Karnataka Times
Trending Stories, Viral News, Gossips & Everything in Kannada

Mahindra XUV300: 13 ಲಕ್ಷದ ಈ ಕಾರಿನ ಮೇಲೆ ಭರ್ಜರಿ ಟ್ಯಾಕ್ಸ್ ಫ್ರಿ! 3 ಲಕ್ಷದವರೆಗೆ ಉಳಿತಾಯ, ಆದರೆ ಇವರಿಗೆ ಮಾತ್ರ.

advertisement

Mahindra Compact SUV XUV300 ಅನ್ನು ಈಗ ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್ಮೆಂಟ್ ಅಂದರೆ CSD ಯಿಂದ ಖರೀದಿಸಬಹುದು. ಕಂಪನಿಯು ದೇಶಕ್ಕಾಗಿ ಸೇವೆ ಸಲ್ಲಿಸುವ ಸೈನಿಕರಿಗೆ ಇದನ್ನು ಖರೀದಿಸುವ ಸೌಲಭ್ಯ ಲಭ್ಯವಾಗುವಂತೆ ಮಾಡಿದೆ. ಅವರು SUV ಬೆಲೆಯ ಮೇಲೆ 28% ಬದಲಿಗೆ 14% GST ಅನ್ನು ಮಾತ್ರ ಪಾವತಿಸಿ ಕಾರನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಈ ಕಾರಿನ ತೆರಿಗೆಯ ನಂತರದ ಬೆಲೆ ಎಷ್ಟು.? ತೆರಿಗೆ ಪಾವತಿಸುವುದಿಲ್ಲ ಎಂದಾದರೆ ಎಷ್ಟು ಹಣ ಉಳಿಯುತ್ತದೆ ನೋಡೋಣ.

ಗ್ರಾಹಕರಿಗಾಗುವ ಲಾಭ ಎಷ್ಟು?

ಈಗಾಗಲೇ ಮಾರುಕಟ್ಟೆಯಲ್ಲಿ Mahindra Compact SUV XUV300 ಕೇವಲ 6 ರೂಪಾಂತರಗಳು ಮಾತ್ರ ಲಭ್ಯವಿರುತ್ತವೆ. ಇದರ W6 ರೂಪಾಂತರದ ಶೋ ರೂಂ ಬೆಲೆ 9,99,995 ರೂ. ಆದರೆ ಸಿಎಸ್‌ಡಿಯಲ್ಲಿ ನೀವು ಅದನ್ನು ಕೇವಲ 8,10,945 ರೂಗಳಿಗೆ ಖರೀದಿಸಬಹುದು. ಅಂದರೆ ಗ್ರಾಹಕರು ಈ ರೂಪಾಂತರದಲ್ಲಿ ರೂ 1,89,050 ಲಾಭವನ್ನು ಪಡೆಯುತ್ತಾರೆ. ಈ ರೀತಿಯಾಗಿ, ನೀವು ವಿವಿಧ ರೂಪಾಂತರಗಳನ್ನು ಹೋಲಿಸಿ ನೋಡಿದರೆ ಈ SUV ನಲ್ಲಿ 2,86,578 ರೂಗಳನ್ನು ಉಳಿಸಬಹುದು.

 

Image Source: Mahindra

 

Mahindra XUV300 ನ ಪೆಟ್ರೋಲ್ ಕಾರುಗಳ ವಿವಿಧ ರೂಪಾಂತರದ ಬೆಲೆ ಮತ್ತು ಉಳಿತಾಯ:

Mahindra XUV300 ನ 1.2-ಲೀಟರ್ ಟರ್ಬೊ ಪೆಟ್ರೋಲ್ ಮ್ಯಾನ್ಯುವಲ್ ಬಗ್ಗೆ ನೋಡುವುದಾದರೆ ಅದರ W6 ರೂಪಾಂತರದ ಶೋ ರೂಂ ಬೆಲೆ 9,99,995 ರೂ. ಆದರೆ ಸಿಎಸ್‌ಡಿಯಲ್ಲಿ ಇದರ ಬೆಲೆ 8,10,945 ರೂ. ಅಂದರೆ ಅದರ ಮೇಲೆ 1,89,050 ರೂಪಾಯಿ ಕಡಿಮೆ ತೆರಿಗೆ ವಿಧಿಸಲಾಗುತ್ತಿದೆ.

 

Image Source: CarWale

 

advertisement

ಅದೇ ರೀತಿ W8 ಸನ್‌ರೂಫ್ ವೆರಿಯಂಟ್‌ನ ಶೋರೂಂ ಬೆಲೆ 11,50,500 ರೂ. ಆದರೆ ಸಿಎಸ್‌ಡಿಯಲ್ಲಿ ಇದರ ಬೆಲೆ 9,02,884 ರೂ. ಅಂದರೆ ಅದರ ಮೇಲೆ 2,47,616 ರೂಪಾಯಿ ಕಡಿಮೆ ತೆರಿಗೆ ವಿಧಿಸಲಾಗುತ್ತಿದೆ.

ಇನ್ನು W8 OPT ರೂಪಾಂತರದ ಶೋ ರೂಂ ಬೆಲೆ 12,60,501 ರೂ. ಆದರೆ ಸಿಎಸ್‌ಡಿಯಲ್ಲಿ ಇದರ ಬೆಲೆ 9,98,865 ರೂ. ಅಂದರೆ ಇದರ ಮೇಲೆ 2,61,636 ರೂಪಾಯಿ ಕಡಿಮೆ ತೆರಿಗೆ ವಿಧಿಸಲಾಗುತ್ತಿದೆ.

Mahindra XUV300 ನ ಡೀಸೆಲ್ ಕಾರುಗಳ ವಿವಿಧ ರೂಪಾಂತರದ ಬೆಲೆ ಮತ್ತು ಉಳಿತಾಯ:

 

Image Source: CarTrade

 

Mahindra XUV300 ನ 1.5-ಲೀಟರ್ ಟರ್ಬೊ ಡೀಸೆಲ್ ಮ್ಯಾನುವಲ್ ಬಗ್ಗೆ ನೋಡುವುದಾದರೆ ಅದರ W8 ಸನ್‌ರೂಫ್ DT ರೂಪಾಂತರದ ಶೋ ರೂಂ ಬೆಲೆ 13,15,500 ರೂ. ಆದರೆ ಸಿಎಸ್‌ಡಿಯಲ್ಲಿ ಇದರ ಬೆಲೆ 10,28,922 ರೂ. ಅಂದರೆ ಅದರ ಮೇಲೆ 2,86,578 ಕಡಿಮೆ ತೆರಿಗೆ ವಿಧಿಸಲಾಗುತ್ತಿದೆ.

ಇನ್ನು W8 OPT ರೂಪಾಂತರದ ಶೋ ರೂಂ ಬೆಲೆ 13,92,499 ರೂ. ಆದರೆ ಸಿಎಸ್‌ಡಿಯಲ್ಲಿ ಇದರ ಬೆಲೆ 11,09,456 ರೂ. ಅಂದರೆ ಅದರ ಮೇಲೆ 2,83,043 ಕಡಿಮೆ ತೆರಿಗೆ ವಿಧಿಸಲಾಗುತ್ತಿದೆ.

ಅಷ್ಟೇ ಅಲ್ಲದೇ 1.5-ಲೀಟರ್ ಟರ್ಬೊ ಡೀಸೆಲ್ ಆಟೋಮ್ಯಾಟಿಕ್ ಬಗ್ಗೆ ನೋಡುವುದಾದರೆ ಅದರ W8 OPT ರೂಪಾಂತರದ ಶೋ ರೂಂ ಬೆಲೆ 14,60,500 ರೂ. ಆದರೆ ಸಿಎಸ್‌ಡಿಯಲ್ಲಿ ಇದರ ಬೆಲೆ 11,84,042 ರೂ. ಅಂದರೆ ಅದರ ಮೇಲೆ 2,76,458 ಕಡಿಮೆ ತೆರಿಗೆ ವಿಧಿಸಲಾಗುತ್ತಿದೆ.

advertisement

Leave A Reply

Your email address will not be published.