಾಡಲಿದೆ. ಮುಂಬರುವ ದಿನಗಳಲ್ಲಿ ಲಾಂಚ್ ಆಗಲು ಹೊರಟಿರುವಂತಹ ಈ ಕಾರು ಮಾರುತಿ ಸುಜುಕಿ ಸಂಸ್ಥೆಯ Fronx ಗಾಡಿಯ ಮೇಲೆ ನಿರ್ಮಾಣ ಆಗಿರುವಂತಹ ಕಾರ್ ಆಗಿದೆ. ಕಂಪನಿಯ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಈ ಕಾರಿನ ಬೆಲೆ ಮಾರುಕಟ್ಟೆಯಲ್ಲಿ ಎಂಟು ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಬಹುದು ಎಂಬುದಾಗಿ ಅಂದಾಜಿಸಲಾಗಿದೆ.

Image Source: V3 Cars

advertisement

2. XUV 300

ಭಾರತದ ಅತ್ಯಂತ ಜನಪ್ರಿಯ ಹಾಗೂ ನಂಬಿಕಸ್ತ ಕಾರು ಕಂಪನಿಗಳಲ್ಲಿ ಒಂದಾಗಿರುವಂತಹ ಮಹಿಂದ್ರ ಕಂಪನಿಯ XUV 300 facelift ಮಾಡೆಲ್ ಕಾರ್ ಅನ್ನು ಅತಿ ಶೀಘ್ರದಲ್ಲೇ ಲಾಂಚ್ ಮಾಡಲಿದೆ. ಇದರ ಒಳ ಹಾಗೂ ಹೊರ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗುತ್ತದೆ ಎಂಬುದನ್ನು ಕಂಪನಿ ಖಾತ್ರಿಪಡಿಸಿದೆ. ಇದರಲ್ಲಿ ಇರುವಂತಹ ಕೆಲವೊಂದು ಫೆಸಿಲಿಟಿಗಳನ್ನು ಕೂಡ ಕಂಪನಿ ಅಪ್ಗ್ರೇಡ್ ಮಾಡಲಿದೆ. ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲು ಸಿದ್ಧವಾಗಿರುವಂತಹ ಈ ಕಾರಿನ ಬೆಲೆ ಕೂಡ ಮಾರುಕಟ್ಟೆಯಲ್ಲಿ ಶೋರೂಮ್ನಲ್ಲಿ 8 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದಲೇ ಪ್ರಾರಂಭವಾಗಲಿದೆ.

Image Source: Spinny

 

3. Tata Motors Curvv EV

ಭಾರತ ದೇಶದ ಅತ್ಯಂತ ನಂಬಿಕಸ್ಥ ಕಾರುಗಳಲ್ಲಿ ಅಗ್ರವಾಗಿ ಕಾಣಿಸಿಕೊಳ್ಳುವ ಟಾಟಾ ಸಂಸ್ಥೆಯ ಹೊಸ ಎಲೆಕ್ಟ್ರಿಕ್ ಕಾರು (Electric Car) ಅತಿ ಶೀಘ್ರದಲ್ಲಿ ಭಾರತದ ಮಾರುಕಟ್ಟೆಗೆ ಕಾಲಿಡಲು ಸಜ್ಜಾಗಿದೆ. SUV ವಿಭಾಗದಲ್ಲಿಯೇ ಈ ಹೊಸ ಎಲೆಕ್ಟ್ರಿಕ್ ಕಾರ್ ಲಾಂಚ್ ಆಗಲಿದೆ‌. ಸಿಂಗಲ್ ಚಾರ್ಜ್ ನಲ್ಲಿ ಈ ಕಾರು 500 ಕಿಲೋಮೀಟರ್ಗಳ ವರೆಗೆ ರೇಂಜ್ ನೀಡುತ್ತದೆ ಎಂಬುದಾಗಿ ತಿಳಿದು ಬಂದಿದೆ. ವೇಗವಾಗಿ ಬೆಳೆಯುತ್ತಿರುವಂತಹ ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆಯಲ್ಲಿ ಹಾಗೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಂತಹ ಗ್ರಾಹಕರ ಬೇಡಿಕೆಯ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಈ ಕಾರಿನ ಬೆಲೆ 20 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಲಿದೆ ಎಂಬುದಾಗಿ ತಿಳಿದು ಬಂದಿದೆ.

Image Source: Moneycontrol

 

advertisement

Leave A Reply

Your email address will not be published.