Karnataka Times
Trending Stories, Viral News, Gossips & Everything in Kannada

Loan: ಯಾವುದೇ ಗ್ಯಾರಂಟಿ ಹಾಗೂ ಜಾಮೀನು ಇರದೇ ಸಿಗುತ್ತಿದೆ 10 ಲಕ್ಷ ದವರೆಗೆ ಸಾಲ! ಈ ಯೋಜನೆಗೆ ಮುಗಿಬಿದ್ದ ಜನ

advertisement

ಎಷ್ಟೊ ಬಾರಿ ಬಿಸಿನೆಸ್ ಮಾಡಬೇಕು ಎಂಬ ಮನಸ್ಸು ಇದ್ದು ತಲೆಯಲ್ಲಿ ಉತ್ತಮವಾದ ಆಲೋಚನೆಗಳು ಇದ್ದರೂ ಕೂಡ ಸರಿಯಾದ ಅವಕಾಶ ಹಾಗೂ ಹಣಕಾಸಿನ ಸಮಸ್ಯೆ ಇಲ್ಲದೆ ಇತ್ತೀಚಿನ ಯುವ ಸಮುದಾಯ ಸ್ಚ ಉದ್ಯೋಗ ಕ್ಷೇತ್ರದಿಂದ ಹಿಂದೆ ಸರಿಯುತ್ತಿದ್ದಾರೆ. ಸರಕಾರ ಇಂತವರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಹೊಸ ಯೋಜನೆ ಜಾರಿಗೆ ತಂದಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಯೋಜನೆ ಹೆಸರೇನು?

ಯುವಜನಕ್ಕೆ ಬಿಸಿನೆಸ್ ಮಾಡಲು ನೆರವಾಗುವ ದೃಷ್ಟಿಯಿಂದ ಕೇಂದ್ರ ಸರಕಾರದಿಂದ ಹುಟ್ಟಿಕೊಂಡ ಯೋಜನೆ ಮುದ್ರಾ ಯೋಜನೆಯಾಗಿದೆ. Mudra ಎಂದರೆ Micro Units development and Refinance Agency LTD ಎಂಬ ವಿಸ್ತ್ರತ ರೂಪ ಇದಕ್ಕೆ ಇರಲಿದೆ. ಇದರ ಮುಖ್ಯ ಉದ್ದೇಶ ಲೋನ್ ನೀಡುವುದಾಗಿದ್ದು ದೇಶದ ಎಲ್ಲ ಬ್ಯಾಂಕ್ ನಲ್ಲಿಯೂ ಈ ಯೋಜನೆ ಜಾರಿಗೆ ತರಲಾಗಿದೆ. ಇದರ ಮುಖ್ಯ ಉದ್ದೇಶವೆ ಸುಲಭಕ್ಕೆ ಮತ್ತು ಕಡಿಮೆ ಬಡ್ಡಿದರಕ್ಕೆ ಜನರಿಗೆ ಲೋನ್ (Loan) ನೀಡಬೇಕು ಎಂಬುದಾಗಿದೆ. ಇದುವರೆಗೆ 20 ಕೋಟಿ ಹಣ ಮುದ್ರಾ ಯೋಜನೆಗೆ ಮೀಸಲಿಟ್ಟಿದ್ದು ಅದರಲ್ಲಿ 7.5ಕೋಟಿ ಜನರು ಈ ಯೋಜನೆ ಮೂಲಕ ಹೊಸ ಉದ್ಯಮ ಸ್ಥಾಪನೆ ಮಾಡಿದ್ದಾರೆ.

Image Source: Paisabazar

ಯಾವೆಲ್ಲ ವಿಧಗಳಿವೆ?

ಈ ಮುದ್ರಾ ಯೋಜನೆ (Mudra Yojana) ಮೂಲಕ ಕಡಿಮೆ ಬಡ್ಡಿದರದಲ್ಲಿ ಮೂರು ವಿಧದ ಸಾಲ ಸೌಲಭ್ಯ ನೀಡಲಾಗುವುದು.

advertisement

  • ಶಿಶು ಮುದ್ರಾ ಯೋಜನೆ ಇದರಲ್ಲಿ 50 ಸಾವಿರ ರೂಪಾಯಿ ವರೆಗೆ ಲೋನ್ ಸಿಗಲಿದೆ.
  • ಕಿಶೋರ್ ಮುದ್ರಾ ಯೋಜನೆಯಲ್ಲಿ ಕನಿಷ್ಠ ಮೊತ್ತ 50,000 ದಿಂದ 5 ಲಕ್ಷದ ವರೆಗೆ ಸಾಲ ಸೌಲಭ್ಯ ನೀಡಲಾಗುವುದು.
  • ತರುಣ್ ಯೋಜನೆಯಲ್ಲಿ 5 ಲಕ್ಷ ದಿಂದ 10ಲಕ್ಷದ ವರೆಗೆ ಸಾಲ ಸೌಲಭ್ಯ ನೀಡಲಾಗುವುದು.

ಯಾವೆಲ್ಲ ಉದ್ಯಮಕ್ಕೆ Loan ಸಿಗಲಿದೆ:

ಈ ಒಂದು ಮುದ್ರಾ ಯೋಜನೆಯ ಸಾಲವನ್ನು ವಸ್ತುಗಳ ಉತ್ಪಾದನೆ ಘಟಕ ಸ್ಥಾಪನೆ ಮಾಡಲು ನೀಡಲಿದ್ದಾರೆ. ಬ್ಯುಟಿ ಪಾರ್ಲರ್ , ಕ್ಲೀನಿಕ್ ಶಾಪ್, ಮೆಕ್ಯಾನಿಕ್ ಶಾಪ್ , ಮೆಡಿಕಲ್ ಹಾಗೂ ಸೆಲ್ಯೂನ್ ಸ್ಥಾಪನೆ ಮಾಡಲು ಬಳಸಬಹುದು. ಇದು ದೊಡ್ಡ ಕಂಪೆನಿಗೆ ಸಿಗುವ ಲೋನ್ ಆಗಿರದೆ ಸ್ವಂತ ಉದ್ಯೋಗ ಹಾಗೂ ಉದ್ಯಮ ಮಾಡ್ತೇವೆ ಅನ್ನೋರಿಗೆ ಸಿಗುವ ಒಂದು ಲೋನ್ (Loan) ಆಗಿದೆ.

Image Source: Webdunia

ಯಾವೆಲ್ಲ ಬ್ಯಾಂಕ್ ಈ ಲೋನ್ (Loan) ನೀಡ್ತಾರೆ?

ಈ ಒಂದು ಸಾಲ ಸೌಲಭ್ಯ ನೀಡಲು ಬ್ಯಾಂಕ್ ಹಾಗೂ ನಾನ್ ಬ್ಯಾಂಕಿಂಗ್ ಮೂಲಕ ಸಾಲ ಸಿಗಲಿದೆ.ಇದರಲ್ಲಿ 27 ಸರಕಾರಿ ಬ್ಯಾಂಕ್ ಹಾಗೂ 18 ಖಾಸಗಿ ಬ್ಯಾಂಕ್ ಕೂಡ ಇದೆ. ಕೆಲವೊಂದು ರೆಪ್ಯೂಟೆಡ್ ಇನ್ ಸ್ಟಿಟ್ಯೂಟ್ ಹಾಗೂ RRR (ರಿಜಿನಲ್ ರೂರಲ್ ಬ್ಯಾಂಕ್) ಕೂಡ ಸೇರಿವೆ. ಇದರಲ್ಲಿ 27 ಪ್ರಾಜೆಕ್ಟ್ ರಿಪೋರ್ಟ್ ಇರಲಿದ್ದು ಅದರಲ್ಲಿ ನಿಮ್ಮ ಯೋಜನೆ ಯಾವುದು ಎಂದು ಸ್ಪಷ್ಟ ಚಿತ್ರಣವನ್ನು ನೀಡುವ ಮೂಲಕ ಸಾಲ ಪಡೆಯಬಹುದು.

advertisement

Leave A Reply

Your email address will not be published.