Karnataka Times
Trending Stories, Viral News, Gossips & Everything in Kannada

PTCL Act: ಇಂತಹ ಜಮೀನುಗಳಿಗೆ PTCL ಕಾಯ್ದೆ ಅನ್ವಯ ಆಗಲ್ಲ! ಹೊಸ ಆದೇಶ

advertisement

ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸಮಾಜದ ಅನೇಕ ಧೋರಣೆಗಳಿಂದ ಅನೇಕ ವರ್ಷದ ವರೆಗೆ ಶೋಷಣೆ ಮಾಡುತ್ತಲೇ ಬರಲಾಗಿದೆ. ಇಂತಹ ವರ್ಗದ ಜನರನ್ನು ಅನೇಕ ವರ್ಷದಿಂದ ಗುಲಾಮರನ್ನಾಗಿ ಮಾಡಿಸಿ ಜೀತಕ್ಕೆ ಇಟ್ಟುಕೊಂಡು ಶೋಷಣೆ ಮಾಡುತ್ತಲೇ ಬರಲಾಗಿದೆ ಹಾಗಾಗಿ ಇಂತಹ ವರ್ಗದ ಹಿತಾಸಕ್ತಿ ಕುರಿತಾಗಿ ಹುಟ್ಟಿಕೊಂಡ PTCL Act ಪ್ರಸ್ತುತ ಸಮಾಜದಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ. ಹಾಗಿದ್ದರೂ PTCL Act ಗೆ ಕೆಲವು ಜಾಗ ಅನ್ವಯ ಆಗಲಾರದು ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

What is PTCL Act?

ಪಿಟಿಸಿಎಲ್ ಕಾಯ್ದೆ (PTCL Act) ಎಂದರೆ ಅನುಸೂಚಿತ ಜಾತಿ ಮತ್ತು ವರ್ಗದವರಿಗಾಗಿ ಮೀಸಲಿಟ್ಟ ಜಾಗವನ್ನು ವರ್ಗಾವಣೆ ಮಾಡುವುದನ್ನು ಪ್ರಶ್ನಿಸುವ ಕಾಯ್ದೆ ಇದಾಗಿದೆ. ಬಹಳ ಹಿಂದೆ ಸಮಾಜದ ಶೋಷಣೆಗೆ ಒಳಗಾದ ವರ್ಗವನ್ನು ಬಲಪಡಿಸಬೇಕು ಎಂಬ ಉದ್ದೇಶಕ್ಕೆ ಸರಕಾರವೇ ಸ್ವಲ್ಪ ಜಮೀನನ್ನು (Land) ನೀಡಿ ಸಾಗುವಳಿ ಮಾಡಲು ಅವಕಾಶ ನೀಡಿದೆ. ಅಂತಹ ಜಮೀನನ್ನು ಮೈಸೂರು ಸರಕಾರ ನೀಡಿದ್ದು 15-20 ವರ್ಷ ಯಾವುದೆ ತರ ಮಾರಾಟ ಮಾಡಬಾರದು ಎಂಬ ನಿಯಮ ಕೂಡ ವಿಧಿಸಿದೆ.

ಯಾವಾಗ ಬಂತು?

ಆದರೆ ಕಾಲ ಕ್ರಮೇಣ ಇಂತಹ ಭೂಮಿಯನ್ನು ಮೇಲ್ವರ್ಗದವರು ದೌರ್ಜನ್ಯ ಮಾಡಿ ಅವರಿಂದ ಕಡಿಮೆ ಹಣಕ್ಕೆ ಪಡೆದು ಸೇಲ್ ಮಾಡಿದ್ದಾರೆ.ಇದನ್ನು ಮನಗಂಡ ಸರಕಾರವು 1978ರಂದು ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಮೀಸಲಾಗಿದ್ದ ಜಾಗದ ವರ್ಗಾವಣೆಗೆ ಸಂಬಂಧಿಸಿದ ನೂತನ ಕಾಯ್ದೆ ಜಾರಿಗೆ ತರಲು ಮುಂದಾಗಲಾಗುತ್ತಿದೆ. ಅನುಸೂಚಿತ ಜಾತಿ ಮತ್ತು ವರ್ಗಕ್ಕೆ ಅನುಕೂಲ ಆಗಲಿ ಎಂಬ ಉದ್ದೇಶಕ್ಕೆ PTCL Act ಜಾರಿಗೆ ತರಲಾಯಿತು.

advertisement

ಸರಕಾರದ ಅನುಮೋದನೆ ಅಗತ್ಯ:

 

Image Source: Prajavani

 

PTCL Act ಪ್ರಕಾರ ಪರಿಶಿಷ್ಟ ಜತಿ ಮತ್ತು ವರ್ಗಕ್ಕಾಗಿ ನೀಡಿದ್ದ ಭೂಮಿಯನ್ನು ಯಾರು ಕೂಡ ನೇರವಾಗಿ ಮಾರಾಟ ಮಾಡಬಾರದು ಅದನ್ನು ಮಾರಬೇಕಾದರೂ ಸರಕಾರದ ಸಮ್ಮತಿ ಪಡೆಯ ಬೇಕು ಎಂಬ ನಿಯಮ ಬಂದಿದೆ. ಹಾಗಾಗಿ ಇಂತಹ ಸಮುದಾಯದ ಮೇಲಿನ ದೌರ್ಜನ್ಯ ತಡೆದು ಸಮಾನತೆ ಕಾಪಾಡಲಾಗುತ್ತಿದೆ. ಒಪ್ಪಿಗೆ ಪಡೆಯದೆ ವರ್ಗಾಯಿಸಿದ್ದ ಜಮೀನು ಭೂಮಿ ಎಲ್ಲ ವಾಪಾಸ್ಸು ನೀಡಲಾಯಿತು. ಹಾಗಾಗಿ ಆಸ್ತಿ ಕಳೆದುಕೊಂಡವರಿಗೆ ಮತ್ತೆ ಆಸ್ತಿ ಸಿಕ್ಕಂತಾಗಿದೆ.

ಯಾವುದಕ್ಕೆ ಅನ್ವಯ ಆಗದು?

ಈ ಕಾಯ್ದೆ ST,SC ಸಮುದಾಯಕ್ಕೆ ಸೇರಿದ್ದಾಗಿದೆ.

  • ST, SC ಸಮುದಾಯದವರು ತಾವೇ ತಮ್ಮ ಸ್ವಂತ ಹಣದಿಂದ ಖರೀದಿ ಮಾಡಿದ್ದ ಜಾಗಕ್ಕೆ ಈ ನಿಯಮ ಅನ್ವಯ ಆಗಲಾರದು.
  • ವ್ಯವಸಾಯಕ್ಕೆ ಎಂದು ನೀಡಿದ್ದ ಜಾಗದಲ್ಲಿ ವ್ಯವಸಾಯೇತರ ಚಟುವಟಿಕೆ ಮಾಡಿದರೆ ಆಗ ಕೂಡ ಈ ನಿಯಮ ಅನ್ವಯ ಆಗದು.
  • ಸರಕಾರದಿಂದ ನೀಡಲಾಗಿದ್ದ ಜಮೀನನ್ನು ಸರಕಾರವು ಅಭಿವೃದ್ಧಿ ಚಟುವಟಿಕೆಗಾಗಿ ವಾಪಾಸ್ಸು ಪಡೆದಿದ್ದರೆ ಬಳಿಕ ಬೇರೆ ಕಡೆ ಜಾಗ ನೀಡಿದ್ದರೆ ಅಂತಹ ಭೂಮಿಗೂ ಈ ನಿಯಮ ಅನ್ವಯ ಆಗಲಾರದು.
  • ಬ್ಯಾಂಕಿನಿಂದ ಈ ಜಾಗದ ಮೇಲೆ ಸಾಲ ಪಡೆದು ಸಾಲ ತೀರಿಸದೆ ಜಮೀನು ಜಪ್ತಿ ಮಾಡುತ್ತಿದ್ದರೆ ಆಗ ಕೂಡ ಈ ನಿಯಮ ಅಪ್ಲೆ ಆಗಲಾರದು.
  • ಇಂತಹ ಜಮೀನನ್ನು ಹರಾಜಿನಲ್ಲಿ ಖರೀದಿ ಮಾಡಿದ್ದರೆ ಈ ನಿಯಮ ಅನ್ವಯ ಆಗದು.

advertisement

Leave A Reply

Your email address will not be published.