Karnataka Times
Trending Stories, Viral News, Gossips & Everything in Kannada

Electricity: 200 ಯೂನಿಟ್ ಗಿಂತ ಹೆಚ್ಚಿಗೆ ವಿದ್ಯುತ್ ಬಳಸುವವರಿಗೆ ಸರ್ಕಾರದಿಂದ ಅಧಿಕೃತ ಹೊಸ ಅಪ್ಡೇಟ್! ಕಹಿಸುದ್ದಿ

advertisement

ಇನ್ನೇನು ಬೇಸಿಗೆ ಪ್ರಾರಂಭವಾಗುತ್ತಿದೆ ಈಗಾಗಲೇ ರಾಜ್ಯದಲ್ಲಿ ಜಲಕ್ಷಾಮ ಕೂಡ ಎದುರಾಗಿದೆ ಇದರ ಮಧ್ಯದಲ್ಲಿ ವಿದ್ಯುತ್ (Electricity) ಬಳಕೆ ಮಾಡುವ ಎಲ್ಲರಿಗೂ ಸರ್ಕಾರ ಹೊಸದೊಂದು ಸೂಚನೆಯನ್ನು ನೀಡುವುದರ ಮೂಲಕ ಅಚ್ಚರಿಯನ್ನುಂಟು ಮಾಡಿದೆ. ಜೊತೆಗೆ ಗೃಹ ಜೊತೆ ಬಳಸುತ್ತಿರುವಂತ ಫಲಾನುಭವಿಗಳಿಗೆ ಇದರಿಂದ ಬಹಳಷ್ಟು ವ್ಯತ್ಯಾಸಗಳು ಕೂಡ ಬೀಳಲಿವೆ. ಎಲ್ಲರೂ ಕೂಡ ಈಗ ಬೇಸಿಗೆಯಲ್ಲಿ ಕೂಲರ್, ಎಸಿ, ಫ್ಯಾನ್ ಬಳಸುವುದು ಸಹಜ ಇನ್ನು 24 ಗಂಟೆಯೂ ಕೂಡ ವಿದ್ಯುತ್ ಬಳಸುವವರು ಇದ್ದಾರೆ. ಹಾಗಾಗಿ ಸರ್ಕಾರ ಈಗೊಂದು ಹೊಸ ಸೂಚನೆಯನ್ನು ಹೊರಡಿಸಿದೆ.

ಬಳಸಿದ ಅಷ್ಟು ಯೂನಿಟ್ ವಿದ್ಯುತ್ (Electricity)ಗೆ ದುಬಾರಿ ಶುಲ್ಕ? ಏನಿದು ಹೊಸ ಸೂಚನೆ ತಿಳಿದುಕೊಳ್ಳೋಣ:

ಇನ್ನು ಈ ಬಾರಿ ರಾಜ್ಯದಲ್ಲಿ ಕೇಳರಿಯದಂತಹ ಬಿಸಿಲು ಮತ್ತು ಜಲಕ್ಷಾಮ ಎದುರಾಗಿದೆ. ಇನ್ನು ಅದರ ಜೊತೆಗೆ ಸರಿಯಾದ ಸಮಯದಲ್ಲಿ ಮಳೆ ಬೆಳೆಗಳು ಕೂಡ ಆಗುತ್ತಿಲ್ಲ. ಇವುಗಳ ಮಧ್ಯದಲ್ಲಿ ಇನ್ನೇನು ಚುನಾವಣೆಯ ಕೂಡ ಹತ್ತಿರವಾಗುತ್ತಿದ್ದು ಇದರ ಮುಂಚಿತವಾಗಿ ಹೊಸ ಸೂಚನೆ ಒಂದನ್ನು ಸರ್ಕಾರ ಹೊರಡಿಸಿದೆ. ಸರ್ಕಾರದ ಹೊಸ ಸೂಚನೆಯಂತೆ ಗೃಹ ಜ್ಯೋತಿ (Gruha Jyothi) ಫಲಾನುಭವಿಗಳು ಮತ್ತು ಗ್ರಾಹಕರು 200 ಯೂನಿಟ್ ಗಳಿಗಿಂತಲೂ ಹೆಚ್ಚು ವಿದ್ಯುತ್ ಬಳಸಿದರೆ ಹೆಚ್ಚುವರಿ ಬಳಸಿದಷ್ಟು ಯೂನಿಟ್ ಗಳಿಗೆ ಶೇಕಡ 20 ರಷ್ಟು ಹೆಚ್ಚು ದುಬಾರಿ ಬಿಲ್ ಭರಿಸಬೇಕಾಗುತ್ತದೆ.

advertisement

Image Source: Gulfhindi

ಇದರ ಕುರಿತಾಗಿ ಮಾತನಾಡಿರುವಂತಹ ಬೆಸ್ಕಾಂ (BESCOM) ಚೀಫ್ ಇಂಜಿನಿಯರ್ ಅವರು ವಿದ್ಯುತ್ ಬಳಕೆಯ ಕುರಿತು ವರದಿಯೊಂದನ್ನು ನೀಡಿದ್ದಾರೆ. ಅವರು ನೀಡಿರುವ ವರದಿ ಪ್ರಕಾರ ಕಳೆದ ವರ್ಷ 12 ತಿಂಗಳೊಳಗೆ ಕರ್ನಾಟಕದಲ್ಲಿ ಬಳಸಲಾಗಿರುವ ವಿದ್ಯುತ್ ಮೊತ್ತ 37,111 ಮಿಲಿಯನ್ ಯೂನಿಟ್ ಆಗಿದೆ. ಮತ್ತು ರಾಜ್ಯದಲ್ಲಿ 1.20 ಕೋಟಿ ಗೃಹ ಜ್ಯೋತಿ ಫಲಾನುಭವಿಗಳಿದ್ದಾರೆ. ಆದರೆ ಈ ವರ್ಷದಲ್ಲಿ ನೋಡುವುದಾದರೆ ಇನ್ನೂ ಒಂದು ತಿಂಗಳು ಬಾಕಿ ಇರುವಂತೆಯೇ 40,607 ಮಿಲಿಯನ್ ಯೂನಿಟ್ ಬಳಕೆಯಾಗಿದ್ದು… ಇನ್ನು 10,000ಮಿಲಿಯನ್ ಯೂನಿಟ್ ಅಷ್ಟು ವಿದ್ಯುತ್ ಹೆಚ್ಚಾಗಿ ಬಳಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಇದನ್ನು ಸುಧಾರಿಸುವಂತಹ ಸಲುವಾಗಿ ಸರ್ಕಾರವು ಬೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದು ಅದರಂತೆ, ಇದೀಗ ಹೆಚ್ಚುವರಿ ಯಾಗಿ ಅಂದರೆ 200 ಯೂನಿಟ್ ಗಿಂತ ಹೆಚ್ಚಾಗಿ ವಿದ್ಯುತ್ ಬಳಸಿದರೆ ಸಂಪೂರ್ಣ ಹೆಚ್ಚುವರಿ ಬಿಲ್ ಪಾವತಿಸುವಂತೆ ತಿಳಿಸಿದೆ. ಇದರಿಂದ ಇಷ್ಟು ದಿನ ಗೃಹ ಜ್ಯೋತಿ ಬಳಸುತ್ತಿದ್ದಂತಹ ಪ್ರತಿ ಫಲಾನುಭವಿಗಳು ಹೆಚ್ಚುವರಿಯಾಗಿ ಬಿಲ್ ಭರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ಮನೆಯಲ್ಲಿ ಎಸಿ, ಕೂಲರ್, ರೆಫ್ರಿಜರೇಟರ್ ಇರುವುದರಿಂದ ಇನ್ನೂರು ಯೂನಿಟ್ ಗಿಂತಲೂ ಹೆಚ್ಚು ವಿದ್ಯುತ್ ಬಳಸುವ ಅವಶ್ಯಕತೆ ಎದುರಾಗಿರುವುದರಿಂದ, ಹೆಚ್ಚುವರಿ ಬಿಲ್ ಕೂಡ ಭರಿಸಬೇಕಾಗಿದೆ.

advertisement

Leave A Reply

Your email address will not be published.