Karnataka Times
Trending Stories, Viral News, Gossips & Everything in Kannada

7th Pay Commission: ಸಂಬಳ ಹೆಚ್ಚಾಗಲು ಕಾಯುತ್ತಿದ್ದ ಸರ್ಕಾರಿ ನೌಕರರಿಗೆ ಬೆಳ್ಳಂಬೆಳಿಗ್ಗೆ ಸಿಹಿಸುದ್ದಿ

advertisement

ಕೆಲ ಸಮಯದ ಹಿಂದಿನಿಂದಲೂ ಕೂಡ ಸರ್ಕಾರಿ ನೌಕರರು ವೇತನ ಪರಿಷ್ಕರಣೆ ಕೋರಿ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಾ ಇದ್ದಾರೆ. ಇನ್ನು ಸರ್ಕಾರವು ಕೂಡ ವೇತನ ಪರಿಷ್ಕರಣೆಯನ್ನು ನೀಡುವ ಸಲುವಾಗಿ 7ನೇ ವೇತನ ಆಯೋಗ (7th Pay Commission)ವನ್ನು ಇದೀಗ ಜಾರಿ ಮಾಡಿ ವರದಿಯನ್ನು ಬಿಡುಗಡೆ ಮಾಡುವಂತೆ ಸೂಚನೆ ನೀಡಿತ್ತು. ಇನ್ನು ವೇತನ ಆಯೋಗ ಇದರ ಕುರಿತಾಗಿ ವರದಿಯನ್ನು ಕೂಡ ಸರ್ಕಾರಕ್ಕೆ ನೀಡಿದೆ.

ಮಾಜಿ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರ್ ಅವರ ನೇತೃತ್ವದ ಆಯೋಗವು ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಮೊದಲೇ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಇದರಿಂದ ಸರ್ಕಾರಿ ನೌಕರರಿಗೆ ಅವರು ಮೂಲ ವೇತನ ಭತ್ಯೆ ಹೆಚ್ಚಳ ಆಗಲಿದೆ. ಅಂದರೆ ಮೂಲ ವೇತನದ ಶೇಕಡ 27.5% ನಷ್ಟು ಸಂಬಳ ಹೆಚ್ಚಾಗಲಿದೆ ಜೊತೆಗೆ ಈ ಬಾರಿ ಹಲವಾರು ರೀತಿಯ ಬದಲಾವಣೆಯನ್ನು ಕೂಡ ತೆಗೆದುಕೊಂಡು ಬರಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸರ್ಕಾರವು ವೇತನ ಆಯೋಗದ ವರದಿಯನ್ನು ಬಿಡುಗಡೆ ಮಾಡಲಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah)ನವರು ತಿಳಿಸಿದ್ದಾರೆ.

7th Pay Commission Update:

ವೇತನ ಆಯೋಗದ ವರದಿಯಂತೆ ಇನ್ನು ಏಳು ದಿನಗಳ ಒಳಗಾಗಿ ಸರ್ಕಾರವು ವರದಿಯನ್ನು ಸಾರ್ವಜನಿಕರಿಗೆ ತಿಳಿಸಲಿದ್ದು, ಅದರಲ್ಲಿ ಮೂಲ ವೇತನವನ್ನು ಪಡೆಯುತ್ತಿರುವಂತಹ ಸರ್ಕಾರಿ ನೌಕರರಿಗೆ (Govt Employees) ಶೇಕಡ 27.5ರಷ್ಟು ಸಂಬಳ ಹೆಚ್ಚಾಗಲಿದೆ. ಇದರ ಜೊತೆಗೆ ಬೇಸಿಕ್ ಸ್ಯಾಲರಿ 17,000 ಇಂದ 25,000ಗಳವರೆಗೆ ತೆಗೆದುಕೊಂಡು ಬರುವಂತಹ ಮುನ್ಸೂಚನೆ ನೀಡಿದ್ದಾರೆ. ಇದರಿಂದ ಇತ್ತೀಚೆಗೆ ಹುದ್ದೆಗೆ ಸೇರಿರುವಂತಹ ಎಲ್ಲಾ ನೌಕರರಿಗೂ ಹೊಸ ಸಿಹಿ ಸುದ್ದಿ ಸಿಕ್ಕಿದೆ.

advertisement

Image Source: Odisha Tv

ಇನ್ನು ಬೇಸಿಕ್ ಸ್ಯಾಲರಿ 20,900 ಇದ್ದವರಿಗೆ ಹೊಸ ವರದಿಯ ಪ್ರಕಾರ 33,000 ಮತ್ತು 40,900 ಇದ್ದವರಿಗೆ 65,950 ಮತ್ತು 50,150 ಇದ್ದವರಿಗೆ 79,500 ರೂಪಾಯಿ ಇನ್ನು, ಹಿರಿಯ ನೌಕರರ ಮೂಲ ವೇತನ 1,04,600 ಇದ್ದವರಿಗೆ 1,67,200 ಇಷ್ಟರ ವರೆಗೆ ಸ್ಯಾಲರಿಯನ್ನು ಹೆಚ್ಚಳ ಮಾಡುವುದಾಗಿ ಸರ್ಕಾರವು ಘೋಷಿಸಿದೆ. ಇದರ ಜೊತೆಗೆ ಹಿರಿಯ ನೌಕರರಿಗೆ ಮೂಲ ವೇತನ ಹೆಚ್ಚಾಗುವುದು ಮಾತ್ರವಲ್ಲದೆ ಡಿ ಎ( Dearness Allowance), ಐ ಆರ್ (Interim Relief) ಕೂಡ ಹೆಚ್ಚಳವಾಗುತ್ತದೆ ಎಂದು ತಿಳಿಸಲಾಗಿದೆ.

ಇದರ ಜೊತೆಗೆ ಬದಲಾವಣೆಗಳನ್ನು ತೆಗೆದುಕೊಂಡು ಬಂದಿರುವಂತಹ ವೇತನ ಆಯೋಗವು ಇಷ್ಟು ದಿನ ಸರ್ಕಾರಿ ಮಹಿಳಾ ನೌಕರರು ತಮ್ಮ ಪಿಂಚಣಿಯ ನಾಮನಿರ್ದೇಶನವನ್ನು ಪತಿಯ ಹೆಸರಿನಲ್ಲಿ ಇಡಬೇಕಿತ್ತು. ಆದರೆ ಇದೀಗ ಅದನ್ನು ಮಕ್ಕಳ ಹೆಸರಿನಲ್ಲಿಯೂ ಕೂಡ ಮಹಿಳೆಯರು ನಾಮನಿರ್ದೇಶನವನ್ನು ನೀಡಬಹುದು ಎಂದು ಏಳನೇ ವೇತನ ಆಯೋಗವು ಶಿಫಾರಸನ್ನು ನೀಡಿದೆ. ಜೊತೆಗೆ ಹಿರಿಯ ನಾಗರಿಕರಿಗೆ ಅಂದರೆ 70 ರಿಂದ 80 ವರ್ಷದ ಪಿಂಚಣಿ ದಾರರಿಗೆ ಸಿಕ್ಕುತ್ತಿರುವಂತಹ ಪಿಂಚಣಿಯ ದರವನ್ನು 10% ಅಷ್ಟು ಹೆಚ್ಚಳ ಮಾಡಲು ಕೂಡ ಆಯೋಗವು ಶಿಫಾರಸ್ಸು ನೀಡಿದೆ.

ಆದರೆ ಇದರ ಮಧ್ಯದಲ್ಲಿ ಸರ್ಕಾರವು ಈ ರೀತಿಯಾಗಿ ವೇತನ ಆಯೋಗವನ್ನು ಜಾರಿ ಮಾಡುವುದರಿಂದ ಪ್ರಸ್ತುತ ಇರುವ ರಾಜ್ಯದ ವೆಚ್ಚಕ್ಕಿಂತ, ಇನ್ನು ಮುಂದೆ ಸರ್ಕಾರಕ್ಕೆ 17,440.15 ಕೋಟಿಗಳಷ್ಟು ವೆಚ್ಚ ಹೆಚ್ಚಾಗುತ್ತದೆ ಎಂದು ಕೆಲವೊಂದು ಮೂಲಗಳು ತಿಳಿಸುತ್ತೇವೆ. ಅದರೆ ಇನ್ನೂ ಏಳು ದಿನಗಳಲ್ಲಿ 7ನೇ ವೇತನ ಆಯೋಗದ ವರದಿಯನ್ನು ಸಾರ್ವಜನಿಕರಿಗೆ ತಿಳಿಸುವುದಾಗಿ ಸಿಎಂ ಸಿದ್ದರಾಮಯ್ಯನವರು ಘೋಷಿಸಿದ್ದಾರೆ.

advertisement

Leave A Reply

Your email address will not be published.