Karnataka Times
Trending Stories, Viral News, Gossips & Everything in Kannada

CM Siddaramaiah: ಇಂತಹ ಪುರುಷ ಹಾಗೂ ಮಹಿಳೆಯರ ಖಾತೆಗೆ ನೇರವಾಗಿ 2 ಲಕ್ಷ ರೂ ಜಮೆ! ಸಿಎಂ ಸಿದ್ದರಾಮಯ್ಯ ಆದೇಶ

advertisement

ಸಮಾಜದಲ್ಲಿ ಜಾತಿ, ಧರ್ಮಗಳ ನಡುವೆ ಸಾಮರಸ್ಯ ತರಬೇಕು ಎಲ್ಲ ಕಡೆ ಸಮಾನತೆ ಎತ್ತಿ ಹಿಡಿಯಬೇಕು ಎಂದು ಸರಕಾರ ಅನೇಕ ವರ್ಷಗಳಿಂದ ಈ ವಿಚಾರವಾಗಿ ಪ್ರಯತ್ನ ಪಡುತ್ತಲೇ ಇದೆ. ಆದರೆ ಜನರ ಸಹಕಾರ ಸರಿಯಾದ ಮಟ್ಟದಲ್ಲಿ ದೊರೆತಿಲ್ಲ ಎಂದು ಹೇಳಬಹುದು. ಹೀಗಿದ್ದರೂ ಅನೇಕ ವರ್ಷದಿಂದ ಮೇಲ್ ಜಾತಿ ಅವರ ಧೋರಣೆಗಳಿಗೆ ತುಳಿತಕ್ಕೊಳಗಾದ ಪರಿಶಿಷ್ಟ ಜಾತಿ ಮತ್ತು ವರ್ಗದವರ ಸುಧಾರಣೆಗಾಗಿ ಈಗಾಗಲೇ ಅನೇಕ ಯೋಜನೆಯನ್ನು ಮತ್ತು ಮೀಸಲಾತಿಯನ್ನು ಪರಿಚಯಿಸಲಾಗಿದೆ.

ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಪರಿಶಿಷ್ಟ ಜಾತಿ (Scheduled Caste) ಮತ್ತು ವರ್ಗದವರಿಗೆ ಸರಿಯಾದ ಸ್ಥಾನ ಮಾನ ನೀಡಬೇಕು ಎಂಬ ನೆಲೆಯಲ್ಲಿ ಸಹಾಯಧನ, ಮೀಸಲಾತಿ ನೂತನ ಯೋಜನೆಯನ್ನು ಪರಿಚಯಿಸಲಾಗಿದೆ. ಈ ನೆಲೆಯಲ್ಲಿ ಅಂತರ್ಜಾತಿ ವಿವಾಹ ಆಗುವವರಿಗೂ ಅಧಿಕ ಮೊತ್ತದ ಪ್ರೋತ್ಸಾಹ ಧನ ಸಿಗಲಿದ್ದು, ಇತ್ತೀಚೆಗೆ ಅಂತರ್ಜಾತಿ ವಿವಾಹ (Intercaste Marriage) ಆಗುವವರಿಗೆ ಈ ಪ್ರೋತ್ಸಾಹ ಧನದ ಮೊತ್ತವನ್ನು ಮತ್ತಷ್ಟು ಏರಿಸಿದ್ದಾರೆ. ಹೀಗಾಗಿ ಅಂತರ್ಜಾತಿ ವಿವಾಹ ಆಗುವವರಿಗೆ ಇದೊಂದು ಶುಭ ಸುದ್ದಿ ಆಗಲಿದೆ.

ಎಷ್ಟು ರೂಪಾಯಿ ನೀಡಲಾಗುತ್ತದೆ?

 

Image Source: NDTV

 

ಪರಿಶಿಷ್ಟ ಜಾತಿ (Scheduled Caste) ವರ್ಗದ ಯುವಕ, ಯುವತಿಯರು ಪರಿಶಿಷ್ಟ ವರ್ಗದ ಯುವಕ ಯುವತಿಯನ್ನು ವಿವಾಹವಾದರೆ ಒಳಪಂಗಡ ಅಂತರ್ಜಾತಿ ವಿವಾಹ ಪ್ರೋತ್ಸಾಹದ ಅಡಿಯಲ್ಲಿ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು. ಹಾಗಾಗಿ ಅಂತರ್ಜಾತಿ ವಿವಾಹವಾಗುವವರಿಗೆ ಸಿಹಿ ಸುದ್ದಿ ಸಿಕ್ಕಂತಾಗುವುದು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಆದೇಶ. ಈ ಎರಡು ಲಕ್ಷ ಪ್ರೋತ್ಸಾಹ ಧನ ಸಿಗುವ ಕಾರಣ ಅಂತರ್ಜಾತಿ ವಿವಾಹಕ್ಕೆ (Intercaste Marriage) ಉತ್ತಮ ಪ್ರೋತ್ಸಾಹ ದೊರೆತಂತಾಗಿದೆ.

advertisement

ಅರ್ಹತೆ ಏನು?

 

Image Source: DESIblitz

 

ಪರಿಶಿಷ್ಟ ಜಾತಿಯ ಯುವಕ ಯುವತಿಯರಿಗೆ ವಯೋಮಿತಿ ಅನ್ವಯವಾಗಲಿದೆ. ಯುವಕರಿಗೆ 21ರಿಂದ 45ವರ್ಷಗಳ ಮಿತಿ ಇರಬೇಕು. ಯುವತಿಯರಿಗೆ 18ವರ್ಷ ದಿಂದ 41ವರ್ಷದ ವರೆಗೆ ವಯಸ್ಸಿನ ಮಿತಿ ಹೊಂದಿರಬೇಕು. ಈಗಾಗಲೇ ಒಮ್ಮೆ ಈ ಯೋಜನೆಯಿಂದ ಪ್ರೋತ್ಸಾಹ ಧನ ಪಡೆದವರು ಹಾಗೂ ವಿಧವಾ ವಿವಾಹ ಪ್ರೋತ್ಸಾಹ ಧನ ಪಡೆದವರು ಈ ಯೋಜನೆಗೆ ಅರ್ಹರಲ್ಲ ಎನ್ನಬಹುದು. ದಂಪತಿಗಳು ಪರಿಶಿಷ್ಟ ಜಾತಿಯ ಬೇರೆ ಬೇರೆ ಉಪಜಾತಿಯವರಾಗಿರಬೇಕು.

ಎಲ್ಲಿ ಅರ್ಜಿ ಸಲ್ಲಿಸಬೇಕು:

ಜಾತೀಯತೆಯ ಭಾವನೆಯನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶಕ್ಕೆ ಈ ಅಂತರ್ಜಾತಿ ವಿವಾಹ ಮಾಡಲಾಗುತ್ತಿದ್ದು ಅರ್ಜಿ ಸಲ್ಲಿಸುವವರು ಆನ್ಲೈನ್ ನಲ್ಲಿ ಅರ್ಜಿ ಹಾಕಬಹುದು. https://swdservices.karnataka.gov.in/swincentive/Intracaste/ ವೆಬ್‌ಸೈಟ್‌ ನಲ್ಲಿ ನೋಂದಣಿ ಮಾಡಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಅಥವಾ ಗೊಂದಲ ನಿವಾರಣೆಗೆ 9480843005 ನಂಬರ್ ಗೆ ಕರೆ ಮಾಡಬಹುದು.

advertisement

Leave A Reply

Your email address will not be published.