Karnataka Times
Trending Stories, Viral News, Gossips & Everything in Kannada

Honda Car: ಬಿಡುಗಡೆಯಾದ 6 ತಿಂಗಳಿಗೆ 30 ಸಾವಿರ ಜನ ಖರೀದಿಸಿದ್ದಾರೆ ಈ ಟಾಪ್ ಕಾರು! ಕಡಿಮೆ ಬೆಲೆ

advertisement

ಕಳೆದ ವರ್ಷ ಬಿಡುಗಡೆಯಾದಂತಹ ಹೋಂಡಾ ಎಲಿವೇಟ್ ಎಸ್ ಯುವಿ (Honda Elevate SUV) ಮಾರುಕಟ್ಟೆಯಲ್ಲಿ ತನ್ನದೇ ಆದಂತಹ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ವಿವಿಧ ಮಾರುಕಟ್ಟೆ ಕಾರು ತಯಾರಿಕ ಘಟಕಗಳಾದ ಹ್ಯುಂಡೈ ಕ್ರೆಟಾ (Hyundai Creta), ಕಿಯಾ ಸೆಲ್ಟೋಸ್ (Kia Seltos), ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಮತ್ತು ಇತರ ಕಾರು ಘಟಕಗಳಿಗೆ ಇದೀಗ ಭಾರತೀಯ ಹೋಂಡಾ ಕಾರ್ಸ್(Honda Cars) ಕಂಪನಿಯ, ಹೋಂಡಾ ಎಲಿವೇಟ್ ಎಸ್ ಯುವಿ ಬಹಳ ಪೈಪೋಟಿ ನೀಡುತ್ತಿದೆ ಎಂದರೆ ತಪ್ಪಾಗಲಾರದು. ಕಾರಣ ಬಿಡುಗಡೆಯಾದ 6 ತಿಂಗಳಲ್ಲೇ 30000 ಯೂನಿಟ್ ಅಷ್ಟು ಕಾರುಗಳು ಮಾರಾಟವಾಗಿದೆ.

ಇನ್ನು ಹೋಂಡಾ ಎಲಿವೇಟ್ ಎಸ್ ಯುವಿ (Honda Elevate SUV) ಮತ್ತು ಹೋಂಡಾದ ಪೋರ್ಟ್‌ಫೋಲಿಯೊದ ಕಾರುಗಳನ್ನು ಸಿಎಸ್‌ಡಿ ಔಟ್‌ಲೆಟ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಜೊತೆಗೆ ವಿಶೇಷವಾಗಿ ಮಾಜಿ ಸೈನಿಕರ ಕುಟುಂಬಗಳು ಮಾತ್ತು ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್ಮೆಂಟ್ (CSD) ಮೂಲಕ ವಿಶೇಷ ಬೆಲೆ ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 11.5ಲಕ್ಷದಿಂದ 16.8ಲಕ್ಷದ ವರೆಗೂ ಲಭ್ಯವಿದೆ.

Image Source: CarDekho

ಹೋಂಡಾ ಎಲಿವೇಟ್ ಎಸ್ ಯುವಿ (Honda Elevate SUV) ಕಾರಿನ ಹೈಲೈಟ್ಸ್:

advertisement

ಹೋಂಡಾ ಎಲಿವೇಟ್ ಎಸ್‍ಯುವಿ (Honda Elevate SUV) ಕಾರಿನ ರೂಪಾಂತರವು 15.31 ಕಿ.ಮೀ ಮೈಲೇಜ್ ನೀಡಿದರೆ, ಇದರ CVT ರೂಪಾಂತರವು 16.92 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಎಲಿವೇಟ್ ಎಸ್‌ಯುವಿಯಲ್ಲಿ 1.5-ಲೀಟರ್ ಎಂಜಿನ್, ಡಿಒಹೆಚ್‌ಸಿ (DOHC),6 ಸ್ಪೀಡ್ ಮಾನ್ಯುವಲ್ ಟ್ರಾನ್ಸ್ ಮಿಷನ್ ಮತ್ತು CVT ಗೇರ್ ಬಾಕ್ಸ್, 4-ಸಿಲಿಂಡರ್, ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ (Naturally Aspirated Petrol) ಎಂಜಿನ್ ಅನ್ನು ಹೊಂದಿದೆ. 6,600rpm ನಲ್ಲಿ 119.4 bhp ಪವರ್ ಮತ್ತು 4,300rpm ನಲ್ಲಿ 145 Nm ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ.

ಹೋಂಡಾ ಎಲಿವೇಟ್ ಎಸ್ ಯುವಿ ಕಾರು ಬಾಕ್ಸಿ(Boxy) ಡಿಸೈನ್ ಹೊಂದಿದ್ದು, ಮುಂಭಾಗದಲ್ಲಿ ಎರಡು ದೊಡ್ಡ ಗ್ರಿಲ್, ಗ್ರಿಲ್ ನ ಎರಡು ಬದಿಯಲ್ಲಿ ಎಲ್ಇಡಿ(LED) ಹೈಲೈಟ್, (Huge Crome strip) ಕ್ರೋಮ್ ಸ್ಟ್ರಿಪ್ ಗಳನ್ನು ಹೊಂದಿದೆ.ಮತ್ತು ಹೊಸ ಜನರೇಶನ್ ಡಿಸೈನ್ ಆದ CV-R & WV-R ಅನ್ನು ಆಧರಿಸಿದೆ. ಇದನ್ನು ಅತ್ಯಧುನಿಕ ತಂತ್ರಜ್ಞಾನದೊಂದಿಗೆ ಹೋಂಡಾ ಆರ್&ಡಿ (R&D)ಏಷ್ಯಾ ಪೆಸಿಫಿಕ್, ಥೈಲ್ಯಾಂಡ್ ಅಭಿವೃದ್ಧಿಪಡಿಸಿದೆ. ಜೊತೆಗೆ ಡಿಜಿಟಲ್ ಡಿಸ್ಪ್ಲೇ, ಫ್ಲಾಶ್ ಸಿಟ್ಟಿಂಗ್, ವಯರ್ ಲೇಸ್ ಫೋನ್ ಚಾರ್ಜರ್, ಸಿಂಗಲ್ ಪೇನ್ ಸನ್ ರೂಫ್ ಮಾದರಿಯ ವಿಶೇಷತೆಗಳನ್ನು ಹೊಂದಿದೆ.

Image Source: CarWale

ಇದರ ಒಳಭಾಗವು ಎಂಟು ಸ್ಪೀಕರ್ ಸರೋಂಡ್ ಸೌಂಡ್ ಸಿಸ್ಟಮ್ ನೊಂದಿಗೆ ಕನೆಕ್ಟ್ ಆಗಿದ್ದು‌.. ಡುಯಲ್ ಡಿಸ್ ಪ್ಲೇ ಡ್ಯಾಶ್(Dual display dash), ವೈರ್‌ಲೆಸ್ ಆಂಡ್ರಾಯ್ಡ್ ಆಟೋ (Wireless Android Auto) ಮತ್ತು ಆಪಲ್ ಕಾರ್ಪ್ಲೇ ಕನೆಕ್ಟಿವಿಟಿ (Apple Carplay Connectivity),HD ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ (Infotainment and Display), ಹೊಸ ಬೋಲ್ಡ್ LED ಹೈಲೈಟ್ ಗಳನ್ನು ಹೊಂದಿದೆ. ಇದು ಖರೀದಿದಾರರನ್ನು ಬಹಳಷ್ಟು ಆಕರ್ಷಣೆ ಮಾಡುತ್ತಿದೆ. ಆದ್ದರಿಂದ ಇದು ಭಾರತೀಯ ಕಾರು ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯನ್ನು ಪಡೆದುಕೊಂಡಿದೆ.

advertisement

Leave A Reply

Your email address will not be published.