Karnataka Times
Trending Stories, Viral News, Gossips & Everything in Kannada

Supreme Court: ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಮಗಳ ಹಕ್ಕುಗಳ ಕುರಿತು 51 ಪುಟಗಳ ತೀರ್ಪು ನೀಡಿದ ಸುಪ್ರೀಂ ಕೋರ್ಟ್! ಹೊಸ ರೂಲ್ಸ್

advertisement

ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಆದರೆ ಆಲೋಚನೆ ಇನ್ನೂ ಸಂಪೂರ್ಣವಾಗಿ ಬದಲಾಗಿಲ್ಲ. ತಂದೆಯ ಆಸ್ತಿ (Property) ಯಲ್ಲಿ ಮೊದಲ ಹಕ್ಕು ಮಗನಿಗೆ ಎಂದು ಜನರು ಈಗಲೂ ಭಾವಿಸುತ್ತಾರೆ. ಭಾರತದಲ್ಲಿ ಹೆಣ್ಣು ಮಕ್ಕಳ ಪರವಾಗಿ ಅನೇಕ ಕಾನೂನುಗಳನ್ನು ಮಾಡಲಾಗಿದೆ. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ (Supreme Court) ಕೂಡ ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಮಗಳ ಹಕ್ಕಿನ ಕುರಿತು 51 ಪುಟಗಳ ತೀರ್ಪು ನೀಡಿದ್ದು, ಯಾವೆಲ್ಲ ಅಂಶಗಳು ಅದರಲ್ಲಿ ಸೇರಿವೆ ತಿಳಿದುಕೊಳ್ಳೋಣ.

ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು:

 

Image Source: MagicBricks

 

ಕೆಲ ದಿನಗಳ ಹಿಂದಷ್ಟೇ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ  ಹಕ್ಕುಗಳಿರುವ ಕುರಿತು ಸುಪ್ರೀಂ ಕೋರ್ಟ್ (Supreme Court) ಮಹತ್ವದ ಆದೇಶ ನೀಡಿದೆ. ಅವಿಭಕ್ತ ಕುಟುಂಬದಲ್ಲಿ ವಾಸವಾಗಿರುವ ವ್ಯಕ್ತಿ ವಿಲ್ ಮಾಡದೇ ಮೃತಪಟ್ಟರೆ ಅವರ ಆಸ್ತಿಯಲ್ಲಿ ಅವರ ಮಗಳಿಗೆ ಹಕ್ಕಿದೆ ಎಂದು ಕೋರ್ಟ್ ಹೇಳಿದೆ. ತಂದೆಯ ಸಹೋದರನ ಪುತ್ರರಿಗೆ ಹೋಲಿಸಿದರೆ ಮಗಳಿಗೆ ಆಸ್ತಿಯಲ್ಲಿ ಪಾಲು ನೀಡುವಲ್ಲಿ ಮೊದಲು ಆದ್ಯತೆ ನೀಡಲಾಗುವುದು. ಹಿಂದೂ ಉತ್ತರಾಧಿಕಾರ ಕಾಯಿದೆಯ ಪ್ರಕಾರ 1956 ಅನುಷ್ಠಾನಕ್ಕೆ ಮುನ್ನ ನಡೆದ ಆಸ್ತಿ (Property) ಹಂಚಿಕೆಗೂ  ಇಂತಹ ವ್ಯವಸ್ಥೆ ಅನ್ವಯವಾಗಲಿದೆ ಎಂದು ನ್ಯಾಯಾಲಯ ಹೇಳಿದೆ.

ಅಷ್ಟಕ್ಕೂ ಎನಿದು ಪ್ರಕರಣ:

advertisement

ತಮಿಳುನಾಡಿನಲ್ಲಿ ಇಂತಹದೇ ಒಂದು ಪ್ರಕರಣವನ್ನು ಇತ್ಯರ್ಥ ಮಾಡುವಾಗ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ ಅವರ ಪೀಠವು 51 ಪುಟಗಳ ಈ ನಿರ್ಧಾರವನ್ನು ನೀಡಿದೆ. ಈ ಪ್ರಕರಣದಲ್ಲಿ ತಂದೆ 1949 ರಲ್ಲಿ ನಿಧನರಾದರು. ಅವನು ತನ್ನ ಸ್ವಂತ ಸಂಪಾದಿಸಿದ ಮತ್ತು ಭಾಗಿಸಿದ ಆಸ್ತಿಗೆ ಯಾವುದೇ ವಿಲ್ ಮಾಡಿರಲಿಲ್ಲ. ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದ ಕಾರಣ ತಂದೆಯ ಆಸ್ತಿಯ ಮೇಲೆ ಮದ್ರಾಸ್ ಹೈಕೋರ್ಟ್ ತನ್ನ ಸಹೋದರನ ಪುತ್ರರಿಗೆ ಹಕ್ಕು ನೀಡಿತ್ತು. ಇದೀಗ ಸುಪ್ರೀಂ ಕೋರ್ಟ್ (Supreme Court) ತಂದೆಯ ಏಕೈಕ ಮಗಳ ಪರವಾಗಿ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಮಗಳ ವಾರಸುದಾರರು ಜಗಳವಾಡುತ್ತಿದ್ದರು.

Image Source: Hindustan Times

ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಹಕ್ಕಿದೆ:

ಹಿಂದೂ ಉತ್ತರಾಧಿಕಾರ ಕಾನೂನು ಹೆಣ್ಣು ಮಕ್ಕಳಿಗೆ ಅವರ ತಂದೆಯ ಆಸ್ತಿ (Property) ಯಲ್ಲಿ ಸಮಾನ ಹಕ್ಕುಗಳನ್ನು ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಈ ಕಾನೂನು ಜಾರಿಗೆ ಬರುವ ಮೊದಲು ಧಾರ್ಮಿಕ ವ್ಯವಸ್ಥೆಯಲ್ಲಿಯೂ ಮಹಿಳೆಯರ ಆಸ್ತಿ ಹಕ್ಕುಗಳನ್ನು ಗುರುತಿಸಲಾಗಿತ್ತು ಎಂದು  ನ್ಯಾಯಾಲಯ ಹೇಳಿದೆ. ಒಬ್ಬ ವ್ಯಕ್ತಿಗೆ ಮಗನಿಲ್ಲದಿದ್ದರೂ, ಅವನ ಆಸ್ತಿಯನ್ನು ಅವನ ಸಹೋದರನ ಮಗನ ಬದಲು ಅವನ ಮಗಳಿಗೆ ನೀಡಲಾಗುವುದು ಎಂದು ಈಗಾಗಲೇ ಅನೇಕ ತೀರ್ಪುಗಳಲ್ಲಿ ಇದನ್ನು ಬೆಂಬಲಿಸಲಾಗಿದೆ.

ಈ ವ್ಯವಸ್ಥೆಯು ವ್ಯಕ್ತಿಯು ತನ್ನ ಪರವಾಗಿ ಸ್ವಾಧೀನಪಡಿಸಿಕೊಂಡ ಆಸ್ತಿಗೆ ಮತ್ತು  ಕುಟುಂಬದ ವಿಭಜನೆಯ ಸಮಯದಲ್ಲಿ  ಪಡೆದ ಆಸ್ತಿಗೆ ಈ ನಿಯಮಾವಳಿಗಳು ಅನ್ವಯಿಸುತ್ತದೆ .ಸುಪ್ರೀಂ ಕೋರ್ಟ್ ಈಗ ಈ ವ್ಯವಸ್ಥೆಯನ್ನು 1956 ರ ಮೊದಲು ಮಾಡಿದ ಆಸ್ತಿ ಹಂಚಿಕೆಗೆ ವಿಸ್ತರಿಸಿದೆ. ಇದು ದೇಶಾದ್ಯಂತ ಕೆಳ ನ್ಯಾಯಾಲಯಗಳಲ್ಲಿ ಬಾಕಿ ಇರುವ ಆಸ್ತಿ ಹಂಚಿಕೆ ವಿವಾದ ಪ್ರಕರಣಗಳ ಮೇಲೆ ಪರಿಣಾಮ ಬೀರವ ಎಲ್ಲ ಸಾಧ್ಯತೆಗಳಿವೆ.

advertisement

Leave A Reply

Your email address will not be published.