Karnataka Times
Trending Stories, Viral News, Gossips & Everything in Kannada

Electricity Bill: ಕರೆಂಟ್ ಬಿಲ್ ಬಾಕಿ ಇರಿಸಿಕೊಂಡವರಿಗೆ ಬೆಳ್ಳಂಬೆಳಗ್ಗೆ ಸಿಹಿಸುದ್ದಿ! ಸರ್ಕಾರದ ಹೊಸ ನಿರ್ಧಾರ

advertisement

ರಾಜ್ಯ ಸರಕಾರದ ಪ್ರಮುಖ ಗ್ಯಾರಂಟಿ ಯೋಜನೆಯಲ್ಲಿ ಗೃಹಜ್ಯೋತಿ ಯೋಜನೆಯು ಕೂಡ ಒಂದಾಗಿದೆ. ರಾಜ್ಯದ ಜನತೆ ಇಂದು ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡುವ ಮೂಲಕ ಉಚಿತ ವಿದ್ಯುತ್ ಅನ್ನು ಪಡೆದುಕೊಳ್ಳುತ್ತಿದ್ದಾರೆ. ಗೃಹಜ್ಯೋತಿ (Gruha Jyothi) ಯೋಜನೆಯ ಮೂಲಕ ಸುಮಾರು 200 ಯುನಿಟ್‌ವರೆಗೂ ವಿದ್ಯುತ್‌ ಉಚಿತವಾಗಿ ನೀಡಲಾಗುತ್ತಿದ್ದು ಮನೆಯ ವಾರ್ಷಿಕ ವಿದ್ಯುತ್‌ ಬಳಕೆಯ ಆಧಾರದ ಮೇಲೆ ಶೇ. 10 ರಷ್ಟು ಹೆಚ್ಚುವರಿ ಸೇರಿ 200 ಯುನಿಟ್‌ವರೆಗೂ ಉಚಿತ ವಿದ್ಯುತ್ ಪಡೆಯುತ್ತಿದ್ದು ಶೂನ್ಯ ಬಿಲ್ (Electricity Bill) ಅನ್ನು ಪಡೆಯುತ್ತಿದ್ದಾರೆ. ಒಂದು ವೇಳೆ ಹೆಚ್ಚುವರಿ ವಿದ್ಯುತ್ ಅನ್ನು ಬಳಕೆ ಮಾಡಿಕೊಂಡರೆ ಅದರ ಮೊತ್ತ ಭರಿಸಬೇಕಾಗುತ್ತದೆ ಎಂದು ವಿದ್ಯುತ್ ಇಲಾಖೆ ಈಗಾಗಲೇ ಸೂಚನೆ ನೀಡಿದೆ.

ಮಾರ್ಚ್ ತಿಂಗಳ ಬಾಕಿ ಬಿಲ್ ಪಾವತಿ ಮಾಡಿಲ್ವ?

ನೀವು ಹೆಚ್ಚುವರಿ ವಿದ್ಯುತ್ ಅನ್ನು ಉಪಯೋಗಿಸಿಕೊಂಡಿದ್ದು ನಿಗದಿತ ದಿನಾಂಕದ ಮೊದಲು ಈ ತಿಂಗಳಿನಲ್ಲಿ ವಿದ್ಯುತ್ ಬಿಲ್ (Electricity Bill) ಪಾವತಿಸಲು ಸಾಧ್ಯವಾಗಿಲ್ಲ ಅಂದರೆ ನಿಮಗೆ ದಂಡ ವಿಧಿಸುವುದಿಲ್ಲ. ಹೌದು ಶುಲ್ಕ ವಿಧಿಸಲು ಯಾವುದೇ ರೀತಿಯಲ್ಲಿ ವಿಳಂಬವಾದರೂ ವಿದ್ಯುತ್ ಸಂಪರ್ಕ ಕಡಿತಗೊಳಿಸದಿರಲು ನಿರ್ಧರಿಸಿದೆ.

Image Source: Telegraph India

ಯಾಕಾಗಿ ಈ ತಿರ್ಮಾನ

advertisement

ಮಾರ್ಚ್ 10 ರಿಂದ ಮಾರ್ಚ್ 19 ರವರೆಗೆ ಬೆಸ್ಕಾಂ (BESCOM) ಸಾಫ್ಟ್‌ವೇರ್ ಮಾಹಿತಿ ಅಪ್‌ಡೇಟ್ ಮಾಡಲಿದ್ದ ಕಾರಣ ವಿದ್ಯುತ್ ಸರಬರಾಜು ಕಂಪನಿಗಳ ಆನ್‌ಲೈನ್ ಸೇವೆಗಳು ಲಭ್ಯವಿರಲಿಲ್ಲ. ಹೀಗಾಗಿ ತಾಂತ್ರಿಕ ದೋಷ ಇದ್ದ ಕಾರಣ ಕೆಲ ಗ್ರಾಹಕರಿಗೆ ಪಾವತಿ ಮಾಡಲು ಸಾಧ್ಯವಾಗಿಲ್ಲ ಹಾಗಾಗಿ ವಿದ್ಯುತ್ ಪಾವತಿ ಮಾಡುವುದು ವಿಳಂಬ2ವಾದರೂ ದಂಡ ಇಲ್ಲ ಎಂಬ ಮಾಹಿತಿಯನ್ನು ವಿದ್ಯುತ್ ಇಲಾಖೆ ನೀಡಿದೆ.

ಅನ್ ಲೈನ್ ಪಾವತಿ ಮಾಡಬಹುದು

ಈಗ ಅನ್ ಲೈನ್ ಪಾವತಿ ಮಾಡಲು ಅವಕಾಶ ಇದ್ದು ಮಾರ್ಚ್ 20 ರಿಂದ ಈ ಸೇವೆಗಳು ಪುನರಾರಂಭಗೊಂಡಿದೆ. ಹಾಗಾಗಿ ಈಗ ವಿದ್ಯುತ್ ಬಿಲ್ ಪಾವತಿ ಮಾಡಲು ಅವಕಾಶ ನೀಡಲಾಗಿದೆ.

Image Source: Paytm

ಇನ್ನೂ ಕೂಡ ನೋಂದಣಿ ಮಾಡಬಹುದು

ಈ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಲು‌ ಇನ್ನೂ ಕೂಡ ಅವಕಾಶ ಇದೆ. ಇನ್ನೂ ಕೂಡ ಯಾರು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿಲ್ಲವೋ ಅವರಿಗೆ ಇಂದು ಕೂಡ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದೆ. ನೀವು ಈ ಯೋಜನೆಗೆ ಕರ್ನಾಟಕ ಒನ್‌, ಗ್ರಾಮ ಒನ್‌ ಸೇರಿದಂತೆ ವಿವಿಧ ಸೇವಾ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

advertisement

Leave A Reply

Your email address will not be published.