Karnataka Times
Trending Stories, Viral News, Gossips & Everything in Kannada

State Govt: ಸಹಕಾರಿ ಸಂಘ, ಹಾಗೂ ಬ್ಯಾಂಕುಗಳಿಗೆ ಹೊಸ ಆದೇಶ ಕೊಟ್ಟ ರಾಜ್ಯ ಸರ್ಕಾರ!

advertisement

ಇನ್ನೇನು ಕೆಲವೆ ದಿನದಲ್ಲಿ ಲೋಕಸಭೆಯ ಚುನಾವಣೆ (Lokasabha Election) ಇರಲಿದೆ. ಹೀಗಿರುವಾಗಲೇ ಚುನಾವಣೆ ನೀತಿ ಸಂಹಿತೆ ಕೂಡ ಜಾರಿಗೆ ಬರುವುದು ಸಾಮಾನ್ಯ ನಿಯಮವಾಗಿದ್ದು, ಇದರ ಹಿನ್ನೆಲೆ ಈಗಾಗಲೇ ಅನೇಕ ಸಂಘ ಸಂಸ್ಥೆಗೆ ಮತ್ತು ಸಹಕಾರಿ ಸಂಘಗಳಿಗೆ ಸರಕಾರದಿಂದ ವಿಶೇಷ ಆದೇಶ ಒಂದನ್ನು ನೀಡಲಾಗಿದೆ. ಸರಕಾರ ಮುಂದಾಲೋಚನೆಯಿಂದಲೇ ಈ ನಿರ್ಣಯಕ್ಕೆ ಬಂದು ಆದೇಶ ಹೊರಡಿಸಿದ್ದು ಆದೇಶ ಉಲ್ಲಂಘನೆ ಮಾಡಿದ್ದರೆ. ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಶಿಕ್ಷೆ ಕೂಡ ವಿಧಿಸುವ ಸಾಧ್ಯತೆ ಇದೆ. ಹಾಗಾದರೆ ಯಾವ ವಿಚಾರವಾಗಿ ಆದೇಶ ಬಂದಿದೆ ಎಂದು ಸಂಪೂರ್ಣ ವಿವರಣೆ ಇಲ್ಲಿದೆ.

ರಾಜ್ಯ ಸರಕಾರ (State Govt)ದ‌ ಆದೇಶದಲ್ಲಿ ಏನಿದೆ?

 

Image Source: ThePrint

 

ರಾಜ್ಯ ಸರಕಾರ (State Govt) ದ‌ ಆದೇಶದಲ್ಲಿ ಎಲ್ಲ ಸಹಕಾರಿ ಸಂಘಗಳಿಗೆ ಮತ್ತು ಸಹಕಾರಿ ಬ್ಯಾಂಕುಗಳಿಗೆ (Govt Banks) ಮುಂದಿನ ಆದೇಶದ ವರೆಗೆ ಮುಂದೂಡಿಕೆ ಮಾಡಿ, ಪದಾಧಿಕಾರಿಗಳ ಅವಧಿ ಮುಂದುವರೆಸಲು ತೀರ್ಮಾನಿಸಲಾಗಿದೆ. ಹಾಗಾಗಿ ಸರಕಾರದ ಅಧಿಕೃತ ಆದೇಶದ ವರೆಗೆ ಸಹಕಾರಿ ಸಂಘ ಸಂಸ್ಥೆಗಳು ಮತ್ತು ಬ್ಯಾಂಕ್ ಚುನಾವಣೆ ನಡೆಸುವಂತಿಲ್ಲ. 45 ಸಾವಿರಕ್ಕೂ ಅಧಿಕ ಸಹಕಾರಿ ಸಂಘ ಸಂಸ್ಥೆಗಳು ಇದ್ದು ಅವುಗಳ ಚುನಾವಣೆ ಲೋಕಸಭೆ ಚುನಾವಣೆಯ ಕಾಲಕ್ಕೆ ನಡೆದರೆ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಿಗಳು ಕಡಿಮೆ ಸಿಗಲಿದ್ದಾರೆ ಎಂಬ ಕಾರಣಕ್ಕಾಗಿಯೇ ಈ ಆದೇಶ ನೀಡಲಾಗಿದೆ.

advertisement

ಕಾಯ್ದೆ ಅಡಿಯಲ್ಲಿ ನಿಯಮ:

ಎಲ್ಲ ಸಹಕಾರಿ ಸಂಘಗಳಿಗೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ1959ರ ಪ್ರಕಾರ 28 ಎ (5), 28 B, 29 F ಇದರ ಅಡಿಯಲ್ಲಿ ವಿನಾಯಿತಿ ನೀಡಲಾಗಿದ್ದ ಚುನಾವಣೆ ಮುಂದೂಡಿ ಹಾಲಿ ಇರುವ ಚುನಾವಣೆಯನ್ನು ಮುಂದುವರೆಸಿ ಪದಾಧಿಕಾರಿಗಳನ್ನು ಮುಂದಿನ ಆದೇಶದ ವರೆಗೆ ಮುಂದುವರಿಸುವಂತೆ ಕಾಯ್ದೆ ಅಡಿಯಲ್ಲೇ ಈ ನಿಯಮದ ಬಗ್ಗೆ ಉಲ್ಲೇಖಿಸಲಾಗಿದೆ. ಹಾಗಾಗಿ ಮುಂದಿನ ಆದೇಶ ಬರುವ ವರೆಗೆ ಅಂದರೆ 2024ರ ಮಾರ್ಚ್ ನಿಂದ ಜೂನ್ ವರೆಗೆ ಇದೇ ಆದೇಶ ಮುಂದುವರಿಯುವ ಸಾಧ್ಯತೆ ಇದೆ.

ಚುನಾವಣೆ ದಿನಾಂಕ ಘೋಷಣೆ?

ಈಗಾಗಲೇ ಇನ್ನೆನು ಚುನಾವಣೆ ಎಂದು ಘೋಷಣೆ ಮಾಡಿದ್ದರೆ ಅಂತಹ ಅವಧಿಯಲ್ಲಿ ನ್ಯಾಯಾಲಯದ ಆದೇಶದಂತೆ ಚುನಾವಣೆ ಪ್ರಕ್ರಿಯೆ ಪ್ರಾರಂಭ ಆಗಿದ್ದರೆ ಅಥವಾ ಇನ್ನಷ್ಟೇ ಚುನಾವಣೆ ನಡೆಸಬೇಕಿದ್ದರೆ ಈ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದು ನ್ಯಾಯಾಲಯದಲ್ಲಿ ನೀಡುವ ಆದೇಶ ಅನುಸರಿಸುವಂತೆ ಸೂಚಿಸಲಾಗಿದೆ.

ಒಟ್ಟಾರೆಯಾಗಿ ನಾಳೆ ಚುನಾವಣೆ ದಿನಾಂಕ ತಿಳಿದುಬರಲಿದ್ದು ಚುನಾವಣೆಗೆ ಮುನ್ನ ಗುಂಪು ಸೇರುವುದು ಅನಗತ್ಯ ಪ್ರಚಾರ ಕಾರ್ಯಕ್ರಮ ಮುಂತಾದವುಗಳಿಗೆ ಕೂಡ ಕಡಿವಾಣ ಹಾಕಲು ಸರಕಾರ ತೀರ್ಮಾನಿಸಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಅಧಿಸೂಚನೆ ಹೊರಡಿಸಿದ್ದು ಈ ಅಧಿಸೂಚನೆ ಪಾಲಿಸಬೇಕಾಗಿದ್ದು ಎಲ್ಲರ ಕರ್ತವ್ಯ ಎಂದು ಕೂಡ ಸರಕಾರ ಮೂಲಗಳು ಜನರಿಗೆ ಅರಿವು ಮೂಡಿಸುತ್ತಿದೆ.

advertisement

Leave A Reply

Your email address will not be published.