Karnataka Times
Trending Stories, Viral News, Gossips & Everything in Kannada

Joy e-Bike: ಭಾರತದಲ್ಲಿ 150ಕ್ಕೂ ಹೆಚ್ಚಿನ ಶೋರೂಮ್ ಓಪನ್ ಮಾಡಿದ ಈ ಕಂಪನಿ! ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯ

advertisement

ನಮ್ಮ ಭಾರತ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಸರ್ಕಾರ ಹಾಗೂ ಕಂಪನಿಗಳು ಸಾಕಷ್ಟು ಪ್ರಯತ್ನವನ್ನು ಮಾಡುತ್ತಿವೆ. ಇದೇ ನಿಟ್ಟಿನಲ್ಲಿ ವಾರ್ಡ್ ವಿಜಾರ್ಡ್ ಇನ್ವೆಂಷನ್ ಅಂಡ್ ಮೊಬಿಲಿಟಿ (Wardwizard Innovation And Mobility) ಕಂಪನಿ ಭಾರತದಲ್ಲಿ ತನ್ನ ಆಪರೇಷನ್ ಗಳನ್ನು ಇನ್ನಷ್ಟು ಹೆಚ್ಚಿಸಿದೆ. ಈ ಕಂಪನಿ ಜಾಯ್ ಇ- ಬೈಕ್ (Joy e-Bike) ಮೂಲಕ ದ್ವಿಚಕ್ರವನ್ನು ಹಾಗೂ ಇ- ರಿಕ್ ಮೂಲಕ ತ್ರಿಚಕ್ರ ವಾಹನವನ್ನು ನಿರ್ಮಾಣ ಮಾಡುತ್ತದೆ. ಇನ್ನು ಭಾರತ ದೇಶದಲ್ಲಿ ಈ ಕಂಪನಿ ತನ್ನ ಆಪರೇಷನ್ ಹಾಗೂ ಕಾರ್ಯ ವೈಖರಿಯನ್ನು ಇನ್ನಷ್ಟು ಹೆಚ್ಚಿಸಿದ್ದು ಈಗಾಗಲೇ ಭಾರತ ದೇಶದ ತುಂಬಾ 156 ಹೆಚ್ಚಿನ ಶೋರೂಮ್ ಗಳನ್ನು ಸ್ಥಾಪನೆ ಮಾಡಿದೆ.

ವಾರ್ಡ್ ವಿಜಾರ್ಡ್ ಇನ್ವೆಂಷನ್ ಅಂಡ್ ಮೊಬಿಲಿಟಿ:

ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಮಧ್ಯ ಪ್ರದೇಶ್, ದೆಹಲಿ, ಚಂಡಿಗಡ್, ಪಂಜಾಬ್, ಜಮ್ಮು ಕಾಶ್ಮೀರ್, ಹಿಮಾಚಲ್, ಉತ್ತರಖಂಡ್, ಉತ್ತರ ಪ್ರದೇಶ, ಬಿಹಾರ್, ಜಾರ್ಖಂಡ್, ಒಡಿಸ್ಸಾ, ಛತ್ತೀಸ್ಗಡ್, ಪಶ್ಚಿಮ್ ಬಂಗಾಳ್, ತಮಿಳ್ ನಾಡು, ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಈಗಾಗಲೇ ಶೋರೂಮ್ ಗಳನ್ನು ಸ್ಥಾಪನೆ ಮಾಡಿದೆ. ಇತ್ತೀಚಿಗಷ್ಟೇ ಈ ಶೋ ರೂಮ್ ಗಳನ್ನು ಈ ಪ್ರದೇಶಗಳಲ್ಲಿ ಲಾಂಚ್ ಮಾಡಲಾಗಿದ್ದು ಇಲ್ಲಿ ವಾಹನಗಳ ಬಿಡಿ ಭಾಗಗಳನ್ನು ತಯಾರಿ ಮಾಡುವಂತಹ ಕೆಲಸಗಳು ಕೂಡ ನಡೆಯುತ್ತವೆ. ವಾಹನ ಸವಾರಿ ಮಾಡುವಂತಹ ಗ್ರಾಹಕರಿಗೆ ಉತ್ತಮವಾದ ವಾಹನವನ್ನು ನಿರ್ಮಾಣ ಮಾಡುವಂತಹ ಕೆಲಸ ಇಲ್ಲಿ ನಡೆಯಲಿದೆ.

advertisement

Image Source Linkedin

ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವಂತಹ ಯತಿನ್ ಗುಪ್ತೆ, ನಾವು ರೆಕಾರ್ಡ್ ಅವಧಿಯಲ್ಲಿ 156 ಹೆಚ್ಚಿನ ಶೋರೂಮ್ ಗಳನ್ನು ತೆರೆದಿದ್ದೇವೆ. 21 ರಾಜ್ಯಗಳಲ್ಲಿ ಒಂದನೇ ಹಂತದಿಂದ ಎರಡನೇ ಹಂತದವರೆಗೂ ಕೂಡ ಶೋರೂಮ್ ತೆರೆದಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಎಲೆಕ್ಟ್ರಿಕ್ ವಾಹನಗಳನ್ನು (Electric Vehicles) ಭಾರತ ದೇಶದಲ್ಲಿ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಅಪ್ಡೇಟ್ ಮಾಡುವ ನಿಟ್ಟಿನಲ್ಲಿ ನಾವು ಈ ಕೆಲಸಕ್ಕೆ ಕೈ ಹಾಕಿದ್ದೇವೆ ಎಂಬುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ. ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವಂತಹ ಗ್ರಾಹಕರಿಗೆ ವಾಹನವನ್ನು ಖರೀದಿ ಮಾಡುವುದಕ್ಕೆ ಸಹಜ ಅನುಭವವನ್ನು ಹಾಗೂ ಯಾವುದೇ ರೀತಿಯ ಸಮಸ್ಯೆ ಬಾರದೆ ಇರುವಂತೆ ನೋಡಿಕೊಳ್ಳುವುದಕ್ಕಾಗಿ ನಾವು ಈ ಕೆಲಸವನ್ನು ಮಾಡಿದ್ದೇವೆ ಎಂಬುದಾಗಿ ಹೇಳಿದ್ದಾರೆ.

ಹೊಸ ಅಸೆಂಬ್ಲಿ ಯೂನಿಟ್ ನ ಲೋಕಾರ್ಪಣೆ

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗಾಗಿ ಕಂಪನಿ ಇತ್ತೀಚಿಗಷ್ಟೇ ಜಾರ್ಖಂಡ್ನ ದೇವಗಡ್ನಲ್ಲಿ ತೆರೆದಿರುವುದನ್ನು ಕೂಡ ಅಧಿಕೃತವಾಗಿ ಈ ಸಂದರ್ಭದಲ್ಲಿ ತಿಳಿಸಲಾಗಿದೆ. ಇನ್ನು ಗುಜರಾತಿನ ವಡೋದರದಲ್ಲಿ ಇರುವಂತಹ ಕಾರ್ಖಾನೆ 15 ಸಾವಿರ ಫೀಟ್ನಲ್ಲಿ ವಿಸ್ತಾರವಾಗಿ ನಿರ್ಮಾಣವಾಗಿರುವುದನ್ನು ಕೂಡ ಈ ಸಂದರ್ಭದಲ್ಲಿ ನಾವು ತಿಳಿದುಕೊಳ್ಳಬಹುದಾಗಿದೆ. ಇಲ್ಲಿ ಕಂಪನಿ ಪ್ರಾರಂಭಿಕ ವರ್ಷದ ಗುರಿಯ ಜೊತೆಗೆ ಕಡಿಮೆ ಸ್ಪೀಡ್ನ ದ್ವಿಚಕ್ರ ವಾಹನಗಳ ಅಸೆಂಬ್ಲಿಯನ್ನು ಪ್ರಾರಂಭ ಮಾಡಲಿದೆ. ಭಾರತದ ಉತ್ತರದಲ್ಲಿರುವಂತಹ ನೇಪಾಳದ ಪ್ರತಿಯೊಂದು ಅಗತ್ಯತೆಗಳನ್ನು ಹಾಗೂ ಬೇಡಿಕೆಗಳನ್ನು ಪೂರೈಸುವುದಕ್ಕಾಗಿ ಕಂಪನಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.

advertisement

Leave A Reply

Your email address will not be published.