Karnataka Times
Trending Stories, Viral News, Gossips & Everything in Kannada

Honda Elevate: ಕೇವಲ 11 ಲಕ್ಷ ರೂ ನ ಈ ಐಷಾರಾಮಿ ಕಾರಿಗೆ ಜನರು ಫಿದಾ! ಭರ್ಜರಿ ಬುಕಿಂಗ್, ಅದ್ಬುತ ಮೈಲೇಜ್

advertisement

ಹಿಂದೆಲ್ಲ ಕಾರು ಐಷಾರಾಮಿ ವಸ್ತುವಾಗಿತ್ತು ಆದರೆ ಈಗ ಅಗತ್ಯ ವಸ್ತುಗಳ ಸಾಲಿನಲ್ಲಿ ಸೇರಿದೆ. ಕಾರಿನ ಖರೀದಿ ಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಪೈಪೋಟಿ ಏರ್ಪಡುತ್ತಿದೆ. ಜಪಾನ್ ಮೂಲದ ಹೋಂಡಾ ಕಂಪೆನಿ ಈಗಾಗಲೇ ಭಾರತದಲ್ಲಿ ಅತ್ಯುತ್ತಮ ಕಾರು ಉತ್ಪನ್ನ ಕಂಪೆನಿಯ ಸ್ಥಾನ ಪಡೆದಿದ್ದು ಬಹುತೇಕ ಕಾರು ಕಂಪೆನಿಗೆ ಪ್ರಬಲ ಪೈಪೋಟಿ ನೀಡುತ್ತಿದೆ‌. ಇದೇ ಕಂಪೆನಿಯ ಒಂದು ಕಾರಿಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾವುದು ಈ ಹೊಚ್ಚ ಹೊಸ ಕಾರು?

ಹೋಂಡಾ ಕಂಪೆನಿಯ ಎಲಿವೇಟ್ (Honda Elevate) SUVಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದ್ದು ಈ ಒಂದು ಕಾರಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟಿಗೆ ಬೇಡಿಕೆ ಬಂದಿದೆ ಎಂದು ಹೇಳಬಹುದು. ಭಾರತದಲ್ಲಿ ತಯಾರಿಸಲಾಗುತ್ತಿರುವ ಯುನಿಟ್ WRVಯನ್ನು ವಿದೇಶಕ್ಕೆ ರಫ್ತು ಮಾಡಲಾಗಿದ್ದು ಈ ಕಾರಿಗೂ ಕೂಡ ಉತ್ತಮ ಬೇಡಿಕೆಬರುತ್ತಿದೆ.

Image Source: CarDekho

Honda Elevate ಫೀಚರ್ಸ್

advertisement

  • 10.25 ಇಂಚಿನ ಟಚ್ ಸ್ಕ್ರೀನ್ ಇನ್ಫಾರ್ಮೇಟಿವ್ ಸಿಸ್ಟಂ ಅನ್ನು ಹೊಂದಿದೆ.
  • ಸುರಕ್ಷತೆಯ ದೃಷ್ಟಿಯಿಂದ ಇದರಲ್ಲಿ ಕೆಲವು ಅಡ್ವಾನ್ಸ್ ಫೀಚರ್ಸ್ ಇದೆ. 6ಏರ್ ಬ್ಯಾಗ್, ರೇರ್ ಪಾರ್ಕಿಂಗ್ ಸೆನ್ಸರ್, ಸೀಟ್ ಬೆಲ್ಟ್ ಸೇರಿದಂತೆ ಅನೇಕ ಸುರಕ್ಷತೆ ಆಯ್ಕೆಯನ್ನು ಹೊಂದಿದೆ.
  • ವೈರ್ ಲೆಸ್ ಫೋನ್ ಚಾರ್ಜಿಂಗ್ ಹಾಗೂ ಸನ್ ರೂಫ್ ಹೊಂದಿದೆ.
  • ಅಟೋ ಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಅನ್ನು ಹೊಂದಿದೆ.
  • 16.5 KMPL ಮೈಲೇಜ್ ನೀಡಲಿದೆ.
  • 1.5ಲೀಟರ್ ಪೆಟ್ರೋಲ್ ಇಂಜಿನ್ ಆಯ್ಕೆ ಇರಲಿದೆ.
  • ಫ್ರಂಟ್ ವೀಲ್ ಡ್ರೈವ್ ನಂತಹ ಅತ್ಯಧಿಕ ತಂತ್ರಜ್ಞಾನ ಹೊಂದಿದೆ.
  • 6ಸ್ಪೀಡ್ ಮ್ಯಾನುವಲ್ CVT ಅಟೋಮ್ಯಾಟಿಕ್ ಅಪ್ಡೇಟ್ ಗೇರ್ ಬಾಕ್ಸ್ ಇರಲಿದೆ.
  • ನೋಡಲು ಅತ್ಯಾಧುನಿಕ ಅತ್ಯಾಕರ್ಷಕ ಲುಕ್ ನೀಡುವ ಜೊತೆಗೆ ಬಾರಿ ಉತ್ತಮ ಗುಣಮಟ್ಟದ ಆರಾಮದಾಯ ಸಿಟ್ಟಿಂಗ್ ವ್ಯವಸ್ಥೆ ಇರಲಿದೆ.

Honda Elevate ಬೆಲೆ ಎಷ್ಟು?

ಹೋಂಡಾ (Honda) ಕಂಪೆನಿ ಮೂಲಕ ಬಹು ಬೇಡಿಕೆ ಸೃಷ್ಟಿ ಮಾಡಿರುವ Honda Elevate ಕಾರಿನ ಬೆಲೆ ಎಷ್ಟು ಇರಬಹುದು ಎಂಬ ಕುತೂಹಲ ನಿಮಗೂ ಕೂಡ ಇರಬಹುದು. ಗ್ರಾಹಕರ ಹಿತದೃಷ್ಟಿಯಿಂದ ಕೈಗೆಟಕುವ ಬೆಲೆಗೆ ಲಭ್ಯವಾಗುವಂತೆ ಈ ಕಾರನ್ನು ಮಾರಾಟ ಮಾಡಲಾಗುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ಈ ಒಂದು ಕಾರು ಹಲವು ವೈಶಿಷ್ಟ್ಯ ಹಾಗೂ ಕಲರ್ ಮೇಲೆ 11ಲಕ್ಷದಿಂದ ಆರಂಭ ಆಗಿ 16ಲಕ್ಷದ ವರೆಗೆ ಬೆಲೆ ಇರಲಿದೆ.

Image Source: CarWale

ಒಟ್ಟಾರೆಯಾಗಿ ಈ ಒಂದು ಕಾರು ಜನರನ್ನು ಇನ್ನಷ್ಟು ಆಕರ್ಷಿಸಲು ಮುಖ್ಯ ಕಾರಣ ಕಲರ್ ಆಯ್ಕೆ ಎಂದು ಹೇಳಬಹುದು. ಫಿನಿಕ್ಸ್ ಆರೆಂಜ್ ಪರ್ಲ್, ಪ್ಲ್ಯಾಟಿನಮ್ ವೈಟ್ ಪರ್ಲ್, ಲೂನಾರ್ ಸಿಲ್ವರ್ ಮೆಟಾಲಿಕ್,ಗೋಲ್ಡನ್ ಬ್ರೌನ್ ಮೆಟಲಾನಿಕ್ ಎಂಬ ವಿವಿಧ ಆಕರ್ಷಕ ಬಣ್ಣದ ಆಯ್ಕೆ ಇಲ್ಲಿ ಕಾಣಬಹುದು. ಈ ಒಂದು ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ, ಟೊಯೋಟಾ ಹಾಗೂ ಸಿಟ್ರಸ್ ಕಂಪೆನಿಗೆ ಪ್ರಬಲ ಪೈಪೋಟಿ ನೀಡುತ್ತಿದೆ.

advertisement

Leave A Reply

Your email address will not be published.