Karnataka Times
Trending Stories, Viral News, Gossips & Everything in Kannada

Ajit Agarkar: ಹಾರ್ದಿಕ್ ಬದಲು ಈ ಆಟಗಾರ ಭಾರತದ ಉಪನಾಯಕನಾಗಬೇಕಿತ್ತು; ಆದರೆ ಅಗರ್ಕರ್ ಬೇಡ ಎಂದಿದ್ದು ಯಾಕೆ ಗೊತ್ತಾ?

advertisement

ಎಲ್ಲರ ಬಾಯಲ್ಲೂ ಐಪಿಎಲ್ – ಐಪಿಎಲ್ ನಡೆಯುತ್ತಿರಬೇಕಾದರೆ ಭಾರತದ ಕ್ರಿಕೆಟ್ ಮಂಡಳಿ ಮಾತ್ರ ಸದ್ದಿಲ್ಲದೆ 2024ರ T20 Tournament ಅನ್ನು ಗೆಲ್ಲಲೇಬೇಕು ಎಂಬ ಪಣತೊಟ್ಟಿದೆ. ನಾಯಕನ ಸ್ಥಾನದಲ್ಲಿರುವ ರೋಹಿತ್ ಶರ್ಮ (Rohit Sharma) ಮುಂದುವರೆಯಲಿದ್ದಾರೆ ಎಂದು ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.

ವೆಸ್ಟ್ ಇಂಡೀಸ್ ಮತ್ತು ಅಮೇರಿಕಾ ಜಂಟಿ ಆಯೋಜನೆ:

ಹಲವಾರು ಭಾರತೀಯ ಆಟಗಾರರು ಟಿ-20 ಮಾದರಿಗೆ ಸೂಕ್ತವಾದ ಪರ್ಫಾರ್ಮೆನ್ಸ್ ಅನ್ನು ನೀಡುತ್ತಿರುವುದು ಭಾರತದ ಕಪ್ ಗೆಲ್ಲುವ ಆಸೆಯನ್ನು ಬಹಳಷ್ಟು ಹೆಚ್ಚಿಸಿದೆ. ಜೂನ್ ಒಂದರಿಂದ ನಡೆಯಲಿರುವ ಟಿ 20 ವಿಶ್ವಕಪ್ ಈ ಬಾರಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಲಿದೆ. ಈ ಬಾರಿ ಅತಿ ಹೆಚ್ಚು ಅಂದರೆ 20 ತಂಡಗಳು ಟೂರ್ನಮೆಂಟ್ ನಲ್ಲಿ ಭಾಗವಹಿಸಲಿದೆ. ಈ ತಂಡಗಳನ್ನು ಐದು ತಂಡಗಳ ನಾಲ್ಕು ಗುಂಪುಗಳಾಗಿ ಮಾಡಲಾಗಿದೆ. ಇದರಲ್ಲಿ ಭಾರತ ಐರ್ಲ್ಯಾಂಡ್, ಯು ಎಸ್ ಎ, ಕೆನಡಾ ಮತ್ತು ಪಾಕಿಸ್ತಾನದ ಜೊತೆ ಸಣಸಲಿದೆ. ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಜೂನ್ 5ರಂದು ಐರ್ಲ್ಯಾಂಡ್ ವಿರುದ್ಧ ಆಡಲಿದೆ ಹಾಗೂ ಪಾಕಿಸ್ತಾನದ ಎದುರಿನ ಬಹು ನಿರೀಕ್ಷಿತ ಪಂದ್ಯ ಜೂನ್ 9 ರಂದು ನಡೆಯಲಿದೆ.

ಹಾರ್ದಿಕ್ ಪಾಂಡ್ಯ ಉಪನಾಯಕ ನೇಮಕ ಬಹಳಷ್ಟು ಮಂದಿಗೆ ಬೇಸರ ತರಿಸಿದೆ:

 

Image Source: Times Now

 

advertisement

ನಾಯಕನ ಸ್ಥಾನಕ್ಕೆ ರೋಹಿತ್ ಶರ್ಮ (Rohit Sharma) ಅವರ ಆಯ್ಕೆ ಎಲ್ಲರಿಗೂ ಸಂತಸ ತಂದಿದ್ದು ಯಾರಲ್ಲಿಯೂ ಕೂಡ ಅವರ ಕ್ಷಮತೆಯ ಬಗ್ಗೆ ಸ್ವಲ್ಪವೂ ಅನುಮಾನವಿಲ್ಲ. ಆದರೆ ಉಪನಾಯಕನಾಗಿ (Vice-captain) ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಆಯ್ಕೆ ಮಾಡಿರುವುದು ಹಲವಾರು ಮಂದಿಯಲ್ಲಿ ಅಚ್ಚರಿ ಹಾಗೂ ಬೇಸರ ತಂದಿದೆ. ಹಲವಾರು ಸಮಯದಿಂದ ಫಿಟ್ನೆಸ್ ಸಮಸ್ಯೆಯಿಂದ ಹಾಗೂ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಾರ್ದಿಕ ಪಾಂಡ್ಯ ಅವರನ್ನು ಉಪನಾಯಕನ (Vice-captain) ಸ್ಥಾನಕ್ಕೆ ನೇಮಕ ಮಾಡಿರುವುದು ಹಲವಾರು ಮಂದಿಗೆ ಅಚ್ಚರಿ ಹಾಗೂ ಬೇಸರ ತರಿಸಿದೆ.

ಅಗರ್ಕರ್ (Ajit Agarkar) ಪಾಂಡ್ಯ ಪರ ಬ್ಯಾಟಿಂಗ್:

 

Image Source: Times of India

 

ಅಜಿತ್ ಅಗರ್ಕರ್ (Ajit Agarkar) ಅವರಿಗೆ ಹಾರ್ದಿಕ್ ಪಾಂಡ್ಯ (Hardik Pandya) ಅವರೇ ಉಪನಾಯಕ ಆಗಿರಬೇಕು. ಇವರನ್ನು ಬಿಟ್ಟು ಬೇರೆಯವರನ್ನು ಪರಿಗಣಿಸುತ್ತಿಲ್ಲ ಎಂದು ಹೇಳಲಾಗಿದೆ. ಇತ್ತೀಚಿಗೆ ಉತ್ತಮ ಪ್ರದರ್ಶನ ನೀಡುತ್ತಾ ಬರುತ್ತಿರುವ ಶುಭಮನ್ ಗಿಲ್ (Shubman Gill) ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಬೇಕಿತ್ತು ಎನ್ನುವುದು ಹೆಚ್ಚಿನ ಮಂದಿಯ ಅಭಿಪ್ರಾಯ ಆಗಿದೆ.

2013 ರ ನಂತರ ಐ ಸಿ ಸಿ ಟ್ರೋಫಿ ಗೆದ್ದಿಲ್ಲ ಭಾರತ:

ಭಾರತ ತನ್ನ ಕೊನೆಯ ICC Trophy ಗೆದ್ದಿರೋದು 2013 ರಲ್ಲಿ. 2013 ರ ಚಾಂಪಿಯನ್ ಟ್ರೋಫಿಯನ್ನು ಭಾರತ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ನಾಯಕತ್ವದಲ್ಲಿ ಗೆದ್ದಿತ್ತು. ಅದಾದ ಮೇಲೆ ಇಲ್ಲಿಯ ತನಕ ಬಹಳ ಬಾರಿ ಸೆಮಿಫೈನಲ್ ಮತ್ತು ಫೈನಲ್ ಪ್ರವೇಶಿಸಿದ್ದರೂ ಯಾವುದೇ ಟ್ರೋಫಿಯನ್ನು ತನ್ನದಾಗಿಸಿಲ್ಲ. ಈ ಬಾರಿಯಾದರೂ ತಂಡ ಟ್ರೋಫಿಯನ್ನು ಗೆಲ್ಲಲಿ ಎನ್ನುವುದು ನಮ್ಮೆಲ್ಲರ ಹಾರೈಕೆಯಾಗಿದೆ.

advertisement

Leave A Reply

Your email address will not be published.