Karnataka Times
Trending Stories, Viral News, Gossips & Everything in Kannada

Congress 3 Guarantees: ಕರ್ನಾಟಕದ ಈ 3 ಗ್ಯಾರಂಟಿಗಳು ರದ್ದಾಗುತ್ತಾ? ಹೊಸ ಟ್ವಿಸ್ಟ್

advertisement

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದಾಗಿನಿಂದ ಸಿಎಂ ಸಿದ್ದರಾಮಯ್ಯ (CM Siddaramaiah) ನವರು ಘೋಷಿಸಿರುವಂತಹ ಐದು ಗ್ಯಾರಂಟಿಗಳನ್ನು ಕೂಡ ಜಾರಿಗೆ ತರಲಾಗಿದೆ. ಇನ್ನು ನುಡಿದಂತೆ ನಡೆದ ಸರ್ಕಾರ ಎಂಬ ಮಾತನ್ನು ಸಿದ್ದರಾಮಯ್ಯನವರು ಪೂರ್ತಿಗೊಳಿಸಿದ್ದಾರೆ. ಆದರೆ ಇದೀಗ ರಾಜ್ಯ ಸರ್ಕಾರ ನೀಡುತ್ತಿರುವ ಮೂರು ಯೋಜನೆಗಳನ್ನು (Congress 3 Guarantees) ಕೂಡ ಸ್ಥಗಿತಗೊಳಿಸುವಂತಹ ಪರಿಸ್ಥಿತಿ ಎದುರಾಗಲಿದೆ ಎಂದು ಮೂಲಗಳು ಹೇಳುತ್ತಿವೆ. ಇದಕ್ಕೆ ಮೂಲ ಕಾರಣ, ಬರುತ್ತಿರುವಂತಹ ಲೋಕಸಭಾ ಚುನಾವಣೆ.

ಕಾಂಗ್ರೆಸ್ ಸರ್ಕಾರವು ನೀಡುತ್ತಿರುವಂತಹ ಯೋಜನೆಗಳಿಂದಾಗಿ ಸರ್ಕಾರಕ್ಕೆ ಈಗಾಗಲೇ ಬಜೆಟ್ ನಲ್ಲಿ ವ್ಯತ್ಯಾಸ ಕಂಡು ಬಂದಿದೆ. ಜೊತೆಗೆ ಸರ್ಕಾರದ ವೆಚ್ಚವು ಹೆಚ್ಚಾಗಿದೆ. ಅಂದರೆ ಕಾಂಗ್ರೆಸ್ ಸರ್ಕಾರವು ಘೋಷಿಸಿರುವ 5 ಗ್ಯಾರಂಟಿಗಳ ಸಲುವಾಗಿ 3,27,747 ಕೋಟಿಯಷ್ಟು ಸರ್ಕಾರದ ವೆಚ್ಚ ಹೆಚ್ಚುವರಿ ಆಗಿದೆ. ಕೇವಲ ಫ್ರೀ ಬಸ್ ಸಂಚಾರ ಒಂದೇ ಯೋಜನೆಗಾಗಿ ಸರ್ಕಾರ 4000 ಕೋಟಿ ಹಣವನ್ನು ಮೀಸಲಾಗಿ ಇಟ್ಟಿದೆ. ಇನ್ನು ಈ ಬಾರಿ ನಡೆಯಲಿರುವಂತಹ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷಿಸಿದಂತಹ ಮಟ್ಟದಲ್ಲಿ ಗೆಲುವನ್ನು ಸಾಧಿಸದೆ ಹೋದರೆ ಈ ಎಲ್ಲ ಯೋಜನೆಗಳು ಸ್ಥಗಿತಗೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ.

 

Image Source: India TV News

 

advertisement

ಪ್ರಸ್ತುತದಲ್ಲಿ ರಾಜ್ಯದ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವು ತನ್ನ 5 ಗ್ಯಾರಂಟಿಗಳ ನಿಮಿತ್ತವಾಗಿ ವಾರ್ಷಿಕವಾಗಿ ಒಂದು ಬಡ ಕುಟುಂಬಕ್ಕೆ 50 ರಿಂದ 55 ಸಾವಿರದಷ್ಟು ಆರ್ಥಿಕ ಸೌಲಭ್ಯವನ್ನು ಒದಗಿಸುವುದರ ಮೂಲಕ, ಆರ್ಥಿಕ ಸಬಲತೆಯನ್ನು ಸಾಧಿಸಲು ಮುಂದಾಗಿದೆ. ಇನ್ನು ಈ ಯೋಜನೆಗಳ ನಿಮಿತವಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬದವರಿಗೆ ಬಹಳಷ್ಟು ಸೌಲಭ್ಯಗಳು ಕೂಡ ಸುಲಭವಾಗಿ ದೊರೆಯುತ್ತಿವೆ.

ಇನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿಯ ಸರ್ಕಾರ ಆಡಳಿತಕ್ಕೆ ಬಂದರೆ ರಾಜ್ಯದಲ್ಲಿ ಹಲವಾರು ಬದಲಾವಣೆಗಳು ಆಗುವುದಂತೂ ನಿಶ್ಚಯವಾಗಿದೆ. ಜೊತೆಗೆ ಈಗ ನೀಡುತ್ತಿರುವಂತಹ ಈ ಐದು ಗ್ಯಾರಂಟಿಗಳ ಸ್ಥಗಿತತೆ ಕೂಡ ಉಂಟಾಗುವ ಸಾಧ್ಯತೆಗಳಿವೆ ಆದರೆ ಪಡಿತರ ಅಕ್ಕಿ ವಿತರಣೆ ಹಾಗೂ ಬಾಕಿ‌ಹಣ ಪಾವತಿ ಯೋಜನೆ ಮಾತ್ರ ಪೂರ್ತಿ ಪ್ರಮಾಣದಲ್ಲಿ ಜಾರಿಯಲ್ಲಿ ಇರುತ್ತದೆ. ಮತ್ತು ಅಕ್ಕಿಯನ್ನೇ ವಿತರಿಸುವ ರೂಪದಲ್ಲಿ ಮುಂದುವರೆಯಲಿದೆ, ಇದನ್ನು ಹೊರತುಪಡಿಸಿ ಗೃಹಜೋತಿ (Gruha Jyothi), ಗೃಹಲಕ್ಷ್ಮಿ (Gruha Lakshmi), ಯುವನಿಧಿ (Yuva Nidhi) ಯೋಜನೆಗಳು ಸ್ಥಗಿತಗೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ನವರು ಆರ್ಥಿಕ ತಜ್ಞರಾಗಿದ್ದಾರೆ, ಮತ್ತು ಈಗಾಗಲೇ ಹಲವಾರು ಬಾರಿ ಬಜೆಟ್ ಮಂಡನೆ ಮಾಡಿರುವಂತಹ ಅನುಭವ ಕೂಡ ಅವರಿಗೆ ಇದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವು ನಿರೀಕ್ಷಿಸಿದ ಮಟ್ಟಿಗೆ ಗೆಲುವು ಸಾಧಿಸಿಲ್ಲವಾದರೆ ಮತ್ತು ಮೋದಿ ಸರ್ಕಾರದ ಆಡಳಿತ ಮತ್ತೊಮ್ಮೆ ಮುಂದುವರೆದರೆ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಕೂಡ ಕೆಲವು ಮೂಲಗಳು ತಿಳಿಸುತ್ತಿದ್ದು, ಅವರ ಹೊರತಾಗಿ ಬೇರೆ ಯಾರೂ ಕೂಡ ಇಷ್ಟು ಚಾಕಚಕ್ಯತೆಯಿಂದ ಸರ್ಕಾರವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

advertisement

Leave A Reply

Your email address will not be published.