Karnataka Times
Trending Stories, Viral News, Gossips & Everything in Kannada

Guarantee Schemes: ಎಲ್ಲ ಗ್ಯಾರಂಟಿ ಯೋಜನೆಗಳ ಬಗ್ಗೆ ಡಿಕೆ ಶಿವಕುಮಾರ್ ದೊಡ್ಡ ಹೇಳಿಕೆ! ಮತ್ತೆ ಸಂಭ್ರಮಿಸಿದ ಮಹಿಳೆಯರು

advertisement

ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಐದು ಭರವಸೆಗಳನ್ನು ಈಡೇರಿಕೆ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಸರಕಾರ ತಿಳಿಸಿತ್ತು. ಚುನಾವಣೆ ಯಲ್ಲಿ ಬಹು ಮತವನ್ನು ಪಡೆಯುವ ಮೂಲಕ ಕಾಂಗ್ರೆಸ್ ಸರಕಾರ ಜಯಗಳಿಸಿತ್ತು. ಅದೇ ರೀತಿ ಐದು ಗ್ಯಾರಂಟಿ ಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿಯೋಜನೆ, ಯುವನಿಧಿ ಯೋಜನೆಗಳನ್ನು ಒಂದೊಂದಾಗಿ ಆರಂಭ ಮಾಡಿದೆ. ಹೆಚ್ಚಿನ ಬಡವರ್ಗದ ಜನತೆ ಈ ಗ್ಯಾರಂಟಿ ಯೋಜನೆಗಳ (Guarantee Schemes) ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಆದ್ರೆ ಗ್ಯಾರಂಟಿ ಯೋಜನೆಗಳ ಆರಂಭದ ಬಗ್ಗೆ ವಿರೋಧ ಪಕ್ಷಗಳ ಬಗ್ಗೆ ಟೀಕೆಗಳು ಕೇಳಿಬಂದಿದ್ದವು, ಅರ್ಧದಲ್ಲೇ ಈ ಗ್ಯಾರಂಟಿ ಯೋಜನೆಗಳು ಸ್ಥಗಿತ ಆಗುತ್ತವೆ, ಈ ಯೋಜನೆಗಳಿಗೆ ಹಣ ಏಲ್ಲಿಂದ ಇತ್ಯಾದಿ ವಿರೋಧ ಪರ ಮಾತುಗಳು ಕೇಳಿಬಂದಿತ್ತು. ಇದೀಗ ಡಿ.ಕೆ ಶಿವಕುಮಾರ್ ಅವರು ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ಪಷ್ಟನೆ ಯನ್ನು ನೀಡಿದ್ದಾರೆ.

ಏನು ಹೇಳಿದ್ರು?

ಇನ್ನೇನೂ ಲೋಕಸಭೆ ಚುನಾವಣೆ ನಡೆಯಲಿದ್ದು ಗ್ಯಾರಂಟಿ ಯೋಜನೆಗಳ ಮಹತ್ವದ ಬಗ್ಗೆ ಡಿ.ಕೆ ಶಿವಕುಮಾರ್ ಮಾತನಾಡಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳಿಗೆ ಐದು ವರ್ಷಗಳವರೆಗೆ ವಾರಂಟಿ ಇದೆ. ಯಾವುದೇ ಕಾರಣಕ್ಕೂ ಈ ಯೋಜನೆಗಳ ಸ್ಥಗಿತ ಆಗಲ್ಲ, ಇದಕ್ಕೆ ಅಗತ್ಯವಾದ ಅನುದಾನವನ್ನು ಈಗಾಗಲೇ ಬಜೆಟ್ ನಲ್ಲಿ ಇರಿಸಲಾಗಿದೆ, ಇದು ನಿರಂತರವಾಗಿ ನಡೆಯಲಿರುವ ಪ್ರಕ್ರಿಯೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದಾರೆ.

Karnataka Guarantee Schemes
Image Source: Vistara News

advertisement

ನುಡಿದಂತೆ ನಡೆದಿರುವ ಸರಕಾರ:

ಶೃಂಗೇರಿಯ ಗೌರಿಗದ್ದೆ ಆಶ್ರಮಕ್ಕೆ ಭೇಟಿ ನೀಡಿ ಮಾತನಾಡಿದ ಇವರು ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ವಿಫಲ ಆಗುವುದಿಲ್ಲ. ಪ್ರಾರ್ಥನೆಗೆ ಯಾವತ್ತಿದ್ದರೂ ಪ್ರತಿಫಲ ದೊರೆಯುತ್ತದೆ. ಹಾಗಾಗಿ ನಾವು ನುಡಿದಂತೆ ನಡೆದಿರುವುದು ಕೂಡ ನಮ್ಮ ಪ್ರಾರ್ಥನೆಯ ಫಲ,ಹಾಗಾಗಿ ಇನ್ನಷ್ಟು ಯೋಜನೆಗಳನ್ನು ಬಡವರ ಪಾಲಿಗೆ ಜಾರಿಗೆ ತರುತ್ತೇವೆ ಎಂದು ಭರವಸೆ ಯನ್ನು ನೀಡಿದ್ದಾರೆ.

ಗ್ಯಾರಂಟಿ ಯೋಜನೆಗಳು (Guarantee Schemes) ಬಡವರ ಯೋಜನೆ:

ಈ ಬಗ್ಗೆ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಈ ಗ್ಯಾರಂಟಿ ಯೋಜನೆಗಳು ಬಡವರ ಯೋಜನೆಗಳಾಗಿದ್ದು ಅವುಗಳನ್ನು ಖಂಡಿತ ಮುಂದುವರೆಸಲಾಗುತ್ತದೆ. ಗ್ಯಾರಂಟಿ ಯೋಜನೆಗಳು ಐದು ವರ್ಷಗಳವರೆಗೂ ಅನುಷ್ಠಾನಗೊಳ್ಳಲಿದ್ದು ರಾಜ್ಯದ ಜನತೆಯನ್ನು ಮೋಸ ಮಾಡುವ ಪ್ರಶ್ನೆಯೇ ಇಲ್ಲ, ಎಲ್ಲ ಬಡಜನತೆಯ ವರ್ಗಕ್ಕೂ ಇದು ದೊರೆಯುವಂತಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

advertisement

Leave A Reply

Your email address will not be published.