Karnataka Times
Trending Stories, Viral News, Gossips & Everything in Kannada

SBI: ಸ್ಟೇಟ್ ಬ್ಯಾಂಕ್ ನಲ್ಲಿ 1 ಲಕ್ಷದಿಂದ 5 ಲಕ್ಷದವರೆಗೆ ಹಣ ಇಡುವವರಿಗೆ ಸಿಹಿಸುದ್ದಿ!

advertisement

ನೀವು ನಿಮ್ಮ ದುಡಿದ ಹಣವನ್ನು ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ ಪಡೆಯಲು ಬಯಸಿದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದ ಎಫ್ ಡಿ ಯೋಜನೆಯನ್ನು ಆಯ್ದುಕೊಳ್ಳಬಹುದು. ಇದು ಪಕ್ಕ ಗ್ಯಾರಂಟಿ ರಿಟರ್ನ್ ನೀಡುವ ಯೋಜನೆಯಾಗಿದ್ದು ಉತ್ತಮ ಬಡ್ಡಿ ದರವನ್ನು ಕೂಡ ಪಡೆದುಕೊಳ್ಳುತ್ತಿರಿ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ಸಿಗುತ್ತೆ ಉತ್ತಮ ಬಡ್ಡಿದರ!

ಎಸ್ ಬಿ ಐ (SBI) ನಲ್ಲಿ ನೀವು ನಿಗದಿತ ಸಮಯಕ್ಕೆ ಠೇವಣಿ ಮಾಡಿದರೆ ವಿಶೇಷ ಎಫ್ ಡಿ ಯೋಜನೆಗಳು ಲಭ್ಯ ಇವೆ. ನೀವು ಮುಕ್ತಾಯದ ಅವಧಿಯಲ್ಲಿ ಅತ್ಯುತ್ತಮವಾದ ರಿಟರ್ನ್ ಪಡೆದುಕೊಳ್ಳಬಹುದು. ಒಂದು ಲಕ್ಷ, ಎರಡು ಲಕ್ಷ, ಮೂರು ಲಕ್ಷ, ನಾಲ್ಕು ಲಕ್ಷ ಹಾಗೂ ಐದು ಲಕ್ಷ ಠೇವಣಿ ಇಟ್ಟರೆ ಒಟ್ಟಾರೆಯಾಗಿ ನಿಮಗೆ ಸಿಗುವ ರಿಟರ್ನ್ ಎಷ್ಟು ಎಂಬುದನ್ನ ಈ ಲೇಖನದಲ್ಲಿ ನೋಡೋಣ.

Image Source: Business Today

ಎಫ್ ಡಿ ಯಲ್ಲಿ ಠೇವಣಿ ಇಡಬೇಕಾದ ಮೊತ್ತ!

advertisement

ಎಫ್ ಡಿ (FD) ಅಥವಾ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ನಲ್ಲಿ ಕನಿಷ್ಠ ಸಾವಿರ ರೂಪಾಯಿಗಳ ಎಫ್ ಡಿ ಮಾಡಬಹುದು. ಗರಿಷ್ಠ ಎಷ್ಟು ಹಣವನ್ನು ಬೇಕಾದರೂ ಠೇವಣಿ ಮಾಡಬಹುದು. ಎಸ್ ಬಿ ಐ ನ 444 ದಿನದಿಂದ 10 ವರ್ಷಗಳ ವರೆಗೆ ಸ್ಥಿರ ಠೇವಣಿ ಇಟ್ಟರೆ ಉತ್ತಮ ಲಾಭ ಪಡೆದುಕೊಳ್ಳಬಹುದು. ಅಲ್ಪಾವತಿಗಿಂತ ದೀರ್ಘಾವಧಿ ಠೇವಣಿ ಮೇಲೆ ಹೆಚ್ಚು ಲಾಭ ಸಿಗುತ್ತದೆ.

ಎಸ್ ಬಿ ಐ ನಲ್ಲಿ 5 ವರ್ಷಗಳ ಎಫ್ ಡಿ ಮಾಡಿದ್ರೆ 7.5% ನಷ್ಟು ಬಡ್ಡಿ ದರ ಸಿಗುತ್ತದೆ ಹಾಗೂ ಹಿರಿಯ ನಾಗರಿಕರ ಠೇವಣಿಗೆ ಹೆಚ್ಚಿನ ಬಡ್ಡಿ ದರ ಒದಗಿಸಲಾಗುವುದು. ಎಫ್ ಡಿ ಯನ್ನು 10 ವರ್ಷ ವಯಸ್ಸಿನ ಅಪ್ರಾಪ್ತ ಮಗುವಿನಿಂದ ಹಿಡಿದು ವಯಸ್ಸಾದವರವರಿಗೆ ಯಾರು ಬೇಕಾದರೂ ಠೇವಣಿ ಇಡಬಹುದು.

Image Source: DNA india

ಒಂದರಿಂದ ಐದು ಲಕ್ಷ ರೂಪಾಯಿಗಳ ಎಫ್ ಡಿಯನ್ನು ಐದು ವರ್ಷಗಳ ಅವಧಿಗೆ ಮಾಡಿದ್ರೆ ನಿಮಗೆ ಸಿಗುವ ಮೊತ್ತ!

  • ಐದು ವರ್ಷಗಳಿಗೆ 6.5% ಬಡ್ಡಿ ದರದಲ್ಲಿ 1 ಲಕ್ಷ ರೂಪಾಯಿ ಠೇವಣಿ ಮಾಡಿದರೆ – 1,38, 042 ರೂಪಾಯಿ ಹಿಂಪಡೆಯುತ್ತಿರಿ.
  • ಐದು ವರ್ಷಗಳಿಗೆ 6.5% ಬಡ್ಡಿ ದರದಲ್ಲಿ 2 ಲಕ್ಷ ರೂಪಾಯಿ ಠೇವಣಿ ಮಾಡಿದರೆ – 2 76, 084 ರೂಪಾಯಿ ಹಿಂಪಡೆಯುತ್ತಿರಿ.
  • ಐದು ವರ್ಷಗಳಿಗೆ 6.5% ಬಡ್ಡಿ ದರದಲ್ಲಿ 3 ಲಕ್ಷ ರೂಪಾಯಿ ಠೇವಣಿ ಮಾಡಿದರೆ – 4,14,156 ರೂಪಾಯಿ ಹಿಂಪಡೆಯುತ್ತಿರಿ.
  • ಐದು ವರ್ಷಗಳಿಗೆ 6.5% ಬಡ್ಡಿ ದರದಲ್ಲಿ 4 ಲಕ್ಷ ರೂಪಾಯಿ ಠೇವಣಿ ಮಾಡಿದರೆ – 5,52,168 ರೂಪಾಯಿ ಹಿಂಪಡೆಯುತ್ತಿರಿ.
  • ಐದು ವರ್ಷಗಳಿಗೆ 6.5% ಬಡ್ಡಿ ದರದಲ್ಲಿ 5 ಲಕ್ಷ ರೂಪಾಯಿ ಠೇವಣಿ ಮಾಡಿದರೆ – 6,90,210 ರೂಪಾಯಿ ಹಿಂಪಡೆಯುತ್ತಿರಿ.

ಈ ಲೆಕ್ಕಾಚಾರದ ಆಧಾರದ ಮೇಲೆ ನೀವು ಎಷ್ಟು ರೂಪಾಯಿಗಳನ್ನು ಎಷ್ಟು ವರ್ಷಗಳ ಅವಧಿಗೆ ಎಫ್ ಡಿ ಇಡಬೇಕು ಎಂದು ನಿರ್ಧರಿಸಿ ನೇರವಾಗಿ ಎಸ್ ಬಿ ಐ (SBI) ಬ್ಯಾಂಕಿಗೆ ಹೋಗಿ ಎಫ್ ಡಿ ಆರಂಭಿಸಬಹುದು ಅಥವಾ ಆನ್ಲೈನ್ ಮೂಲಕವೂ ಠೇವಣಿ ಮಾಡಬಹುದು.

advertisement

Leave A Reply

Your email address will not be published.