Karnataka Times
Trending Stories, Viral News, Gossips & Everything in Kannada

Fixed Deposit: 60 ವರ್ಷ ದಾಟಿದವರ ಹೆಸರಲ್ಲಿ FD ಇಡುವವರಿಗೆ ಗುಡ್ ನ್ಯೂಸ್ ಕೊಟ್ಟ ಈ ಬ್ಯಾಂಕುಗಳು! ಬಡ್ಡಿ ಎಷ್ಟು ಗೊತ್ತಾ?

advertisement

ಹಿರಿಯ ನಾಗರಿಕರಿಗೆ ಎಲ್ಲ ಕಡೆ ವಿಶೇಷ ಸ್ಥಾನ ಮಾನ ಇರುವುದು ಕಾಣಬಹುದು. ಬಸ್ ನಲ್ಲಿ ಸೀಟ್ ಮೀಸಲಾತಿ, ಕಡಿಮೆ ದರದ ಟಿಕೇಟ್ ನೀಡುವ ಜೊತೆಗೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಹೂಡಿಕೆ ಮಾಡುವುದರ ಮೇಲೆ ಕೂಡ ವಿಶೇಷ ಸೌಲಭ್ಯ ಹಾಗೂ ಅಧಿಕ ಬಡ್ಡಿದರ ನೀಡಲಾಗುವುದು. ಹಿರಿಯ ನಾಗರಿಕರಿಗೆ ಉಳಿತಾಯ ಮಾಡಲು ಎಲ್ಲಿ ಉತ್ತಮ ವೇದಿಕೆ ಇರಲಿದೆ. ಎಲ್ಲಿ Fixed Deposit ಮಾಡಿದರೆ ಅಧಿಕ ಬಡ್ಡಿ ಸಿಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಹಿರಿಯ ನಾಗರಿಕರಿ ಸ್ಥಿರ ಠೇವಣಿಯ ಮೇಲೆ ಹೂಡಿಕೆ ಮಾಡಲು ಚಿಂತನೆ ನಡೆಸಿದ್ದರೆ ಅಂತವರಿಗೆ ಈ ಮಾಹಿತಿ ಉಪಯುಕ್ತ ಆಗಲಿದೆ. ಸರಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್, ಕರ್ನಾಟಕಬ್ಯಾಂಕ್ ನಲ್ಲಿ ಹಿರಿಯ ನಾಗರಿಕರಿಗೆ Fixed Deposit ಮೇಲೆ‌ 7.5 ರಿಂದ 8% ವರೆಗೆ ಬಡ್ಡಿದರ ನೀಡಲಾಗುವುದು ಆದರೆ ಖಾಸಗಿ ಬ್ಯಾಂಕುಗಳು ICICI, HDFC, Axis Bank ನಲ್ಲಿ 8.5% ವರೆಗೂ ಕೂಡ ಬಡ್ಡಿದರ ಸಿಗಲಿದೆ ಆದರೆ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು 9.50% ವರೆಗೆ ಬಡ್ಡಿದರ ನೀಡಲಾಗುತ್ತಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾವೆಲ್ಲ ಬ್ಯಾಂಕುಗಳಿವೆ?

 

Image Source: Dialabank

 

Fincare Small Finance Bank: ಫಿನ್ ಕೇರ್ ಸ್ಮಾಲ್ ಫೈನಾನ್ಸ್ ನಲ್ಲಿ 444ದಿನಕ್ಕೆ ಹಿರಿಯ ನಾಗರಿಕರಿಗೆ FD ಮೇಲೆ 9% ಬಡ್ಡಿದರ ನೀಡಲಾಗುವುದು.

Ujjivan Small Finance: ಉಜ್ಜೀವನ್ ಸ್ಮಾಲ್ ಫೈನಾನ್ಸ್ ನಲ್ಲಿ ಹಿರಿಯ ನಾಗರಿಕರಿಗೆ FD ಮೇಲೆ 15ತಿಂಗಳ ಅವಧಿಗೆ 9% ನಷ್ಟು ಬಡ್ಡಿದರ ಸಿಗಲಿದೆ.

advertisement

Suryoday Small Finance Bank: ಇದರಲ್ಲಿ ಎರಡು ವರ್ಷದ ಅವ ಧಿಗೆ ಹಿರಿಯ ನಾಗರಿಕರಿಗೆ 9.25% ನಷ್ಟು ಬಡ್ಡಿದರ ಸಿಗಲಿದೆ.

AU Small Finance Bank: ಇದರಲ್ಲಿ ಹಿರಿಯನಾಗರಿಕರಿಗೆ FD ಮೇಲೆ 8.50% ನಂತೆ ಬಡ್ಡಿದರವನ್ನು ನೀಡಲಾಗುತ್ತಿದೆ. 18 ತಿಂಗಳ FD ಮೇಲೆ 8.50%ನಷ್ಟು ಬಡ್ಡಿದರ ಸಿಗಲಿದೆ.

Utkarsh Small Finance Bank: ಇದರಲ್ಲಿ 2-3ವರ್ಷದ ಅವಧಿಗೆ ಹಿರಿಯ ನಾಗರಿಕರಿಗೆ 9.10% ಬಡ್ಡಿದರ ಸಿಗಲಿದೆ.

Unity Small Finance Bank: ಇದರಲ್ಲಿ  1001ದಿನದ ಅವಧಿಗೆ 9.50% ನಷ್ಟು ಬಡ್ಡಿದರ ನೀಡಲಾಗುತ್ತದೆ.

North East Small Finance Bank: ಇದರಲ್ಲಿ 555 ದಿನ ಹಾಗೂ1111 ದಿನಗಳ FD ಮೇಲೆ ಹಿರಿಯ ನಾಗರಿಕರಿಗೆ ಅಧಿಕ ಬಡ್ಡಿ ದರ ಸಿಗಲಿದೆ. 9.25% ನಷ್ಟು ಬಡ್ಡಿದರ ಸಿಗಲಿದೆ.

ಒಟ್ಟಾರೆಯಾಗಿ ಬಡ್ಡಿದರ ಅಧಿಕ ವಿಚಾರಕ್ಕೆ ಹೋಲಿಸಿದರೆ ಯುನಿಟ್ ಸ್ಮಾಲ್ ಫೈನಾನ್ಸ್ ಹಾಗೂ ಸೂರ್ಯೋದಯ ಹಾಗೂ ನಾರ್ಥ್ ಈಸ್ಟ್ ಸ್ಮಾಲ್ ಫೈನಾನ್ಸ್ ನಲ್ಲಿ ಅಧಿಕ ಮಟ್ಟದ ಬಡ್ಡಿದರ ಸಿಗಲಿದೆ ಎನ್ನಬಹುದು.

advertisement

Leave A Reply

Your email address will not be published.