Karnataka Times
Trending Stories, Viral News, Gossips & Everything in Kannada

Voter ID: ಐದೇ ನಿಮಿಷದಲ್ಲಿ ನಿಮ್ಮ ಡಿಜಿಟಲ್ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳಿ! ಸಿಂಪಲ್ ಸ್ಟೆಪ್ಸ್

advertisement

ಈಗಾಗಲೇ 2024ರ ಲೋಕಸಭಾ ಚುನಾವಣೆಯ ಘೋಷಣೆ ಆಗಿದೆ. ಮತ್ತು ಎಲ್ಲರಲ್ಲಿಯೂ ಈ ಬಾರಿಯ ಲೋಕಸಭಾ ಚುನಾವಣೆ ಬಹಳ ಕೂತುಹಲವನ್ನು ಸೃಷ್ಟಿಸಿದೆ, ಮತ್ತು ಈಗಾಗಲೇ ಲೋಕಸಭಾ ಚುನಾವಣೆಯ ಸಿದ್ಧತೆಗಳು ಕೂಡ ಬಹಳ ಬಿರುಸಿನಿಂದ ಸಾಗಿದೆ. ಇನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದಾರಾಗಿರುವ ಪಕ್ಷದ ಅಭ್ಯರ್ಥಿಗಳು ಮತದಾರರ ಗಮನ ಸೆಳೆಯಲು ಮುಂದಾಗಿದ್ದಾರೆ. ಇನ್ನು ಮತದಾನ ಮಾಡಲು ಮತದಾರರ ಗುರುತಿನ ಚೀಟಿ (Voter ID Card) ಯ ಅವಶ್ಯಕತೆ ಇದೆ. ಇದರ ನಡುವೆ ಆಕಸ್ಮಿಕವಾಗಿ ಗುರುತಿನ ಚೀಟಿ ಕಳೆದು ಹೋದಲ್ಲಿ ನಾವು ಡೂಪ್ಲಿಕೇಟ್ ಗುರುತಿನ ಚೀಟಿಯನ್ನು ಪಡೆಯಲು ಅರ್ಜಿ ಸಲ್ಲಿಸಿ ಸುಲಭವಾಗಿ ಮತ್ತೊಂದು ಗುರುತಿನ ಚೀಟಿಯನ್ನು ಪಡೆಯಬಹುದು.

ಹಾಗಾದರೆ ಗುರುತಿನ ಚೀಟಿ (Voter ID)ಯನ್ನು ಪಡೆಯಲು ಇರುವ ಸುಲಭ ವಿಧಾನಗಳು ಯಾವುವು? ಎಂದು ತಿಳಿದುಕೊಳ್ಳೋಣ:

 

Image Source: Deccan Herald

 

advertisement

ಚುನಾವಣೆಯ ಸಂದರ್ಭದಲ್ಲಿ ಮತದಾನ ಮಾಡುವಾಗ ಮತದಾರರ ಗುರುತಿನ ಚೀಟಿ ಅಗತ್ಯ. ಆದರೆ, ಮತದಾರರ ಗುರುತಿನ ಚೀಟಿ (Voter ID Card) ಯಲ್ಲಿ ಅಡ್ರೆಸ್ (Address), ಮೊಬೈಲ್ ನಂಬರ್ (Mobile Number), ಫೋಟೋ (Photo) ಮುಂತಾದವುಗಳನ್ನು ಅಪ್ಡೇಟ್ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಆಕಸ್ಮಿಕವಾಗಿ ಗುರುತಿನ ಚೀಟಿ ಕಳೆದು ಹೋದಲ್ಲಿ ಅಥವಾ ಮತದಾರರ ಗುರುತಿನ ಚೀಟಿ ನಿಷ್ಪ್ರಯೋಜಕ ಆಗಿದ್ದರೆ, ನಕಲಿ ಅಥವಾ ಡ್ಯುಪ್ಲಿಕೇಟ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು. ಮತ್ತು ಅದರಿಂದ ಸುಲಭವಾಗಿ ಮತದಾರರ ಗುರುತಿನ ಚೀಟಿಯನ್ನು ಪಡೆಯಬಹುದು.

ಹಾಗಾದರೆ ಮತದಾರರ ಗುರುತಿನ ಚೀಟಿಯನ್ನು ಪಡೆಯಲು ಪಾಲಿಸಬೇಕಾದ ವಿಧಾನಗಳು ಮತ್ತು ಸೂಕ್ತ ದಾಖಲೆಗಳು:

 

Image Source: Ricardo Alpoim Arquiteto

 

  • ಮೊದಲಿಗೆ ಮತದಾರರ ಗುರುತಿನ ಚೀಟಿ (Voter ID Card) ಯೊಂದಿಗೆ ರಿಜಿಸ್ಟರ್ ಆಗಿರುವಂತಹ ಮೊಬೈಲ್ ನಂಬರ್ ಹೊಂದಿರುವುದು ಕಡ್ಡಾಯವಾದಂತಹ ದಾಖಲೆಯಾಗಿದೆ. ಇದರೊಂದಿಗೆ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವಂತಹ ವೋಟರ್ ಸರ್ವಿಸ್ ಪೋರ್ಟಲ್ ಗೆ (https//:Voters.eci.gov.in) ಭೇಟಿ ನೀಡಿ ಅಲ್ಲಿ ಸರಿಯಾದ ರೀತಿಯಲ್ಲಿ ಬೇಕಾಗಿರುವಂತಹ ದಾಖಲೆಗಳನ್ನು ಒದಗಿಸುವ ಮೂಲಕ ಮತದಾರರ ಚೀಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
  • ಇನ್ನು ಪೋರ್ಟಲ್ ಗೆ ಭೇಟಿ ಮಾಡಿದ ನಂತರ e-EPIC ಡೌನ್‌ಲೋಡ್ ಮಾಡಿ.
  • EPIC ಸಂಖ್ಯೆ (ಮತದಾರ ID ಸಂಖ್ಯೆ) ಅಥವಾ ಫಾರ್ಮ್ ಸಂಖ್ಯೆಯನ್ನು ನಮೂದಿಸಬೇಕು ಇದರ ನಂತರ ‘ಓಟಿಪಿ ವಿನಂತಿ’ (Request OTP) ಕ್ಲಿಕ್ ಮಾಡಬೇಕು.
  • ಮತ್ತು ಈ OTP ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯಲ್ಲಿ ಬರುತ್ತದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡಿರಬೇಕು .OTP ನಮೂದಿಸಿದ ನಂತರ, ಸಲ್ಲಿಸು (Submit) ಕ್ಲಿಕ್ ಮಾಡಬೇಕು, ಇದರ ನಂತರ ನಿಮ್ಮ ಇ-ಇಪಿಐಸಿ e-EPIC (ಡಿಜಿಟಲ್ ವೋಟರ್ ಕಾರ್ಡ್) ಡೌನ್‌ಲೋಡ್ ಆಗುತ್ತದೆ.

advertisement

Leave A Reply

Your email address will not be published.