Karnataka Times
Trending Stories, Viral News, Gossips & Everything in Kannada

Supreme Court: ಗುತ್ತಿಗೆಯ ಆಧಾರದ ಮೇಲೆ ಸರ್ಕಾರಿ ಕೆಲಸದಲ್ಲಿರುವವರಿಗೆ ಗುಡ್ ನ್ಯೂಸ್! ಸುಪ್ರೀಂ ಹೊಸ ಆದೇಶ

advertisement

ಸರಕಾರವು ಈಗ ಉದ್ಯೋಗ ಖಾತರಿ ಯೋಜನೆ ಮೂಲಕ ಅನೇಕ ಪ್ರಯೋಜನವನ್ನು ಸರಕಾರದ ಮೂಲಕ ಜನಸಾಮಾನ್ಯರಿಗೆ ನೀಡುತ್ತಿದ್ದಾರೆ. ಸಮಾಜದಲ್ಲಿ ನಿರುದ್ಯೋಗ ಸಮಸ್ಯೆ ಪರಿಹಾರ ಮಾಡಬೇಕು ಎಂಬ ಉದ್ದೇಶಕ್ಕೆ ಸರಕಾರದಿಂದ ಅನೇಕ ಉದ್ಯೋಗ ಸೃಷ್ಟಿ ಯೋಜನೆ (Job Creation Scheme) ಗಳನ್ನು ಜಾರಿ ಮಾಡಲಾಗುತ್ತಾ ಬರಲಾಗಿದೆ. ಈ ಮೂಲಕ ಅನೇಕ ನೌಕರರಿಗೆ ಉದ್ಯೋಗ ನೀಡಲಾಗುತ್ತಿದ್ದು ಗುತ್ತಿಗೆ ನೌಕರರು ಮತ್ತು ಖಾಯಂ ನೌಕರರು ಎಂಬ ವಿಭಾಗ ಇರುವುದನ್ನು ಕಾಣಬಹುದು.

ವ್ಯತ್ಯಾಸ ಏನು?

ಖಾಯಂ ಮತ್ತು ಗುತ್ತಿಗೆ ಆಧಾರದಲ್ಲಿ ನೇಮಕ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ವ್ಯತ್ಯಾಸ ಇರುವುದನ್ನು ಕಾಣಬಹುದು. ಖಾಯಂ ಕೆಲಸಗಾರರಿಗೆ ಯಾವಾಗಲೂ ನಿರ್ದಿಷ್ಟ ಕೆಲಸ ಎಂಬುದು ಇದ್ದೇ ಇರುತ್ತದೆ. ಜೊತೆಗೆ ಅವರಿಗೆ ವೇತನವು ವರ್ಷದಿಂದ ವರ್ಷಕ್ಕೆ ಅಧಿಕ ಆಗಿರಲಿದೆ. ಆದರೆ ಗುತ್ತಿಗೆ ಆಧಾರದ ಮೇಲೆ ನೇಮಕ ಆದ ನೌಕರರು ಕೆಲಸ ವಿದ್ದರೆ ಮಾತ್ರವೇ ಅವರನ್ನು ಗುತ್ತಿಗೆ ಕೆಲಸದಾರರು ಎಂದು ಕರೆಯಲಾಗುತ್ತದೆ. ಹಾಗೆ ಇವರಿಗೆ ಕೆಲಸ ಇದ್ದರೆ ಮಾತ್ರವೇ ವೇತನ ಇರಲಿದೆ. ಇದರಲ್ಲಿ ಮತ್ತೊಂದು ಪ್ರಕಾರ ಕೂಡ ಇದ್ದು ಕೆಲವು ಗುತ್ತಿಗೆ ನೌಕರರನ್ನು 3,5ವರ್ಷಕ್ಕೆ ಎಂದು ನೇಮಕ ಮಾಡಿರುತ್ತಾರೆ.

Supreme Court Order:

 

advertisement

Image Source: India Today

 

ಇತ್ತೀಚಿನ ದಿನದಲ್ಲಿ ಖಾಯಂ ನೌಕರರು ಮಾಡಬೇಕಾದ ಕೆಲಸ ಕಾರ್ಯವನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಆದ ಕೆಲಸಗಾರರಿಗೆ ನೀಡಲಾಗುತ್ತಿರುವುದು ತಿಳಿದು ಬಂದಿದೆ. ದೀರ್ಘ ಕಾಲಿನ ಕೆಲಸ ಕಾರ್ಯಗಳನ್ನು ಮಾಡಲು ನೇಮಕ ಮಾಡಿದ್ದ ಕೆಲಸಗಾರರನ್ನು ಗುತ್ತಿಗೆ ಕೆಲಸಗಾರರು ಎಂದು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ (Supreme Court) ಹೊಸ ಆದೇಶ ಒಂದನ್ನು ಹೊರಡಿಸಿದೆ. ಮಾರ್ಚ್ 12ರಂದು ಈ ಬಗ್ಗೆ ಆದೇಶ ನೀಡಿದ್ದು 1970ರ ಅಡಿಯಲ್ಲಿ ಈ ಆದೇಶ ನೀಡಲಾಗಿದೆ.

ಯಾವುದು ಈ ಪ್ರಕರಣ:

ಸುಪ್ರೀಂ ಕೋರ್ಟ್ (Supreme Court) ನ ನ್ಯಾಯಮೂರ್ತಿಗಳಾದ ಪಿ ವಿ ನರಸಿಂಹ ಮತ್ತು ಸಂದೀಪ್ ಮೆಹ್ತಾ ಅವರ ವಿಭಾಗೀಯ ಪೀಠ ಆದೇಶ ನೀಡಿದೆ. ರೈಲ್ವೆ ಸೈಡಿಂಗ್ ಗಳಲ್ಲಿ ಕೊಳೆಯನ್ನು ತೆಗೆದುಹಾಕುವ ಕೆಲಸವನ್ನು ಶಾಶ್ವತ ಅಂದರೆ ಖಾಯಂ ನೌಕರರು ಮಾಡಲಿದ್ದು ಇದನ್ನು ಮಾಡಲು 12 ತಿಂಗಳ ಕಾಲ ನೌಕರರ ನೇಮಕ ಮಾಡಲಾಗಿದೆ ಹಾಗೆಂದು ಅವರನ್ನು ಖಾಯಂ ನೌಕರರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ವಿಭಾಗೀಯ ಪೀಠ ತಿಳಿಸಿದೆ.

ಒಟ್ಟಾರೆಯಾಗಿ ಗುತ್ತಿಗೆದಾರರು ಖಾಯಂ ಕೆಲಸಗಾರರ ಕೆಲಸ ಮಾಡಿದರೂ ಖಾಯಂ ಕೆಲಸಗಾರರಿಗೆ ನೀಡಲಾಗುವ ಪ್ರಯೋಜನವನ್ನು ಗುತ್ತಿಗೆ ಕೆಲಸಗಾರರಿಗೆ ನೀಡಲುಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ನ್ಯಾಯ ಮೂರ್ತಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಗುತ್ತಿಗೆದಾರರ ಮಿತಿ ಹಾಗೂ ಪರಿಮಿತಿ ಮತ್ತೊಮ್ಮೆ ಪರಿಶೀಲನೆ ಮಾಡಲಾಗುತ್ತಿದೆ.

advertisement

Leave A Reply

Your email address will not be published.