Karnataka Times
Trending Stories, Viral News, Gossips & Everything in Kannada

TET Exam 2024: ಸುಲಭವಾಗಿ 2024 ರ TET ಎಕ್ಸಾಂ ಪಾಸ್ ಆಗಲು ಓದಬೇಕಾದ ಪುಸ್ತಕಗಳು ಇಲ್ಲಿವೆ

advertisement

ಕರ್ನಾಟಕದ 2024ರ ಶಿಕ್ಷಕರ ಅರ್ಹತಾ ಪರೀಕ್ಷೆ ಜೂನ್ 30 ರಂದು ಜರುಗಲಿದೆ. ಇನ್ನು ಇದಕ್ಕಾಗಿ ಹಲವಾರು ಮಂದಿ ಈಗಾಗಲೇ ಸಿದ್ಧತೆ ನಡೆಸಿದ್ದಾರೆ. ಮತ್ತು ಹಲವಾರು ರೀತಿಯಾದಂತಹ ಪುಸ್ತಕ ಪಠ್ಯಕ್ರಮಗಳನ್ನು ಕೂಡಾ ಖರೀದಿ ಮಾಡಿರುತ್ತಾರೆ. ಕೆಲವು ಪುಸ್ತಕಗಳು ತುಂಬಾ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಇರುತ್ತದೆ. ಇನ್ನು, ಕೆಲವು ತುಂಬಾ ಕಷ್ಟಕರವಾಗಿದೆ ಎಂದು ಅನಿಸುತ್ತದೆ. ಇನ್ನು ಸುಲಭವಾಗಿ ಅರ್ಥವಾಗುವ ಮತ್ತು ಸುಲಭವಾಗಿ ಕೊಂಡುಕೊಳ್ಳಲು ಇರುವ ಪುಸ್ತಕಗಳು ಯಾವುದು ಎಂದು ತಿಳಿದುಕೊಳ್ಳುವುದು ಒಳ್ಳೆಯದು.

TET ಪಾಸಾಗಲು ಇರುವ ಉತ್ತಮ ಪುಸ್ತಕಗಳು ಯಾವುದು ಎಂದು ತಿಳಿದುಕೊಳ್ಳೋಣ:

 

Image Source: World Expo

 

advertisement

ಇನ್ನು ಯಾವುದೇ ಪರೀಕ್ಷೆಯನ್ನು ನಾವು ಬರೆಯುತ್ತೇವೆ ಎಂದಾದಲ್ಲಿ ಅದರ ಕುರಿತಾಗಿ ಪೂರ್ವ ತಯಾರಿ ತುಂಬಾ ಮುಖ್ಯ ಇನ್ನು ಪೂರ್ವ ತಯಾರಿ ಮಾಡುವಾಗ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಅದನ್ನು ಅವಲೋಕಿಸುವುದು ತುಂಬಾ ಒಳ್ಳೆಯ ವಿಷಯ.ಇನ್ನು TET ಯ ಸಂಬಂಧಿತ ಅಪ್ಲಿಕೇಶನ್ ಏಪ್ರಿಲ್ ನಲ್ಲಿ ಬಿಡುಗಡೆ ಆಗಬಹುದು ಎಂದು ತಜ್ಞರು ತಿಳಿಸಿದ್ದಾರೆ. ಆದರೆ ಚುನಾವಣೆಯ ಕಾರಣ ಇದು ಮುಂದೊಡಬಹುದು ಅಥವಾ ನಿಗದಿಪಡಿಸಿದ ಸಮಯದಲ್ಲಿಯೇ ಜಾರಿಯಾಗಬಹುದು ಎಂಬುದು ಕೂಡ ನೆನಪಿನಲ್ಲಿಡಬೇಕಾದ ಸಂಗತಿಯಾಗಿದೆ.

ಇನ್ನು ಪ್ರಮುಖವಾಗಿ TET ಪರೀಕ್ಷೆಯಲ್ಲಿ (TET Exam 2024) ಎರಡು ಪೇಪರ್ ಇರುತ್ತದೆ. ಒಂದು ಸಾಮಾನ್ಯ ಜ್ಞಾನ ಅಥವಾ ಜನರಲ್ ನಾಲೆಡ್ಜ್ (General Knowledge) ಮತ್ತೊಂದು ಸಬ್ಜೆಕ್ಟ್ ಪೇಪರ್ (Subject Paper) ಇನ್ನು ಜನರಲ್ ಪೇಪರ್ (General Paper) ನಲ್ಲಿ ಶೈಕ್ಷಣಿಕ ಮನೋವಿಜ್ಞಾನ, ಕನ್ನಡ ವ್ಯಾಕರಣ, ಇಂಗ್ಲಿಷ್ ಗ್ರಾಮರ್, ಪರಿಸರ ಅಧ್ಯಯನ ಮತ್ತು ಗಣಿತಶಾಸ್ತ್ರ, ಮತ್ತು ಸಮಾಜ ವಿಜ್ಞಾನ ಈ ವಿಚಾರಗಳಿಗೆ ಸಂಬಂಧಪಟ್ಟಂತೆ ಪ್ರಶ್ನೆ ಪತ್ರಿಕೆ ಇರುತ್ತದೆ. ಇನ್ನು ಶೈಕ್ಷಣಿಕ ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ ಡಾ‌. ವಾಮದೇವಪ್ಪ ಅವರ ಶೈಕ್ಷಣಿಕ ಮನೋವಿಜ್ಞಾನ ಎಂಬ ಪುಸ್ತಕ ತುಂಬಾ ಸುಲಭವಾಗಿ ಮತ್ತು ಅರ್ಥಗರ್ಭಿತವಾಗಿ ಇದೆ.

ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದಂತೆ ಐ.ಎಸ್ ಅರಳಗುಪ್ಪಿ ಲೇಖಕರ ಪುಸ್ತಕಗಳು ಮತ್ತು 6ರಿಂದ 10ನೇ ತರಗತಿಯವರೆಗೂ ಇರುವ ಪಠ್ಯಕ್ರಮಗಳ ಭಾಷಾಭ್ಯಾಸ ಮತ್ತು ಕನ್ನಡ ವ್ಯಾಕರಣ ಓದುವುದು ಉತ್ತಮ. ಇನ್ನು ಇಂಗ್ಲೀಷ್ ಗ್ರಾಮರ್ ಪಠ್ಯಕ್ಕೆ ಸಂಬಂಧಿಸಿದಂತೆ 6 ರಿಂದ 10ನೇ ತರಗತಿಯವರೆಗೂ ಇರುವ ಇಂಗ್ಲೀಷ್ ಗ್ರಾಮರ್, ಬಿದರೆ ಮಂಜುನಾಥ್ ಅವರ ಪುಸ್ತಕ, ಅರಿಹಂಟ್ ಪಬ್ಲಿಕೇಶನ್ (Arihant Publication) ಪುಸ್ತಕಗಳು ತುಂಬಾ ಸುಲಭವಾಗಿದೆ ಮತ್ತು ಉತ್ತಮವಾಗಿದೆ. ಇನ್ನು ಪರಿಸರ ಅಧ್ಯಯನ ಮತ್ತು ಗಣಿತಶಾಸ್ತ್ರಕ್ಕೆ ಸಂಬಂಧಿಸಿದಂತೆ ಬೋಧನಾ ಶಾಸ್ತ್ರ ಲೇಖಕರ ಪಠ್ಯಕ್ರಮವನ್ನು ಹೊರತುಪಡಿಸಿ ಮಿಕ್ಕ ಲೇಖಕರ ಪಠ್ಯಪುಸ್ತಕಗಳು ಉತ್ತಮವಾಗಿವೆ.

ಇನ್ನು ಪತ್ರಿಕೆ 2ಕ್ಕೆ ಸಂಬಂಧಿಸಿದಂತೆ ಆರ್ಟ್ಸ್ ಮತ್ತು ಕಾಮರ್ಸ್(Arts & Commerce), ಸೈನ್ಸ್ (Science)ಈ ಮೂರು ವಿಷಯಗಳಿಗೆ 6 ರಿಂದ 10ನೇ ತರಗತಿಯ ವರೆಗಿನ ಪಠ್ಯಕ್ರಮಗಳನ್ನು ಓದುವುದು ತುಂಬಾ ಮುಖ್ಯ. ಜೊತೆಗೆ ಹಿಂದಿನ ವರ್ಷಗಳಲ್ಲಿ ನಡೆದ ಪರೀಕ್ಷೆಗಳ ಮಾದರಿ ಪ್ರಶ್ನೆ ಪತ್ರಿಕೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅವಲೋಕಿಸುವುದು ತುಂಬಾ ಮುಖ್ಯ. ಇದರ ಜೊತೆಗೆ ಬೋಧನಾಶಾಸ್ತ್ರಕ್ಕಾಗಿ ಬಿ.ಎಡ್ ಪುಸ್ತಕಗಳು ತುಂಬಾ ಅನುಕೂಲಕರವಾಗಿದೆ. ಇನ್ನು ಪ್ರಶ್ನೆ ಪತ್ರಿಕೆ 2ಕ್ಕೆ ಸಂಬಂಧಿಸಿದಂತೆ ಸರ್ಕಾರಿ ಪಠ್ಯಕ್ರಮ ಹೊರತುಪಡಿಸಿ ಬೇರೆ ಯಾವುದೇ ಪುಸ್ತಕಗಳನ್ನು ಆರಿಸಿ ಪ್ರಶ್ನೆ ಪತ್ರಿಕೆ ತಯಾರಿಸಿರುವುದಿಲ್ಲ.

advertisement

Leave A Reply

Your email address will not be published.