Karnataka Times
Trending Stories, Viral News, Gossips & Everything in Kannada

Gruha Lakshmi: ಈ 3 ಡಾಕ್ಯುಮೆಂಟ್ಸ್ ನೀಡಿದ್ರೆ ಗೃಹಲಕ್ಷ್ಮಿ ಎಲ್ಲ ಕಂತಿನ ಹಣ ಜಮೆ? ಬೆಳ್ಳಂಬೆಳಗ್ಗೆ ಹೊಸ ಅಪ್ಡೇಟ್

advertisement

ಒಂದೆಡೆ ಗೃಹಲಕ್ಷ್ಮಿ (Gruha Lakshmi) ಯೋಜನೆಯ ಹಣ ಖಾತೆಗೆ ಜಮೆಯಾಗಿದೆ ಎಂದು ಮಹಿಳೆಯರು ಖುಷಿ ಪಟ್ರೆ ಇನ್ನೊಂದೆಡೆ ಒಂದು ಕಂತಿನ ಹಣ ಜಮೆಯಾಗಿಲ್ಲ ಎಂದು ಮಹಿಳೆಯರು ಬೇಸರ ಪಟ್ಟುಕೊಂಡಿದ್ದಾರೆ. ಇನ್ನು ಅರ್ಜಿ ಸಲ್ಲಿಕೆ ಮಾಡಿದ ಶೇಕಡಾ 20% ಮಹಿಳೆಯರಿಗೆ ಈ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ. ಈ ಗೃಹಲಕ್ಷ್ಮಿ ಹಣ ಬಾರದಿರಲು ಕೆಲವು ಕಾರಣಗಳಿದ್ದು ಅದರಲ್ಲಿ ಮುಖ್ಯವಾದ ಕಾರಣ ಎಂದರೆ ದಾಖಲೆಗಳು ಸರಿಯಾಗಿ ಅಪ್ಡೇಟ್ ಆಗಿಲ್ಲ ಎನ್ನುವಂತಹ ವಿಚಾರ ವಾಗಿದೆ.

ಈ ತಿಂಗಳ Gruha Lakshmi ಹಣ ಜಮೆ?

ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ್ದ ಮಹಿಳೆಯರಿಗೆ ಆರು ಕಂತಿನ ವರೆಗೆ ಶೇಕಡಾ 80 ರಷ್ಟು ಮಹಿಳೆಯರಿಗೆ ಜಮೆಯಾಗಿದೆ. ಇನ್ನು ಕೆಲವು ಮಹಿಳೆಯರಿಗೆ ಏಳನೇ ಕಂತಿನ ಹಣ ಈ ತಿಂಗಳು ಬಿಡುಗಡೆಯಾಗಿದ್ದು ಹಣ ಜಮೆ ಯಾಗದೇ ಇರೋ ಮಹಿಳೆಯರಿಗೆ ಇದೇ ತಿಂಗಳ ಒಳಗೆ ಏಳನೇ ಕಂತಿನ ಹಣ ಬಿಡುಗಡೆ ಮಾಡುವುದಾಗಿ ಮಹೀಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಸ್ಪಷ್ಟನೆ ನೀಡಿದ್ದಾರೆ.

Image Source: Vistara News

advertisement

ಹಣ ಬಾರದೇ ಇರೋ ಮಹಿಳೆಯರು ಈ ಕೆಲಸ ಮಾಡಿ

ಇದೀಗ ಹಣ ಬಾರದೇ ಇರೋ ಮಹಿಳೆಯರ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಹೊಸ ಅಪ್ಡೇಟ್ ಒಂದು ಬಂದಿದ್ದು ಹಣ ಜಮೆಯಾಗದ ಮಹಿಳೆಯರು ಈ ಮಾಹಿತಿ ನೋಡಲೇಬೇಕು.ನೀವು ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ನಿಮ್ಮ ರೇಷನ್ ಕಾರ್ಡ್ (Ration Card) ಅನ್ನು ತೆಗೆದುಕೊಂಡು ಸೇವಾ ಸಿಂಧು ಕೇಂದ್ರಕ್ಕೆ ಭೇಟಿ ಕೊಡಿ. ಇಲ್ಲಿ ನಿಮ್ಮ ದಾಖಲಾತಿಗಳನ್ನು ಪರಿಶೀಲಿಸಿ ಸಮಸ್ಯೆ ಏನು ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಒಂದು ವೇಳೆ ಬ್ಯಾಂಕ್ ಪುಸ್ತಕ ನಿಷ್ಕ್ರಿಯ ಅಗಿದೆ ಎಂದಲ್ಲಿ ಪೋಸ್ಟ್ ಆಫೀಸ್ ಮೂಲಕ ಹೊಸದಾಗಿ ಖಾತೆ ತೆರೆಯಿರಿ, ದಾಖಲೆಗಳು ತಪ್ಪು ಇದ್ದರೆ ಅವುಗಳನ್ನು ಅಪ್ ಡೇಟ್ ಮಾಡಿ ಮತ್ತೆ ಅರ್ಜಿ ಸಲ್ಲಿಕೆ ಮಾಡಿ.

Image Source: 123RF

ಅರ್ಜಿ ಸಲ್ಲಿಕೆ ಮಾಡಿದ ಪ್ರತಿಯೊಬ್ಬರಿಗೂ ಹಣ ಸಂದಾಯ

ಇನ್ನೂ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಕೇಂದ್ರ ಕಚೇರಿಯಿಂದಲೇ ಹಣ ನೀಡಲು ಮುಂದಾಗಿದ್ದು, ನೇರವಾಗಿ ಡಿಬಿಟಿ ಮೂಲಕ ಹಣ ಜಮೆ ಮಾಡಲಿದೆ. ಒಂದು ವೇಳೆ ದಾಖಲೆ ಸರಿ ಇಲ್ಲದೆ ಹಣ ಬಾರದಿದ್ದರೂ ಮತ್ತೆ ಆಪ್ಡೆಟ್ ಮಾಡಿಸಿ ಅರ್ಜಿ ಸಲ್ಲಿಸಿ. ಎಲ್ಲ ಕಂತಿನ ಹಣವೂ ನಿಮಗೆ ಒಟ್ಟಿಗೆ ಜಮೆಯಾಗಲಿದೆ

advertisement

Leave A Reply

Your email address will not be published.